ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫಜಲಪುರ: ಅಸ್ತಿತ್ವದಲ್ಲಿ ಇಲ್ಲದ ಕುಡಿಯುವ ನೀರಿನ ಸಹಾಯವಾಣಿ

Published 7 ಮಾರ್ಚ್ 2024, 16:10 IST
Last Updated 7 ಮಾರ್ಚ್ 2024, 16:10 IST
ಅಕ್ಷರ ಗಾತ್ರ

ಅಫಜಲಪುರ: ತಾಲ್ಲೂಕಿನ ಗ್ರಾಮೀಣ ಜನರ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಲ್ಪಿಸಲು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದ ಕಚೇರಿಯಲ್ಲಿ ಸಹಾಯವಾಣಿ (7760208044) ಆರಂಭಿಸಲಾಗಿದೆ. ಆದರೆ ಈ ಸಂಖ್ಯೆಗೆ ಕರೆ ಮಾಡಿದರೆ ಕೆಲವೊಮ್ಮೆ ‘ಸರಿ ಇಲ್ಲ’ ಎಂದು ಇನ್ನೂ ಕೆಲ ಸಲ ‘ಈ ಸಂಖ್ಯೆ ಅಸ್ತಿತ್ವದಲ್ಲಿ ಇಲ್ಲ’ ಎಂದು ಹೇಳುತ್ತದೆ.

ಸಹಾಯವಾಣಿ ಕೇಂದ್ರ ಎಲ್ಲಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಯಾವ ನಾಮಫಲಕವನ್ನೂ ಹಾಕಿಲ್ಲ. ದೂರವಾಣಿ ಸಂಪರ್ಕ ವ್ಯವಸ್ಥೆ ಇಲ್ಲ. ಸಾಮಾನ್ಯವಾಗಿ ಕುಡಿಯುವ ನೀರಿನ ಸಹಾಯವಾಣಿ ಕೇಂದ್ರಕ್ಕೆ ಒಂದು ಲ್ಯಾಂಡ್ ಫೋನ್ ಇರುತ್ತದೆ. ಒಬ್ಬ ಸಿಬ್ಬಂದಿ ಇರುತ್ತಾರೆ. ಸಮಸ್ಯೆಗಳನ್ನ ಬರೆದುಕೊಳ್ಳಲು ದಾಖಲೆ ಪುಸ್ತಕವಿರುತ್ತದೆ. ಇದು ಯಾವುದು ಇಲ್ಲಿ ಇಲ್ಲ. ಕಾಟಾಚಾರಕ್ಕೆ ಪತ್ರಿಕೆಗಳಿಗೆ ‘ಕುಡಿಯುವ ನೀರಿನ ಸಹಾಯವಾಣಿ’ ಎಂದು ಸಂಖ್ಯೆ ನೀಡಿದ್ದಾರೆ ಎಂದು ಗೊತ್ತಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಪ್ರಜಾವಾಣಿ ಪ್ರತಿನಿಧಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಉಪ ವಿಭಾಗದ ಪ್ರಭಾರ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಬಾಬುರಾವ್ ಜ್ಯೋತಿ ಅವರಿಗೆ ಕರೆ ಮಡಿದರೆ ‘ಯಾವ ದೂರವಾಣಿ ಸಂಖ್ಯೆ ಇದೆ ಎಂದು ಪರಿಶೀಲಿಸುತ್ತೇವೆ. ಕೇಂದ್ರವನ್ನ ನೋಡಿಕೊಳ್ಳುವ ಸಿಬ್ಬಂದಿಗೆ ಆರೋಗ್ಯ ಸರಿ ಇಲ್ಲ’ ಎಂದು ಹಾರಿಕೆ ಉತ್ತರ ನೀಡಿದರು.

‘ಬಹುತೇಕ ಹಳ್ಳಿ ಹಳ್ಳಿಗಳ ನೀರಿನ ಮೂಲಗಳು ಬತ್ತಿವೆ. ಕುಡಿಯುವ ನೀರಿಗಾಗಿ ಜಮೀನುಗಳಿಗೆ ಅಲೆದಾಟ ಆರಂಭವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕುಡಿಯುವ ನೀರಿನ ಸಹಾಯವಾಣಿ ಕೇಂದ್ರದ ಚಾಲ್ತಿಯಲ್ಲಿರುವ ಸರಿಯಾದ ಸಂಖ್ಯೆ ಪ್ರಕಟಿಸಬೇಕು’ ಎಂದು ತಾಲ್ಲೂಕು ಜಲ ಸಮಿತಿ ಒಕ್ಕೂಟದ ಅಧ್ಯಕ್ಷ ಸಿದ್ದು ಧಣ್ಣೂರು, ಮಾಶಾಳ ಗ್ರಾಮ ಪಂಚಾಯಿತಿ ಸದಸ್ಯ ಶಿವು ಪ್ಯಾಟಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT