ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿಯಲ್ಲಿ ವೈಮಾನಿಕ ತರಬೇತಿ ಶುರು

Last Updated 2 ಜುಲೈ 2022, 4:43 IST
ಅಕ್ಷರ ಗಾತ್ರ

ಕಲಬುರಗಿ: ಇಲ್ಲಿನ ವಿಮಾನ ನಿಲ್ದಾಣದಲ್ಲಿ ವೈಮಾನಿಕ ತರಬೇತಿ ನೀಡಲು ಆಯ್ಕೆಯಾದ ಎರಡು ಸಂಸ್ಥೆಗಳಿಗೆ ವಿಮಾನ ನಿಲ್ದಾಣ ಪ್ರಾಧಿಕಾರವು (ಎಎಐ) ನಿಲ್ದಾಣದಲ್ಲಿ ಸ್ಥಳಾವಕಾಶ ನೀಡಿದ್ದು, ತರಬೇತಿ ಶಿಕ್ಷಣ ಆರಂಭವಾಗಿದೆ.

‘ಏಷ್ಯಾ ಫೆಸಿಫಿಕ್‌ ವೈಮಾನಿಕ ತರಬೇತಿ ಅಕಾಡೆಮಿ ಮತ್ತು ರೆಡ್‌ಬರ್ಡ್‌ ವೈಮಾನಿಕ ತರಬೇತಿ ಅಕಾಡೆಮಿಗೆ ವಿಮಾನ ನಿಲ್ದಾಣ ಪ್ರಾಧಿಕಾರವು ವಿಮಾನ ನಿಲ್ದಾಣದಲ್ಲೇ ತಲಾ 5 ಸಾವಿರ ಚ.ಮೀ. ಜಾಗ ನೀಡಿದೆ’ ಎಂದು ಪ್ರಕಟಣೆ ತಿಳಿಸಿದೆ.

ರೆಡ್ ಬರ್ಡ್ ವೈಮಾನಿಕ ತರಬೇತಿ ಅಕಾಡೆಮಿಯು ಎಎಐ ಸಹಕಾರದೊಂದಿಗೆ ತರಬೇತಿ ಕಾರ್ಯ ಪ್ರಾರಂಭಿಸಿದೆ. ಜಲಗಾಂವ್ ಮತ್ತು ಕಲಬುರಗಿಯಲ್ಲಿ ತಿಂಗಳಲ್ಲಿ ಮೂರು ಎಫ್‌ಟಿಒ ಪ್ರಾರಂಭಿಸಿದ್ದು ಬಹುದೊಡ್ಡ ಸಾಧನೆ ಎಂದು ಎಎಐ ಟ್ವೀಟರ್‌ ಮೂಲಕ ಹೇಳಿದೆ.

‘ಕಲಬುರಗಿಯಲ್ಲಿ ಏಷ್ಯಾ ಫೆಸಿಫಿಕ್‌ ಮತ್ತು ರೆಡ್‌ಬರ್ಡ್‌ ವೈಮಾನಿಕ ತರಬೇತಿ ಅಕಾಡೆಮಿಗಳು ವಿಮಾನ ತರಬೇತಿ ಕಾರ್ಯಾಚರಣೆ ಕೈಗೊಳ್ಳಲಿವೆ. ಇದಕ್ಕಾಗಿ ವಿಮಾನ ನಿಲ್ದಾಣ ಪ್ರಾಧಿಕಾರವು ಇಲ್ಲಿನ ವಿಮಾನ ನಿಲ್ದಾಣ ಪ್ರದೇಶದಲ್ಲಿ ಜಾಗದ ಹಂಚಿಕೆ ಮಾಡಿದೆ’ ಎಂದು ನಿಲ್ದಾಣದ ನಿರ್ದೇಶಕ ಜ್ಞಾನೇಶ್ವರ ರಾವ್ ತಿಳಿಸಿದ್ದಾರೆ.

‘ಉಭಯ ಅಕಾಡೆಮಿಗಳ ತರಬೇತಿ ಶಾಲೆ ಆರಂಭ ಆಗುವುದರಿಂದ ಕಲ್ಯಾಣ ಕರ್ನಾಟಕ ಭಾಗಕ್ಕೆ ಹೆಚ್ಚಿನ ಅನುಕೂಲವಾಗಲಿದೆ. ಹಲವು ವಿದ್ಯಾರ್ಥಿಗಳು ಇದರ ಲಾಭ ಪಡೆದುಕೊಂಡು ಪೈಲೆಟ್‌ ಆಗಬಹುದು. ಈ ನಿಲ್ದಾಣದಿಂದ 100ಕ್ಕೂ ಅಧಿಕ ವಿದ್ಯಾರ್ಥಿಗಳು ತರಬೇತಿ ಪಡೆದುಕೊಳ್ಳಬಹುದು. ಇದು ಈ ಭಾಗದ ಸಾಮಾಜಿಕ ಮತ್ತು ಆರ್ಥಿಕ ಬೆಳೆವಣಿಗೆಗೆ ಸಹಾಯಕವಾಗಲಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT