ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೃತ ಭಾರತ ನಿಲ್ದಾಣ| ಕಲಬುರಗಿ, ವಾಡಿ ಸೇರಿ 4 ನಿಲ್ದಾಣಗಳು ಆಯ್ಕೆ

Last Updated 5 ಫೆಬ್ರುವರಿ 2023, 6:44 IST
ಅಕ್ಷರ ಗಾತ್ರ

ಕಲಬುರಗಿ: ದೀರ್ಘಾವಧಿಯ ದೃಷ್ಟಿಕೋನ ಹಾಗೂ ಮಾಸ್ಟರ್ ಪ್ಲಾನ್ ಆಧಾರಿತ ವಿಶ್ವ ದರ್ಜೆಯ ರೈಲು ನಿಲ್ದಾಣ ನಿರ್ಮಾಣದ ‘ಅಮೃತ ಭಾರತ ನಿಲ್ದಾಣ’ ಯೋಜನೆಗೆ ಜಿಲ್ಲೆಯ ನಾಲ್ಕು ನಿಲ್ದಾಣಗಳು ಆಯ್ಕೆಯಾಗಿವೆ.

ರಾಜ್ಯದ 55 ನಿಲ್ದಾಣಗಳನ್ನು ಈ ಯೋಜನೆಗೆ ಆಯ್ಕೆ ಮಾಡಿಕೊಳ್ಳ ಲಾಗಿದ್ದು, ಅದರಲ್ಲಿ ಜಿಲ್ಲೆಯ ಕಲಬುರಗಿ, ಗಾಣಗಾಪುರ ರೋಡ್, ಶಹಾಬಾದ್ ಮತ್ತು ವಾಡಿ ನಿಲ್ದಾಣಗಳಿವೆ. ಕಲ್ಯಾಣ ಕರ್ನಾಟಕ ಭಾಗದ ಯಾದಗಿರಿ, ಬೀದರ್, ಬಳ್ಳಾರಿ, ಕೊಪ್ಪಳ, ಮುನಿರಾಬಾದ್, ರಾಯಚೂರು ಮತ್ತು ಹೊಸಪೇಟೆ ನಿಲ್ದಾಣಗಳೂ ಇವೆ.

ರೈಲ್ವೆ ಸಚಿವಾಲಯವು ಕನಿಷ್ಠ ಅಗತ್ಯ ಸೌಕರ್ಯಗಳನ್ನು ಒದಗಿಸುವ ಉದ್ದೇಶದಿಂದ ಆದರ್ಶ ನಿಲ್ದಾಣಗಳನ್ನು ನಿರ್ಮಾಣ ಮಾಡುವ ಗುರಿ ಹಾಕಿಕೊಂಡಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸಂಸದ ಡಾ.ಉಮೇಶ ಜಾಧವ, ‘ಕಲಬುರಗಿ ರೈಲು ನಿಲ್ದಾಣವು ಕರ್ನಾಟಕದ 55 ನಿಲ್ದಾಣಗಳಲ್ಲಿ ಒಂದಾಗಿದೆ ಎಂದು ಹಂಚಿಕೊಳ್ಳಲು ನನಗೆ ತುಂಬಾ ಸಂತೋಷವಾಗಿದೆ. ಇದನ್ನು ಅಮೃತ ಭಾರತ ನಿಲ್ದಾಣ ಯೋಜನೆಯಡಿ ಅಭಿವೃದ್ಧಿಪಡಿಸಲಾಗುವುದು. ಈ ಹೊಸ ನಿಲ್ದಾಣವು ವಿಶ್ವ ದರ್ಜೆಯ ಸೌಲಭ್ಯಗಳು ಪಡೆಯಲಿದ್ದು, ಪ್ರಯಾಣಿಕರ ಪ್ರಯಾಣವನ್ನು ಸುಗಮ ಮತ್ತು ಸುಲಭಗೊಳಿಸುತ್ತದೆ’ ಎಂದಿದ್ದಾರೆ.

ನಿಲ್ದಾಣಗಳ ಆಧುನೀಕರಣಕ್ಕಾಗಿ ರೈಲ್ವೆ ಸಚಿವಾಲಯವು ಅಮೃತ ಭಾರತ ಸ್ಟೇಷನ್ ಹೆಸರಿನ ಹೊಸ ಯೋಜನೆ ರೂಪಿಸಿದೆ. ನಿಲ್ದಾಣದಲ್ಲಿ ಚಿಲ್ಲರೆ ಮಾರಾಟ ಮಳಿಗೆ, ಆಹಾರ ಮಳಿಗೆ, ಮನೋರಂಜನ ಕೇಂದ್ರಗಳು, ಪ್ರಯಾಣಿಕರ ತಂಗುದಾಣಗಳು ಇರಲಿವೆ. ಅನಗತ್ಯ ಅಥವಾ ಹಳೆಯ ಕಟ್ಟಡಗಳನ್ನು ಕೆಡವಿ, ಪ್ರಯಾಣಿಕರಿಗೆ ಅನುಕೂಲ ಆಗುವಂತಹ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುತ್ತದೆ.

ವಿವಿಧ ಶ್ರೇಣಿಗಳ ವೇಟಿಂಗ್ ಹಾಲ್‌, ಉತ್ತಮ ಕೆಫೆಟೇರಿಯಾ, ಒಂದು ಉತ್ಪನ್ನಕ್ಕೆ ಕನಿಷ್ಠ ಎರಡು ಮಳಿಗೆಗಳು, ಎಕ್ಸಿಕ್ಯೂಟಿವ್ ಲಾಂಜ್‌ಗಳು, ಸಣ್ಣ ವ್ಯಾಪಾರಕ್ಕೂ ಅವಕಾಶ ಇರಲಿದೆ. ಪ್ರತಿ ಬದಿಯಲ್ಲಿ ಕಲಾತ್ಮಕವಾಗಿ ವಿನ್ಯಾಸಗೊಳಿಸಲಾದ ಮಾಹಿತಿ ನೀಡುವ ಹೋರ್ಡಿಂಗ್ ಅನ್ನು ನಿರ್ಮಿಸಲಾಗುತ್ತದೆ.

ರಸ್ತೆಗಳ ವಿಸ್ತರಣೆ, ಅನಗತ್ಯ ಕಟ್ಟಡಗಳ ತೆರವು, ಉತ್ತಮವಾಗಿ ವಿನ್ಯಾಸಗೊಳಿಸಿದ ಸೂಚನಾ ಫಲಕಗಳು, ಪಾದಚಾರಿ ಮಾರ್ಗಗಳು, ವಾಹನ ನಿಲ್ದಾಣ ಪ್ರದೇಶ, ಸುಧಾರಿತ ಬೆಳಕಿನ ವ್ಯವಸ್ಥೆ ಕಲ್ಪಿಸಲಾಗುತ್ತದೆ. ನಿಲ್ದಾಣದ ವ್ಯಾಪ್ತಿಯಲ್ಲಿ ಸ್ಥಳೀಯ ಕಲೆ ಮತ್ತು ಸಂಸ್ಕೃತಿಯ ಅಂಶಗಳಿಗೂ ಅವಕಾಶ ಇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT