ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಗೌರವಗಳೊಂದಿಗೆ ಯೋಧನ ಅಂತ್ಯಕ್ರಿಯೆ

ಗಡಿಭದ್ರತಾ ಪಡೆ ಯೋಧ ಸಂದೀಪ ಬಿರಾದಾರ ಆತ್ಮಹತ್ಯೆ; ಕುಟುಂಸ್ಥರ ಆಕ್ರಂದನ
Published 22 ಜುಲೈ 2023, 14:15 IST
Last Updated 22 ಜುಲೈ 2023, 14:15 IST
ಅಕ್ಷರ ಗಾತ್ರ

ಆಳಂದ: ತಾಲ್ಲೂಕಿನ ಕೋತ್ತನ ಹಿಪ್ಪರಗಿ ಗ್ರಾಮದ ಗಡಿ ಭದ್ರತಾ ಪಡೆ ಯೋಧ ಸಂದೀಪ ಸುರೇಶ ಬಿರಾದಾರ(32) ಅಂತ್ಯಕ್ರಿಯೆ ಶನಿವಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಶನಿವಾರ ನೆರವೇರಿತು.

ಯೋಧ ಸಂದೀಪ್, ರಾಜಸ್ಥಾನ ಗಡಿಯಲ್ಲಿ ಕರ್ತವ್ಯ ನಿರತ ಸ್ಥಳದಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಜುಲೈ 18ರಂದು ಆತ್ಯಹತ್ಯೆ ಮಾಡಿಕೊಂಡ ಯೋಧನ ಪಾರ್ಥಿವ ಶರೀರವು ಶುಕ್ರವಾರ ಸ್ವಗ್ರಾಮಕ್ಕೆ ತರಲಾಗಿತ್ತು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಮೃತ ಯೋಧನಿಗೆ ತಾಯಿ, ಪತ್ನಿ, ಸಹೋದರರು ಇದ್ದಾರೆ.

2014ರಿಂದ ಗಡಿಭದ್ರತಾ ಪಡೆಯಲ್ಲಿ ಸೇವೆಗೆ ಸೇರಿದ್ದು, ಕಳೆದ ವರ್ಷವಷ್ಟೆ ಮದುವೆಯಾಗಿತ್ತು. ಕೌಟುಂಬಿಕ ಕಾರಣದಿಂದ ಜಿಗುಪ್ಸೆ ತಾಳಿ ಕಾರ್ಯ ನಿರ್ವಹಿಸುತ್ತಿದ್ದ ಸ್ಥಳದಲ್ಲಿ ತಮ್ಮ ಬಳಿಯಿದ್ದ ಸೇನಾ ರೈಫಲ್‌ನಿಂದ ಗುಂಡು ಹಾರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ: ತಾಲ್ಲೂಕಿನ ಕೊತ್ತನ ಹಿಪ್ಪರಗಿ ಗ್ರಾಮಕ್ಕೆ ಶುಕ್ರವಾರ ಬೆಳಗ್ಗೆ ಮೃತ ಯೋಧನ ಪಾರ್ಥಿವ ಶರೀರವು ಆಗಮಿಸಿತು. ಮಾರ್ಗ ಮಧ್ಯದಲ್ಲಿ ಆಳಂದ ಬಸ್‌ ನಿಲ್ದಾಣದ ಮುಂದೆ ಸ್ಥಳೀಯ ಪೊಲೀಸ್‌ ಅಧಿಕಾರಿಗಳು ಹಾಗೂ ಸಾರ್ವಜನಿಕರು ಅಂತಿಮ ನಮನ ಸಲ್ಲಿಸಿದರು.

ನಂತರ ಸ್ವಗ್ರಾಮಕ್ಕೆ ಯೋಧನ ಶವ ಬರುತ್ತಿದ್ದಂತೆ ಕುಟಂಬಸ್ಥರ ಆಕ್ರಂದನ ಹಾಗೂ ಗ್ರಾಮ ಶೋಕತಪ್ತವಾಯಿತು. ಯುವಕರ ಬೈಕ್‌ ಜಾಥಾ ಮೂಲಕ ಪ್ರಾರ್ಥಿವ ಶರೀರವನ್ನು ಸ್ವಾಗತಿಸಲಾಯಿತು.

ಯೋಧನ ತಾಯಿಯ ರೋದನೆ ಕರುಣಾಜನಕವಾಗಿತ್ತು. ಸಾರ್ವಜನಿಕರ ದರ್ಶನದ ನಂತರ ಮನೆಯಿಂದ ಗ್ರಾಮದ ಮುಖ್ಯಬೀದಿಗಳಲ್ಲಿ ಯೋಧನ ಪ್ರಾರ್ಥೀವ ಶರೀರದ ಮೆರವಣಿಗೆ ನಡೆಯಿತು.

ಅಂತ್ಯಸಂಸ್ಕಾರಕ್ಕೆ ಬಂದವರು ಭಾರತ ಮಾತಾ ಕೀ ಜೈ, ಸಂದೀಪ ಅಮರ್‌ ರಹೇ ಘೋಷಣೆ ಕೂಗಿದರು. ಆಳಂದ, ನರೋಣಾ ಪೊಲೀಸ್‌ ಠಾಣೆ ಅಧಿಕಾರಿಗಳು, ಬಿಎಸ್ಎಫ್‌ ಯೋಧರು ಸಕಲ ಸರ್ಕಾರಿ ಗೌರವ ಸಲ್ಲಿಸಿ, ಅಂತ್ಯಕ್ರಿಯೆ ನೆರವೇರಿಸಿದರು.

ಮೃತ ಯೋಧನ ತಾಯಿಗೆ ರಾಷ್ಟ್ರಧ್ವಜ ಸಮರ್ಪಿಸಲಾಯಿತು. ಕೆಎಂಎಫ್‌ ಅಧ್ಯಕ್ಷ ಆರ್.ಕೆ. ಪಾಟೀಲ, ನಿವೃತ್ತ ಸೈನಿಕರ ಸಂಘದ ಪ್ರಮುಖರಾದ ಸಿದ್ದಲಿಂಗ ಮಲಶೆಟ್ಟಿ, ಪಿಎಸ್‌ಐ ತಿರುಮಲ್ಲೇಶ, ದಿಗಂಬರ ಇಸಾಜಿ ಇತರರು ಇದ್ದರು.

ಆಳಂದ ತಾಲ್ಲೂಕಿನ ಕೊತ್ತನ ಹಿಪ್ಪರಗಿ ಗ್ರಾಮದಲ್ಲಿ ಮೃತ ಯೋಧನ ಅಂತ್ಯಕ್ರೀಯೆಯು ಸರ್ಕಾರಿ ಗೌರವಗಳೊಂದಿಗೆ ಜರುಗಿತು.
ಆಳಂದ ತಾಲ್ಲೂಕಿನ ಕೊತ್ತನ ಹಿಪ್ಪರಗಿ ಗ್ರಾಮದಲ್ಲಿ ಮೃತ ಯೋಧನ ಅಂತ್ಯಕ್ರೀಯೆಯು ಸರ್ಕಾರಿ ಗೌರವಗಳೊಂದಿಗೆ ಜರುಗಿತು.
ಆಳಂದ ತಾಲ್ಲೂಕಿನ ಕೊತ್ತನ ಹಿಪ್ಪರಗಿ ಗ್ರಾಮದಲ್ಲಿ ಮೃತ ಯೋಧನ ಅಂತ್ಯಕ್ರೀಯೆಯು ಸರ್ಕಾರಿ ಗೌರವಗಳೊಂದಿಗೆ ಜರುಗಿತು.
ಆಳಂದ ತಾಲ್ಲೂಕಿನ ಕೊತ್ತನ ಹಿಪ್ಪರಗಿ ಗ್ರಾಮದಲ್ಲಿ ಮೃತ ಯೋಧನ ಅಂತ್ಯಕ್ರೀಯೆಯು ಸರ್ಕಾರಿ ಗೌರವಗಳೊಂದಿಗೆ ಜರುಗಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT