ವಾಡಿ: ‘ಪರಿಸರದ ಮೇಲೆ ದಿನೇ ದಿನೇ ಮಾನವರ ಹಸ್ತಕ್ಷೇಪ ಹೆಚ್ಚಾಗುತ್ತಿದ್ದು ಇದರಿಂದ ಇಡೀ ಜೀವಜಗತ್ತೇ ಅಪಾಯದ ಅಂಚಿಗೆ ತಲುಪುತ್ತಿದೆ. ಪರಿಸರ ಉಳಿಸಿ ಬೆಳೆಸುವುದರಲ್ಲಿ ನಮ್ಮ ಹಿತ ಅಡಗಿದೆ’ ಎಂದು ಲರ್ನಿಂಗ್ ಲಿಂಕ್ಸ್ ಫೌಂಡೇಶನ್ನ ಸಂಪನ್ಮೂಲ ವ್ಯಕ್ತಿ ಶಶಿಕುಮಾರ ಬಡಿಗೇರ ಹೇಳಿದರು.

ನಾಲವಾರ ಸಮೀಪದ ತರಕಸಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸೋಮವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಎಲ್ಎಲ್ಎಫ್ ಸಂಘಟನೆ ವತಿಯಿಂದ ಆಯೋಜಿಸಿದ್ದ ಸಸಿ ನೆಡುವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಸೋಮಶೇಖರ ಹೂಗಾರ ಮಾತನಾಡಿ, ‘ಗಿಡಮರಗಳನ್ನು ಬೆಳೆಸಿ ಪೋಷಿಸುವುದು ನಮ್ಮ ಜೀವನದ ಆದ್ಯ ಕರ್ತವ್ಯವಾಗಬೇಕು. ಪ್ರತಿ ವಿದ್ಯಾರ್ಥಿ ಮಳೆಗಾಲ ಸಮಯದಲ್ಲಿ ಒಂದೊಂದು ಗಿಡ ನೆಟ್ಟು ಅದನ್ನು ವರ್ಷಪೂರ್ತಿ ಆರೈಕೆ ಮಾಡಿ ಹೆಮ್ಮರವಾಗಿ ಬೆಳೆಸಬೇಕು’ ಎಂದರು.

ಪ್ರಾಥಮಿಕ ಮತ್ತು ಪ್ರೌಢ ವಿಭಾಗದ ಎಸ್ಡಿಎಂಸಿ ಅಧ್ಯಕ್ಷ ರಶಿದ್ ಪಟೇಲ ಹಾಗೂ ಮಹಿಮೂದ ಆಲಂ, ಸ್ಥಳೀಯ ಮುಖಂಡರಾದ ಶರಣಯ್ಯ ಸ್ವಾಮಿ ಮಠಪತಿ, ಭೀಮಾಶಂಕರ, ಪ್ರೌಢಶಾಲೆ ಮುಖ್ಯಶಿಕ್ಷಕ ರಾಜಕುಮಾರ ಚಿಂತಪಳ್ಳಿ, ಶಿಕ್ಷಕರಾದ ಮಂಜುನಾಥ ಪಾಟೀಲ, ಚಂದ್ರಶೇಖರ ಹಡಪದ, ಶಿವಾನಂದ, ಸುನೀತಾ, ನಾಗರತ್ನ ಕುಂಬಾರ, ರಮೇಶ ಜೋಶಿ, ಚಂದ್ರಕಾಂತ, ಮಲ್ಲಣ್ಣಗೌಡ ಪಾಟೀಲ ಹಾಗೂ ಇನ್ನಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.