ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಡಿಎಪಿ ಕೃತಕ ಅಭಾವ; ಕೃಷಿ ಇಲಾಖೆಗೆ ಮುತ್ತಿಗೆ ಎಚ್ಚರಿಕೆ

Published 13 ಜೂನ್ 2024, 14:03 IST
Last Updated 13 ಜೂನ್ 2024, 14:03 IST
ಅಕ್ಷರ ಗಾತ್ರ

ಅಫಜಲಪುರ: ‘ತೊಗರಿ ಬಿತ್ತನೆಗೆ ವಿಶೇಷವಾಗಿ ಡಿಎಪಿ ರಸಗೊಬ್ಬರದ ಅವಶ್ಯಕತೆ ಇದ್ದು, ಅದಕ್ಕಾಗಿ ಗುರುವಾರ ರೈತರು ಖಾಸಗಿ ಅಗ್ರೋ ಕೇಂದ್ರಗಳಿಗೆ ಸುತ್ತಾಡಿದರೂ ಡಿಎಪಿ ಎಲ್ಲಿಯೂ ದೊರೆಯಲಿಲ್ಲ. ಆದರೆ ಒಂದೆರಡು ಖಾಸಗಿ ಅಗ್ರೋ ಕೇಂದ್ರದಲ್ಲಿ ಡಿಎಪಿ ರಸಗೊಬ್ಬರ ಲಭ್ಯವಿದೆ. ಆದರೆ ಮಾಲೀಕರು 20 20 13 ರಸಗೊಬ್ಬರ ತೆಗೆದುಕೊಂಡರೆ ಮಾತ್ರ ಡಿಎಪಿ ರಸಗೊಬ್ಬರ ಕೊಡುವುದಾಗಿ ಹೇಳಿದ್ದರಿಂದ ಸಾಕಷ್ಟು ರೈತರು ಖರೀದಿ ಮಾಡಲಿಲ್ಲ. ಕೆಲವರು ಮಾತ್ರ ಅನಿವಾರ್ಯವಾಗಿ ಖರೀದಿ ಮಾಡಿದ್ದಾರೆ. ಈ ಬಗ್ಗೆ ಸಹಾಯಕ ಕೃಷಿ ನಿರ್ದೇಶಕರು ಕ್ರಮ ಕೈಗೊಳ್ಳದಿದ್ದರೆ ಕೃಷಿ ಇಲಾಖೆಗೆ ಮುತ್ತಿಗೆ ಹಾಕುತ್ತೇವೆ’ ಎಂದು ತಾಲ್ಲೂಕು ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಮಂತ್ ಬಿರಾದಾರ್ ಎಚ್ಚರಿಕೆ ನೀಡಿದರು.

ಈ ಕುರಿತು ಗುರುವಾರ ಪತ್ರಿಕಾ ಪ್ರಕಟಣೆ ನೀಡಿದ ಅವರು, ‘ರಸಗೊಬ್ಬರ ಬೆಲೆಗಳು ಗಗನಕ್ಕೆ ಏರಿವೆ. ಅಂತಹದರಲ್ಲಿ ಖಾಸಗಿ ಅಗ್ರೋ ಮಾಲೀಕರು ಡಿಎಪಿ ರಸಗೊಬ್ಬರ ಬೇಕು ಎಂದರೆ ಅದರ ಜೊತೆಗೆ ಬೇರೆ ರಸಗೊಬ್ಬರ ನೀಡುತ್ತಿರುವುದು ಸರಿಯಲ್ಲ. ಸಾಲ ಮಾಡಿಕೊಂಡು ಗೊಬ್ಬರ ಬೀಜ ಖರೀದಿ ಮಾಡುತ್ತಿದ್ದಾರೆ’ ಎಂದು ಅವರು ತಿಳಿಸಿದರು.

‘ಸಹಾಯಕ ಕೃಷಿ ನಿರ್ದೇಶಕರು ಪ್ರತಿಯೊಂದು ಖಾಸಗಿ ಅಗ್ರೋ ಕೇಂದ್ರಗಳಿಗೆ ಭೇಟಿ ನೀಡಬೇಕು. ಸಂಗ್ರವಿರುವ ಡಿಎಪಿ ಹಾಗು ರೈತರ ಬೇಡಿಕೆ ಇರುವ ಹತ್ತಿ ಬೀಜಗಳನ್ನ ಪರಿಶೀಲಿಸಬೇಕು. ರೈತರಿಗೆ ನ್ಯಾಯ ನೀಡುವ ಕೆಲಸ ಇಲಾಖೆ ಮಾಡಬೇಕು’ ಎಂದು ಅವರು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT