ಭಾನುವಾರ, ಫೆಬ್ರವರಿ 23, 2020
19 °C
ಕಾಳಗಿ: ಕಳಸಾರೋಹಣ, ಕಲ್ಯಾಣ ಮಂಟಪ ಉದ್ಘಾಟಸಿದ ಸಂಸದ ಉಮೇಶ ಜಾಧವ

ದೇವಾಂಗ ಜನಾಂಗಕ್ಕೆ ನೆರವು: ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾಳಗಿ (ಕಲಬುರ್ಗಿ ಜಿಲ್ಲೆ: ‘ನೇಕಾರ (ದೇವಾಂಗ) ಜನಾಂಗಕ್ಕೆ ಏನೇ ಅನುಕೂಲತೆ ಬೇಕಾಗಿದ್ದರೆ ತಾವು ಸ್ಪಂದಿಸುವುದಾಗಿ ಕಲಬುರ್ಗಿ ಸಂಸದ ಡಾ.ಉಮೇಶ ಜಾಧವ ಭಾನುವಾರ ಇಲ್ಲಿ ಭರವಸೆ ನೀಡಿದರು.

ಬನಶಂಕರಿ ದೇವಸ್ಥಾನದ ಗೋಪುರದ ಕಳಸಾರೋಹಣ ಮತ್ತು ಕಲ್ಯಾಣ ಮಂಟಪ ಉದ್ಘಾಟನೆಯ ಬಳಿಕ ಧಾರ್ಮಿಕ ಚಿಂತನಾ ಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಮುಖ್ಯಮಂತ್ರಿ ಬಿ.ಎಸ್ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ದೇವರ ದಾಸಿಮಯ್ಯ ಜಯಂತಿ ಜಾರಿಗೆ ತಂದಿದೆ. ನೇಕಾರರ ಸಾಲ ಮನ್ನಾ ಮಾಡಿ ಜನಾಂಗದ ಅಭಿವೃದ್ಧಿಗೆ ಕ್ರಮ ಕೈಗೊಂಡಿದೆ. ತಾವೂ ಸಹ ಸರ್ಕಾರದ ಪ್ರತಿ ಸಭೆಯಲ್ಲಿ ಈ ಜನಾಂಗದ ಅಭಿವೃದ್ಧಿಗೆ ಪೂರಕವಾಗಬಲ್ಲ ಯೋಜನೆಗಳನ್ನು ರೂಪಿಸಲು ಧ್ವನಿ ಎತ್ತಿದ್ದೇನೆ’ ಎಂದು ಹೇಳಿದರು.

ಶಾಸಕ ಡಾ.ಅವಿನಾಶ ಜಾಧವ ಮಾತನಾಡಿ, ದೇವಾಂಗ ಸಮಾಜದ ಉಪಯೋಗಕ್ಕಾಗಿ ಪ್ರವಾಸೋದ್ಯಮ ಇಲಾಖೆಯಡಿ ₹25 ಲಕ್ಷದ ಯಾತ್ರಿ ನಿವಾಸದ ಮಂಜೂರಾತಿಗೆ ಪ್ರಯತ್ನ ಮಾಡುವೆ’ ಎಂದು ಆಶ್ವಾಸನೆ ನೀಡಿದರು.

ಸಾನ್ನಿಧ್ಯ ವಹಿಸಿದ ಹಂಪಿ ಹೇಮಕೂಟ ಮಹಾ ಸಂಸ್ಥಾನ ಗಾಯತ್ರಿ ಪೀಠದ ದಯಾನಂದಪುರಿ ಮಹಾ ಸ್ವಾಮೀಜಿ ಅವರು ಕಳಸಾರೋಹಣ ನೆರವೇರಿಸಿ, ಕಲ್ಯಾಣಮಂಟಪ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಅಕ್ಕಲಕೋಟ ಮಠದ ಚಿಕ್ಕರೇವಣಸಿದ್ದ ಶಿವಶರಣರು, ಭರತನೂರಿನ ಚಿಕ್ಕ ಗುರುನಂಜೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು. ಮೈಂದರ್ಗಿ ಮಠದ ಅಭಿನವ ರೇವಣಸಿದ್ಧ ಶಿವಶರಣರು, ಸುಗೂರಿನ ಪವನದಾಸ ಮಹಾರಾಜ, ದೇವಾಂಗಮಠದ ಶಂಕ್ರಯ್ಯಸ್ವಾಮಿ, ಗೊಬ್ಬೂರವಾಡಿ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.

ಮುಖಂಡ ರವೀಂದ್ರ ಕಲಬುರ್ಗಿ, ಚಂದ್ರಶೇಖರ ಸುಲ್ತಾನಪುರ, ಡಾ.ರಮೇಶ ಮಾಳಾ, ವಿನೋದಕುಮಾರ ಜನೆವಾರ, ರಾಜಶೇಖರ ಕುದೂರ, ವಿಜಯಕುಮಾರ ಬಾಪ್ರೆ, ಚಂದ್ರಕಾಂತ ಜಾಧವ, ರಮೇಶ ಕಿಟ್ಟದ, ನಿಂಬೆಣ್ಣಪ್ಪ ಕೋರವಾರ, ಅಬ್ದುಲ್ ಜಬ್ಬರ ಸಾಗರ, ರತ್ನಮ್ಮ ಗುತ್ತೇದಾರ, ಶಿವಲೀಲಾ ಸಲಗೂರ, ಭೀಮಬಾಯಿ ಕಣ್ಣಿ, ನಾಗರಾಜ ಹಾವಗುಂಡಿ, ನಾಗರಾಜ ಕೊರವಿ, ಅಗಳಿ ಪಂಪಾಪತಿ, ಭೀಮಾಶಂಕರ ರಾಜಗೊಂಡೆ, ರಾಮು ರಾಠೋಡ ವೇದಿಕೆಯಲ್ಲಿ ಇದ್ದರು.

ಬಾಲಚಂದ್ರ ಕಾಂತಿ ಅಧ್ಯಕ್ಷತೆ ವಹಿಸಿದ್ದರು. ಶಿವಲೀಲಾ ಅಷ್ಟಗಿ ಪ್ರಾರ್ಥಿಸಿದರು. ಸಿದ್ದಾರೆಡ್ಡಿ ಸಂಗೋಳಗಿ ನಿರೂಪಿಸಿದರು. ಹಣಮಂತ ಕಣ್ಣಿ ಸ್ವಾಗತಿಸಿದರು. ಹನುಮಂತಪ್ಪ ಕಾಂತಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು