ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಾಮನ ಅಕ್ಷತೆಗೆ ವೈಭವದ ಮೆರವಣಿಗೆ

Published 6 ಜನವರಿ 2024, 15:44 IST
Last Updated 6 ಜನವರಿ 2024, 15:44 IST
ಅಕ್ಷರ ಗಾತ್ರ

ಚಿಂಚೋಳಿ: ತಾಲ್ಲೂಕಿನ ಗಡಿಗೆ ಹೊಂದಿಕೊಂಡ ಶಾದಿಪುರ ಗ್ರಾಮದಲ್ಲಿ ಶನಿವಾರ ಹಬ್ಬದ ವಾತಾವರಣ ಗೋಚರಿಸಿತು.

ಗ್ರಾಮಸ್ಥರು ಸ್ಥಳೀಯ ಹನುಮಾನ ಮಂದಿರದಲ್ಲಿ ಸಭೆ ಸೇರಿ ರಾಮಭಕ್ತ ಹನುಮನಿಗೆ ಅಭಿಷೇಕ ನಡೆಸಿದರು. ನಂತರ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಆಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಬಂದ ಅಕ್ಷತೆಯನ್ನು ವಾದ್ಯಮೇಳ ಹಾಗೂ ಪೂರ್ಣಕುಂಭ ಕಳಸದೊಂದಿಗೆ ಮೆರವಣಿಗೆಯಲ್ಲಿ ತೆರಳಿ ಬಸ್ ನಿಲ್ದಾಣದಿಂದ ಬರಮಾಡಿಕೊಂಡು ಮುಖ್ಯಬೀದಿಯಲ್ಲಿ ಸಂಚರಿಸಿ ಮತ್ತೆ ಹನುಮಾನ ಮಂದಿರಕ್ಕೆ ತಲುಪಿದರು.

ಅಕ್ಷತೆಯನ್ನು ಹಿಡಿದುಕೊಂಡು ಆರತಿ ಸೇವೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ತಿನ ವೀರೇಂದ್ರ ಮುರುಡಾ, ವೆಂಕಟೇಶ ಕಲ್ವಾ, ಸಂಗೀತಾ ಪವಾರ್, ಘಟೋತ್ಗಜ ಪವಾರ್, ಗೀತಾ ಮೈಲ್ವಾರ್, ಚಂದ್ರಕಲಾ ಮೋಘಾ, ಮಹಾಂತಯ್ಯ ಸ್ವಾಮಿ, ಗ್ರಾ.ಪಂ. ಅಧ್ಯಕ್ಷೆ ಭಾರತಿ ರಾಜಪವಾರ್, ಸಂಗಮೇಶ ಕಲ್ವಾ, ಈಶ್ವರ್ ಕಿರಾಣಾ, ಗೋಪಾಲ ಕಲ್ವಾ, ದೀಪಕ ಪಾಟೀಲ ಮತ್ತಿತರರು ಇದ್ದರು

ಚಿಂಚೋಳಿ ತಾಲ್ಲೂಕು ಶಾದಿಪುರದಲ್ಲಿ ಅಯೋಧ್ಯೆ ಶ್ರೀರಾಮ ಮಂದಿರದ ಅಕ್ಷತೆ ಪೂರ್ಣಕುಂಭದ ಕಳಸದ ಮೆರವಣಿಗೆ ಮೂಲಕ ಶನಿವಾರ ಮೆರವಣಿಗೆ ನಡೆಸಿದರು.
ಚಿಂಚೋಳಿ ತಾಲ್ಲೂಕು ಶಾದಿಪುರದಲ್ಲಿ ಅಯೋಧ್ಯೆ ಶ್ರೀರಾಮ ಮಂದಿರದ ಅಕ್ಷತೆ ಪೂರ್ಣಕುಂಭದ ಕಳಸದ ಮೆರವಣಿಗೆ ಮೂಲಕ ಶನಿವಾರ ಮೆರವಣಿಗೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT