ಕಾರಟಗಿ: ಪಟ್ಟಣದ ಕೇಂಬ್ರಿಡ್ಜ್ ಪಬ್ಲಿಕ್ ಶಾಲೆಯಲ್ಲಿ ರಾಷ್ಟ್ರೀಯ ವೈದ್ಯರ ದಿನವನ್ನು ಮಂಗಳವಾರ ವಿನೂತನ ರೀತಿಯಲ್ಲಿ ಮಕ್ಕಳು ಆಚರಿಸಿದರು.

ಶಾಲೆಯನ್ನೇ ಆಸ್ಪತ್ರೆ ಮಾದರಿಯಲ್ಲಿ ಸಿದ್ಧಪಡಿಸಿ, ಮಕ್ಕಳು ವಿವಿಧ ತಜ್ಞ ವೈದ್ಯರ ವೇಷಭೂಷಣಗಳೊಂದಿಗೆ ಶಾಲೆಯ ಶಿಕ್ಷಕರ, ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಮಾಡುವುದರೊಂದಿಗೆ ಗಮನ ಸೆಳೆದರು.

ಬಳಿಕ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ತೆರಳಿ ವೈದ್ಯರನ್ನು ಭೇಟಿ ಮಾಡಿ ಶುಭಾಶಯ ಕೋರಿದರು.

ವೈದ್ಯರ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನೆರವೇರಿಸಿದರು. ಶಾಲೆಯ ಪ್ರಾಚಾರ್ಯ, ಶಿಕ್ಷಕರು, ವಿದ್ಯಾರ್ಥಿಗಳು, ಸಿಬ್ಬಂದಿ ಸರದಿಯಲ್ಲಿ ನಿಂತು ಆರೋಗ್ಯ ತಪಾಸಣೆಗೊಳಗಾದ ದೃಶ್ಯ ಗಮನ ಸೆಳೆಯಿತು. ಆಡಳಿತ ಮಂಡಳಿ ಮುಖ್ಯಸ್ಥರು, ಪಾಲಕರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.