ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಿಕ್ಷಕರು ತಮ್ಮ ಶಾಲಾ ಅವಧಿಯ ಬಳಕೆಯ ಸಮೀಕ್ಷಾ ಅಧ್ಯಯನಕ್ಕಾಗಿ ಬೋಧನಾ ಮತ್ತು ಬೋಧನೇತರ ಕಾರ್ಯಗಳನ್ನು ನಿತ್ಯವೂ ‘ಶಿಕ್ಷಕರ ದಿನಚರಿ’ ನಮೂನೆಯಲ್ಲಿ ದಾಖಲಿಸಬೇಕಿದೆ.

ಸರ್ಕಾರವು ಶಿಕ್ಷಕರ ಹೆಗಲ ಮೇಲೆ ಬೋಧನೆಯ ಜತೆಗೆ ಅನ್ಯ ಚಟುವಟಿಕೆಗಳ ಭಾರವನ್ನೂ ಹೊರಿಸುತ್ತಿರುವುದರಿಂದ ಪಠ್ಯ ಕೆಲಸ ಹಾಗೂ ಮಕ್ಕಳ ಕಲಿಕೆಯ ಮೇಲೆ ಪರಿಣಾಮ ಬೀರುತ್ತಿದೆ. ಬೋಧಿಸುವುದಕ್ಕಿಂತ ಬೋಧಕೇತರ ಕೆಲಸಗಳಲ್ಲಿಯೇ ಶಿಕ್ಷಕರು ಹೆಚ್ಚು ತೊಡಗಿಕೊಳ್ಳುತ್ತಾರೆ ಎಂಬ ಮಾತುಗಳು ಪದೇ ಪದೇ ಕೇಳಿ ಬರುತ್ತಿವೆ.

ಶಾಲಾ ಅವಧಿಯಲ್ಲಿ ಕಾಯಂ ಮತ್ತು ಅತಿಥಿ ಶಿಕ್ಷಕರ ಕೆಲಸಗಳನ್ನು ಒರೆಗೆ ಹಚ್ಚಲು ಹಾಗೂ ಅವರಲ್ಲಿ ಶಿಸ್ತು ಮತ್ತು ಉತ್ತರದಾಯಿತ್ವವನ್ನು ಹೆಚ್ಚಿಸಲು ಶಾಲಾ ಶಿಕ್ಷಣ ಇಲಾಖೆಯ ಕಲಬುರಗಿ ವಿಭಾಗದ ಕಚೇರಿಯು ಶಾಲಾ ಅವಧಿಯ ಬಳಕೆಯ ಸಮೀಕ್ಷಾ ಅಧ್ಯಯನಕ್ಕೆ ಮುಂದಾಗಿದೆ.

‘ಶಿಕ್ಷಕರ ದಿನಚರಿ’ ನಮೂನೆಯಲ್ಲಿ ಬೋಧನಾ ಹಾಗೂ ಬೋಧನೇತರ ಕಾರ್ಯಗಳಾಗಿ ವಿಭಾಗಿಸಿದ್ದು, ಮಾಹಿತಿಯ ಭರ್ತಿಗಾಗಿ ಒಂಬತ್ತು ಕಾಲಂಗಳನ್ನು ಶಿಕ್ಷಕರ ಮುಂದೆ ಇರಿಸಿದೆ. ಕಾಲಂ 1ರಲ್ಲಿ ಅವಧಿ ಮತ್ತು ಕಾಲಂ 2ರಲ್ಲಿ ಸಮಯವನ್ನು ದಾಖಲಿಸಬೇಕು.

ಬೋಧನಾ ಕಾರ್ಯದ ಕಾಲಂ 3 ಮತ್ತು 4ರಲ್ಲಿ ತರಗತಿಯಲ್ಲಿ ಶಿಕ್ಷಕರು ಪಾಠ ಮಾಡಿದ ಸಮಯವನ್ನು ಭರ್ತಿ ಮಾಡಬೇಕು. ಇದರಿಂದ ಒಂದು ವಾರದಲ್ಲಿನ ಪಾಠ ಯೋಜನೆಗೆ ಅನುಗುಣವಾಗಿ ಶಿಕ್ಷಕರು ಎಷ್ಟು ತರಗತಿಗಳು ನಡೆಸಿದ್ದಾರೆ ಎಂಬುದು ಗೊತ್ತಾಗುತ್ತದೆ. ಬೋಧನೆಗೆ ಸಂಬಂಧಿಸಿದ ಮಕ್ಕಳ ಮನೆ ಕೆಲಸವನ್ನು ತಿದ್ದುವುದು, ಉತ್ತರ ಪತ್ರಿಕೆಗಳ ಮೌಲ್ಯಮಾಪನ, ಮುಂದಿನ ದಿನ ಅಥವಾ ಅವಧಿಯ ತರಗತಿಗಳಿಗೆ ಪೂರ್ವಸಿದ್ಧತೆಯನ್ನು ಶಿಕ್ಷಕರ ಕೋಣೆಯಲ್ಲಿ ಕುಳಿತು ನಿರ್ವಹಿಸುತ್ತಾರೆ. ಅದನ್ನು ಕಾಲಂ 5 ಮತ್ತು 6ರಲ್ಲಿ ಇತರೆ ಬೋಧನಾ ಕಾರ್ಯದಡಿ ಭರ್ತಿ ಮಾಡಬೇಕು.

ಬೋಧನೆಗೆ ಸಂಬಂಧಿಸದ ಕಾರ್ಯಗಳನ್ನು ಕಾಲಂ 7 ಮತ್ತು 8ರಲ್ಲಿ ದಾಖಲಿಸಬೇಕು. ಪೇಪರ್ ವರ್ಕ್, ಸ್ಯಾಟ್ ಮಾಹಿತಿ ಭರ್ತಿ, ಬಿಸಿಯೂಟ ಯೋಜನೆಯ ಮೊಟ್ಟೆ, ಬಾಳೆಹಣ್ಣು ಮಾಹಿತಿ ಭರ್ತಿಯ ಇತರೆ ಕೆಲಸಗಳನ್ನು ದಾಖಲಿಸಬೇಕು. ಮನೆ–ಮನೆಗೆ ಭೇಟಿ ನೀಡಿ ಜಾತಿಗಣತಿಯಲ್ಲಿ ಭಾಗವಹಿಸಿದ್ದನ್ನು ಕಾಲಂ 7ರಲ್ಲಿ ನಮೂದಿಸಬೇಕು. ಪಾಲ್ಗೊಂಡಿದ್ದ ಸಮಯವನ್ನೂ ದಾಖಲಿಸಿರಬೇಕು.

ಶಿಸ್ತು ಕ್ರಮದ ಭಯದಲ್ಲಿ ಶಿಕ್ಷಕರು ಸುಳ್ಳು ಅಥವಾ ತಪ್ಪು ಮಾಹಿತಿಯನ್ನು ಭರ್ತಿ ಮಾಡುವಂತಿಲ್ಲ. ಶಿಕ್ಷಕರು ಮಾಹಿತಿ ಸಂಗ್ರಹಣೆಯಂತಹ ಅನ್ಯ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದನ್ನು ಮುಖ್ಯಶಿಕ್ಷಕರು ಮರೆಮಾಚುವಂತಿಲ್ಲ ಎಂದು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ಶಿಕ್ಷಕರು ತಮ್ಮ ದಿನಚರಿಯನ್ನು ನಿತ್ಯ 5ರಿಂದ 10 ನಿಮಿಷಗಳಲ್ಲಿ ಭರ್ತಿ ಮಾಡಬಹುದು. ವಾರಕ್ಕೆ ಒಮ್ಮೆ ಅದನ್ನು ಮುಖ್ಯಶಿಕ್ಷಕರು ದೃಢೀಕರಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

Quote -

ಎಲ್ಲರಿಗೂ ಶಿಕ್ಷಕರ ದಿನಚರಿ ಭರ್ತಿ ಮಾಡಲು ಆದೇಶಿಸಿದ್ದರಿಂದ ಕೆಲಸದ ಹೊರೆ ಹೆಚ್ಚಾಗುತ್ತದೆ. ಆಯ್ದ ಶಾಲೆಗಳಲ್ಲಿ ಜಾರಿಗೆ ತಂದಿದ್ದರೆ ಉತ್ತಮ ಆಗುತ್ತಿತ್ತು ಎಂಬುದು ಬಹುತೇಕ ಶಿಕ್ಷಕರ ಅಭಿಪ್ರಾಯ

ಮಹೇಶ ಹೂಗಾರ ಪ್ರೌಢಶಾಲಾ ಸಹಶಿಕ್ಷಕ ಸಂಘ ಕಲಬುರಗಿ ಜಿಲ್ಲಾ ಘಟಕದ ಅಧ್ಯಕ್ಷ

Cut-off box - ಪ್ರಾಥಮಿಕ ಶಾಲೆ ಶೇ 10ರಷ್ಟು ಪ್ರೌಢಶಾಲೆ ಶೇ 20ರಷ್ಟು ಆಯ್ಕೆ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಕಾರ್ಯನಿರ್ವಹಿಸುವ ಸಂಖ್ಯೆಗೆ ಅನುಗುಣವಾಗಿ ಶೇ 10ರಷ್ಟು ಕಾಯಂ ಹಾಗೂ ಶೇ 10ರಷ್ಟು ಅತಿಥಿ ಶಿಕ್ಷಕರ ಸಂಖ್ಯೆಯನ್ನು ಆಧರಿಸಿ ಬೋಧಕೇತರ ಕಾರ್ಯವನ್ನು ಸಮೀಕ್ಷಾ ಅಧ್ಯಯನದಲ್ಲಿ ವರದಿ ಮಾಡಬೇಕು ಎಂದು ಆಯುಕ್ತರು ಆದೇಶದಲ್ಲಿ ಸೂಚಿಸಿದ್ದಾರೆ. ಪ್ರೌಢಶಾಲೆಗಳಲ್ಲಿಯೂ ಕಾಯಂ ಮತ್ತು ಅತಿಥಿ ಶಿಕ್ಷಕರ ತಲಾ ಶೇ 20ರಷ್ಟು ಸಮೀಕ್ಷಾ ಅಧ್ಯಯನ ಕೈಗೊಂಡು ವರದಿ ಸಿದ್ಧಪಡಿಸಬೇಕು. ಜೂನ್ 1ರಿಂದ ಅನ್ವಯ ಆಗುವಂತೆ ಜಾರಿಗೆ ಬಂದಿದ್ದು ಈಗಾಗಲೇ ಬಹುತೇಕ ಶಾಲೆಗಳಲ್ಲಿ ಆರಂಭವಾಗಿದೆ. ಇದು ಖಾಸಗಿ ಶಾಲೆಗಳಿಗೆ ಅನ್ವಯಿಸುವುದಿಲ್ಲ ಎಂದಿದೆ.

Cut-off box - ‘ನೋಡಲ್ ಅಧಿಕಾರಿಗಳಿಂದ ಪರಿಶೀಲನೆ’ ‘ಶಿಕ್ಷಕರ ದಿನಚರಿ ಮಾಹಿತಿಯನ್ನು ಮುಖ್ಯಶಿಕ್ಷಕರು ಎರಡು ವಾರಗಳಿಗೆ ಒಮ್ಮೆ ಎಲ್ಲಾ ಡಯಟ್ಗಳ ನೋಡಲ್ ಅಧಿಕಾರಿಗಳಿಗೆ ಸಲ್ಲಿಸುತ್ತಾರೆ. ಅವುಗಳನ್ನು ನೋಡಲ್ ಅಧಿಕಾರಿಗಳು ಅಥವಾ ಬಿಇಒಗಳು ಪರಿಶೀಲನೆ ಮಾಡುವರು’ ಎಂದು ಶಾಲಾ ಶಿಕ್ಷಣ ಇಲಾಖೆಯ ಕಲಬುರಗಿ ವಿಭಾಗದ ಹೆಚ್ಚುವರಿ ಆಯುಕ್ತ ಡಾ.ಆಕಾಶ್ ಶಂಕರ್ ‘ಪ್ರಜಾವಾಣಿ’ಗೆ ತಿಳಿಸಿದರು. ‘ಶಿಕ್ಷಕರ ದಿನಚರಿ ಮಾಹಿತಿಯನ್ನು ಎಲ್ಲಾ ಡಯಟ್ಗಳು ಪ್ರತಿ ತಿಂಗಳು 5ನೇ ತಾರೀಖಿನೊಳಗೆ ಜಿಲ್ಲಾವಾರು ಸಂಗ್ರಹಿಸಿ ಆಯುಕ್ತರ ಕಾರ್ಯಾಲಯಕ್ಕೆ ಸಲ್ಲಿಸಬೇಕು. ನಮ್ಮ ವಿಭಾಗದಲ್ಲಿ ಆರಂಭಿಸಿರುವ ಬೋಧನಾ ಮತ್ತು ಬೋಧನೇತರ ಕಾರ್ಯಗಳನ್ನು ದಾಖಲಿಸುವ ಶಿಕ್ಷಕರ ದಿನಚರಿಗೆ ಅನ್ಯ ವಿಭಾಗಗಳಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಈ ಬಗ್ಗೆ ಮಾಹಿತಿ ಹಂಚಿಕೊಳ್ಳುವಂತೆ ಮನವಿ ಮಾಡುತ್ತಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.