ಬುಧವಾರ, ಅಕ್ಟೋಬರ್ 28, 2020
29 °C

₹ 75 ಸಾವಿರ ಲಂಚ; ಅಗ್ನಿಶಾಮಕ ಅಧಿಕಾರಿ ಎಸಿಬಿ ಬಲೆಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಕಲಬುರ್ಗಿ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಎಸ್.ಇ. ಲಕ್ಕಪ್ಪ ಅವರು ಮಂಗಳವಾರ ₹ 75 ಸಾವಿರ ಲಂಚ ಪಡೆಯುತ್ತಿದ್ದ ವೇಳೆಯೇ ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದಿದ್ದಾರೆ.

ನಗರದ ಸಿಐಬಿ ಕಾಲೊನಿಯ ನಿವಾರಿ ನಾಗರಾಜ ಗಿರಿ ಎಂಬುವವರು ಹೊಸದಾಗಿ ಪದವಿಪೂರ್ವ ಕಾಲೇಜು ಆರಂಭಿಸುತ್ತಿದ್ದು‌, ಕಟ್ಟಡ ನಿರ್ಮಿಸುತ್ತಿದ್ದಾರೆ. ಇದಕ್ಕಾಗಿ ಅಗ್ನಿಶಾಮಕ ಇಲಾಖೆಯಿಂದ ನಿರಾಕ್ಷೇಪಣಾ (ಎನ್ಒಸಿ) ಪತ್ರ ಪಡೆಯಲು ಅರ್ಜಿ ಸಲ್ಲಿಸಿದ್ದರು. ಈ ಪತ್ರ ನೀಡಲು ಲಕ್ಕಪ್ಪ ಅವರು ₹ 75 ಸಾವಿರ ಲಂಚ ಕೇಳಿದ್ದರು. ವಿಷಯವನ್ನು ನಾಗರಾಜ ಅವರು ಎಸಿಬಿ ಅಧಿಕಾರಿಗಳ ಗಮನಕ್ಕೆ ತಂದರು.

ಲಕ್ಕಪ್ಪ ಅವರು ಮಂಗಳವಾರ ಮಧ್ಯಾಹ್ನ 2ರ ಸುಮಾರಿಗೆ ಪ್ರಾದೇಶಿಕ ಅಗ್ನಿಶಾಮಕ ಕಚೇರಿಯಲ್ಲೇ ಪೂರ್ತಿ ಲಂಚದ ಹಣ ಪ‍ಡೆಯುತ್ತಿದ್ದರು. ಇದೇ ವೇಳೆಯೇ ಬಲೆ ಬೀಸಿದ ಅಧಿಕಾರಿಗಳು ಅವರನ್ನು, ಹಣದ ಸಮೇತ ಬಂಧಿಸಿದರು.

ಕಾರ್ಯಾಚರಣೆಯಲ್ಲಿ ಎಸಿಬಿ ಎಸ್ಪಿ ಮಹೇಶ್ ಮೇಘಣ್ಣವರ, ಡಿಎಸ್ಪಿ ವೀರೇಶ ಕರಡಿಗುಡ್ಡ, ಇನ್‌ಸ್ಪೆಕ್ಟರ್‌ಗಳಾದ ಎಂ.ಡಿ.ಇಸ್ಮಾಯಿಲ್,‌ ರಾಘವೇಂದ್ರ ಭಜಂತ್ರಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು