ಆಳಂದ: ‘ಸುರಕ್ಷಿತ ಆರೋಗ್ಯಕ್ಕಾಗಿ ವೈದ್ಯರು ನೀಡುವ ಯಾವದೇ ಸಲಹೆ, ಮಾರ್ಗದರ್ಶನವನ್ನು ರೋಗಿಗಳು ಪಾಲಿಸುವುದು ಮುಖ್ಯವಾಗಿದೆ’ ಎಂದು ದ ಬ್ರಿಡ್ಜ್ ಪಬ್ಲಿಕ್ ಶಾಲೆಯ ಅಧ್ಯಕ್ಷ ರಫಿಕ್ ಇನಾಂದಾರ ತಿಳಿಸಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಂಗಳವಾರ ರಾಷ್ಟ್ರೀಯ ವೈದ್ಯರ ದಿನಾಚರಣೆಯಲ್ಲಿ ವಿದ್ಯಾರ್ಥಿಗಳೊಂದಿಗೆ ವೈದ್ಯರನ್ನು ಸನ್ಮಾನಿಸಿ ಅವರು ಮಾತನಾಡಿದರು.

ಆಡಳಿತಾಧಿಕಾರಿ ಮಹೇಶ ಪಾಟೀಲ ಮಾತನಾಡಿ, ‘ಒತ್ತಡದ ಜೀನವ ಶೈಲಿ, ಆಹಾರ, ನೀರು ಹಾಗೂ ಪರಿಸರವು ಕಲುಷಿತಗೊಂಡಂತೆ ನಮ್ಮ ಆರೋಗ್ಯದಲ್ಲಿ ಸಮಸ್ಯೆಗಳು ಹೆಚ್ಚುತ್ತಿವೆ. ಅಪಘಾತ, ದುಶ್ಚಟಗಳಿಂದ ಅನಾರೋಗ್ಯವು ಕಾಡುತ್ತಿದೆ. ಹೀಗಾಗಿ ವೈದ್ಯರ ಸೇವೆ, ಆಸ್ಪತ್ರೆಗಳ ತುರ್ತು ಸೇವೆ, ಸೌಲಭ್ಯಗಳು ಪ್ರತಿಯೊಬ್ಬರಿಗೂ ಲಭಿಸುವದು ಕಷ್ಟವಾಗುತ್ತಿದೆ. ಅದಕ್ಕಾಗಿ ಉತ್ತಮ ಆರೋಗ್ಯಕ್ಕೆ ಮುನ್ನೆಚ್ಚೆರಿಕೆ ಕ್ರಮಗಳು ಅಗತ್ಯವಾಗಿವೆ’ ಎಂದರು.

ಆಸ್ಪತ್ರೆ ವೈದ್ಯ ಉಮಾಕಾಂತ ಮಾತನಾಡಿದರು.

ವಿದ್ಯಾರ್ಥಿಗಳಾದ ಅಲೀಷಾ, ಜಾಯನಾ ವೈದ್ಯರ ಸೇವೆ ಮಹತ್ವದ ಕುರಿತು ಮಾತನಾಡಿದರು. ವೈದ್ಯರಾದ ಅಮರ, ಪ್ರಮೋದ, ಇರ್ಫಾನ್ ಹಾಗೂ ಶಿಕ್ಷಕರಾದ ಜಗದೀಶ ಕೋರೆ, ಅಭಿಷೇಕ, ಇರಮ್ ಶಾಪೀಯಾ ಉಪಸ್ಥಿತರಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.