ಭಾನುವಾರ, ಜೂನ್ 20, 2021
21 °C

ಅಬಕಾರಿ ದಾಳಿ: ಕಳ್ಳಬಟ್ಟಿ ಜಪ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಚಿತ್ತಾಪುರ ತಾಲ್ಲೂಕಿನ ಭೀಮನಳ್ಳಿ ತಾಂಡದ ಮನೆಯೊಂದರ ಮೇಲೆ ದಾಳಿ ನಡೆಸಿದ ಅಬಕಾರಿ ಸಿಬ್ಬಂದಿ 5 ಲೀಟರ್‌ ಕಳ್ಳಬಟ್ಟಿ ಸಾರಾಯಿ ಜಪ್ತಿ ಮಾಡಿದ್ದಾರೆ. 130 ಲೀಟರ್‌ ಬೆಲ್ಲದ ಕೊಳೆ ಕೂಡ ನಾಶಪಡಿಸಿದ್ದಾರೆ.

ತಾಂಡಾದ ಜೈನಾಬಾಯಿ ಸೇವು ರಾಠೋಡ ಅವರ ಮನೆಯಲ್ಲಿ ಈ ಕಳ್ಳಬಟ್ಟಿ ಪತ್ತೆಯಾಗಿದೆ. ಚಿತ್ತಾಪುರ ವಲಯ ಅಬಕಾರಿ ಎಸ್‌ಐ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಿದ್ದಾರೆ.

ಅಲ್ಲದೇ, ಶಹಾಬಾದ್‌ ಪಟ್ಟಣದ ಡಕ್ಕಾ ತಾಂಡಾ, ಸ್ಟೇಷನ್‌ ತಾಂಡಾ, ವಾಡಿ ಪಟ್ಟಣ ಮತ್ತು ಚಿತ್ತಾಪುರ ಪಟ್ಟಣದ ಹಲವಾರು ಕಡೆ ದಾಳಿ ನಡೆಸಿ ಪರಿಶೀಲಿಸಲಾಯಿತು. ಜತೆಗೆ, ಕಲಬುರ್ಗಿ ನಗರದ ಭರತನಗರ, ಮಂಗಾರವಾಡಿ ಹಾಗೂ ಸಣ್ಣೂರು ತಾಂಡಾ, ಆಶ್ರಯ ಕಾಲೊನಿ ಫಿಲ್ಟರ್‌ಬೆಡ್ ತಾಂಡಾದಲ್ಲಿಯೂ ದಾಳಿ ಮಾಡಿ ಪರಿಶೀಲನೆ ನಡೆಸಲಾಯಿತು. ಯಾವುದೇ ಅಕ್ರಮಗಳು ಕಂಡು ಬಂದಿರುವುದಿಲ್ಲ ಎಂದು ತಿಳಿಸಲಾಗಿದೆ.

ಹಳೆಯ ಕಳ್ಳಬಟ್ಟಿ ಆರೋಪಿಗಳು ಹಾಗೂ ಅವರ ಮನೆಗಳನ್ನು ಪರಿಶೀಲನೆ ಮಾಡಲಾಗಿದೆ. ಯಾವುದೇ ಅಕ್ರಮಗಳು ಕಂಡು ಬಂದಿಲ್ಲ. ಅವರು ಕಳ್ಳಬಟ್ಟಿ ಸರಾಯಿ ತಯಾರಿಕೆ ಬಿಟ್ಟು ಕೂಲಿ ಕೆಲಸದಲ್ಲಿ ತೊಡಗಿದ್ದಾರೆ ಎಂದು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.