ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆಹಾನಿಗೆ ವೈಜ್ಞಾನಿಕ ಪರಿಹಾರ ನೀಡಿ

ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮೀತಿ ಪ್ರತಿಭಟನೆ
Last Updated 5 ನವೆಂಬರ್ 2020, 16:37 IST
ಅಕ್ಷರ ಗಾತ್ರ

ಯಾದಗಿರಿ: ಭೀಮಾ ಹಾಗೂ ಕೃಷ್ಣ ನದಿಗಳ ಪ್ರವಾಹದಿಂದ ಸಂಕಷ್ಟದಲ್ಲಿರುವ ಜಿಲ್ಲೆಯ ರೈತರಿಗೆ ರಾಜ್ಯ ಸರ್ಕಾರ ವೈಜ್ಞಾನಿಕ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮೀತಿಯ ಜಿಲ್ಲಾ ಘಟಕದ ವತಿಯಿಂದ ನಗರದ ನೇತಾಜಿ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.

ಮಾನವ ಸರಪಳಿ ನಿರ್ಮಿಸು ರಸ್ತೆ ತಡೆ ನಡೆಸಿದ ಕಾರ್ಯಕರ್ತರು ಘೋಷಣೆ ಕೂಗಿದರು. ಮುಖ್ಯಮಂತ್ರಿಗಳು ಪ್ರವಾಹ ಹಾನಿಯ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಆದರೆ ಅವರಿಗೆ ನೈಜವಾದ ಹಾನಿಯ ಹಾಗೂ ಸಮಸ್ಯೆಯ ಪ್ರಮಾಣ ತಿಳಿದಿಲ್ಲ. ಜಿಲ್ಲಾಧಿಕಾರಿಗಳು ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದರೆ ಸಾಲದು, ಗ್ರಾಮೀಣ ಪ್ರದೇಶಗಳಿಗೆ ಅವರು ಬೇಟಿನೀಡಿ ಪರಿಶೀಲಿಸಲ್ಲಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಅತಿವೃಷ್ಟಿ ಹಾಗೂ ಪ್ರವಾಹದಿಂದ ಮನೆಗಳು ಕುಸಿದಿದ್ದು, ಅಂತಹ ಮನೆಗಳ ಮರು ನಿರ್ಮಾಣ ಮಾಡಿಕೊಡಬೇಕು, ಕೂಡಲೇ ಎಪಿಎಂಸಿ ಕಾಯ್ದೆ, ಭೂ ಸುಧಾರಣಾ ಕಾಯ್ದೆಯನ್ನು ಹಿಂತೆಗೆದಕೊಳ್ಳಬೇಕು, ಜಿಲ್ಲೆಗೆ ನೆರಯೆ ರಾಜ್ಯಗಳಿಂದ ಆಗಮಿಸಿರುವ ಭತ್ತ ಕಟಾವು ಯಂತ್ರಗಳ ಮಾಲಿಕರು ಅಗತ್ಯ ಹಣಕಿಂತ ಹೆಚ್ಚಾಗಿ ಬಾಡಿಗೆ ಪಡೆಯುತ್ತಿದ್ದು, ಅದಕ್ಕೆ ಜಿಲ್ಲಾಡಳಿತ ಕಡಿವಾಣಹಾಕಬೇಕು, ಭತ್ತ ಹಾಗೂ ಹತ್ತಿ ಬೆಳೆಗಳ ಮಾರಾಟಕ್ಕೆ ಸರ್ಕಾರ ಎಲ್ಲಾ ಹೋಬಳಿಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆದು ಸೂಕ್ತ ಬೆಂಬಲ ಬೆಲೆ ನೀಡಬೇಕು, ಆಲಮಟ್ಟಿ ಮತ್ತು ನಾರಾಯಣಪೂರ ಜಲಾಶಯಗಳಲ್ಲಿ ಸಾಕಷ್ಟು ನೀರು ಸಂಗ್ರಹವಾದ್ದು, ಕೂಡಲೆ ನೀರಾವರಿ ಸಲಹಾ ಸಮಿತಿ ಸಭೆ ಕರೆದು ಹಿಂಗಾರು ಬೆಳೆಗಳಿಗೆ ಏ. 10ರವರೆಗೆ ನೀರು ಒದಗಿಸಬೇಕು ಎಂದು ಆಗ್ರಹಿಸಿದರು.

ನಂತರ ತಹಶೀಲ್ದಾರ್‌ ಚನ್ನಮಲ್ಲಪ್ಪ ಘಂಟಿ ಅವರಿಗೆ ಮನವಿ ಪತ್ರವನ್ನು ನೀಡಲಾಯಿತು. ರೈತ ಸಂಘದ ಮುಖಂಡರಾದ ಮಲ್ಲಿಕಾರ್ಜುನ ಸತ್ಯಂಪೇಟ, ಚನ್ನಪ್ಪ ಆನೆಗುಂದಿ, ಎಸ್.ಎಂ ಸಾಗರ್, ಹಣಮಂತ ಕೊಂಗಂಡಿ, ದಾವಲಸಾಬ್ ನದಾಫ್, ಚಂದ್ರಕಲಾ ವಡಿಗೇರಿ, ಗಣೇಶ ಅನವಾರ, ಶಿವರಾಜ, ಭೀಮರಾಯ ಯಡ್ಡಳ್ಳಿ, ಪಕೀರ್ ಅಹ್ಮದ್, ಚಂದ್ರಶೇಖರ ಚವ್ಹಾಣ ಸೇರಿದಂತೆ ಕಾರ್ಯಕರ್ತರು ಇದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT