ಶನಿವಾರ, 6 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಕಲಬುರಗಿ: ಜೀವ ಭಯದಲ್ಲೇ ಗ್ರಾ.ಪಂ. ಸಿಬ್ಬಂದಿ ಕಾರ್ಯನಿರ್ವಹಣೆ

ಶಿಥಿಲಾವಸ್ಥೆ ತಲುಪಿರುವ ಜಿಲ್ಲೆಯ ಹಲವು ಗ್ರಾ.ಪಂ. ಕಟ್ಟಡಗಳು: ಕಟ್ಟಡ ನಿರ್ಮಾಣಕ್ಕೆ ಅಗತ್ಯವಾದಷ್ಟು ನಿಧಿಯೇ ಇಲ್ಲ
Published : 7 ಏಪ್ರಿಲ್ 2025, 5:34 IST
Last Updated : 7 ಏಪ್ರಿಲ್ 2025, 5:34 IST
ಫಾಲೋ ಮಾಡಿ
Comments
ಆಳಂದ ತಾಲ್ಲೂಕಿನ ಮಾದನ ಹಿಪ್ಪರಗಾ ಗ್ರಾಮ ಪಂಚಾಯಿತಿ ಕಟ್ಟಡ ಶಿಥಿಲಾವಸ್ಥೆ ತಲುಪಿರುವುದು
ಆಳಂದ ತಾಲ್ಲೂಕಿನ ಮಾದನ ಹಿಪ್ಪರಗಾ ಗ್ರಾಮ ಪಂಚಾಯಿತಿ ಕಟ್ಟಡ ಶಿಥಿಲಾವಸ್ಥೆ ತಲುಪಿರುವುದು
ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ
ಮಾಳಿಗೆ ಮನೆಯಲ್ಲಿ ಪಂಚಾಯಿತಿ ಕಚೇರಿ
ಚಿತ್ತಾಪುರ: ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರ ಸ್ವಂತ ಮತಕ್ಷೇತ್ರದ ಮೊಗಲಾ ಡೋಣಗಾಂವ ಇವಣಿ ಗ್ರಾಮ ಪಂಚಾಯಿತಿಗಳಿಗೆ ಸ್ವಂತ ಕಟ್ಟಡದ ಸೌಲಭ್ಯವಿಲ್ಲ. ಭಾಗೋಡಿ ಗ್ರಾ.ಪಂ. ಆಡಳಿತ ಕಚೇರಿಯು ಮಾಳಿಗೆ ಮನೆಯ ಕಟ್ಟಡದಲ್ಲಿಯೇ ಕಾರ್ಯನಿರ್ವಹಿಸುತ್ತಿದೆ. ಶಿಥಿಲಾವಸ್ಥೆಯಲ್ಲಿರುವ ಹಳೆಯ ಕಟ್ಟಡಕ್ಕೆ ಸುಣ್ಣಬಣ್ಣ ಬಳಿಯಲಾಗಿದೆ. ಮಾಳಿಗೆಯ ಕಲ್ಲುಗಳು ಒಡೆದು ಹಾಳಾಗಿವೆ. ಮಳೆಗಾಲದಲ್ಲಿ ಸೋರುತ್ತದೆ. ಕಟ್ಟಡದ ಬಹುತೇಕ ಗೋಡೆಗಳು ಬಿರುಕು ಬಿಟ್ಟಿವೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಾರ್ಯದರ್ಶಿ ಕರ ವಸೂಲಿಗಾರ ಕಂಪ್ಯೂಟರ್ ಆಪರೇಟರ್ ಸೇರಿದಂತೆ ಎಲ್ಲರೂ ಒಂದೇ ಕೊಠಡಿಯಲ್ಲಿ ಕರ್ತವ್ಯ ನಿರ್ವಹಿಸಬೇಕಿದೆ. ಕಾಂಕ್ರಿಟ್‌ನಿಂದ ನಿರ್ಮಿಸಿರುವ ಒಂದು ಸಭಾಂಗಣ ಕೊಠಡಿಯನ್ನು ಸಾಮಾನ್ಯ ಸಭೆ ನಡೆಸಲು ಮಾತ್ರ ಬಳಸಲಾಗುತ್ತಿದೆ. ತಾಲ್ಲೂಕಿನ ಮೊಗಲಾ ಗ್ರಾ.ಪಂಗೆ ಸ್ವಂತ ಕಟ್ಟಡದ ಸೌಲಭ್ಯವಿಲ್ಲದೆ ಆರೋಗ್ಯ ಕೇಂದ್ರದಲ್ಲಿಯೇ ಪಂಚಾಯಿತಿ ಆಡಳಿತ ಕಚೇರಿ ಸ್ಥಾಪನೆ ಮಾಡಿಕೊಂಡು ಆಡಳಿತ ನಡೆಸಲಾಗುತ್ತಿದೆ. ಡೋಣಗಾಂವ ಗ್ರಾಮದ ಗ್ರಾಮ ಪಂಚಾಯಿತಿಗಳಿಗೆ ಸ್ವಂತ ಕಟ್ಟಡದ ಭಾಗ್ಯವಿಲ್ಲ. ಪಶು ಆಸ್ಪತ್ರೆಯ ಕಟ್ಟಡದಲ್ಲಿಯೇ ಪಂಚಾಯಿತಿ ಕಚೇರಿ ವ್ಯವಸ್ಥೆ ಮಾಡಿಕೊಂಡು ಆಡಳಿತ ನಿರ್ವಹಣೆ ಮಾಡಲಾಗುತ್ತಿದೆ. ಇವಣಿ ಗ್ರಾಮದಲ್ಲಿ ಅಂಗನವಾಡಿ ಕೇಂದ್ರದ ಹಳೆ ಕಟ್ಟಡದ ಎರಡು ಕೊಠಡಿಗಳಲ್ಲಿಯೇ ಆಡಳಿತ ನಡೆಸಲಾಗುತ್ತಿದೆ. ಗೋದಾಮಿನಲ್ಲಿ ಗ್ರಾ.ಪಂ. ಕಚೇರಿ! ಅಫಜಲಪುರ ತಾಲ್ಲೂಕಿನ ಗೌರ್ (ಬಿ) ಗ್ರಾಮ ಪಂಚಾಯಿತಿಗೆ ಸ್ವಂತ ಕಟ್ಟಡವಿಲ್ಲದೆ ಹಳೆಯ ಗೋದಾಮಿನಲ್ಲಿ ಪಂಚಾಯಿತಿ ನಡೆಸಿಕೊಂಡು ಬರಲಾಗುತ್ತಿದೆ. ಗ್ರಾ.ಪಂ.ನಲ್ಲಿ 15 ಜನ ಸದಸ್ಯರಿದ್ದು ಹಳೆಯ ಕಾಲದ ಗ್ರಾಮ ಸೇವಕರ ಕೊಠಡಿಯಲ್ಲಿ ಪಂಚಾಯಿತಿಯ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಗ್ರಾಮದಲ್ಲಿ ನಿವೇಶನ ಲಭ್ಯವಿದ್ದರೂ ಇಲ್ಲಿವರೆಗೆ ಸರ್ಕಾರ ಹೊಸದಾಗಿ ಗ್ರಾ.ಪಂ. ಕಟ್ಟಡ ನಿರ್ಮಾಣ ಮಾಡಲು ಪ್ರಯತ್ನ ಮಾಡಿಲ್ಲ. ಈ ಕುರಿತು ಪ್ರತಿಕ್ರಿಯೆ ನೀಡಿದ ಗೌರ್ (ಬಿ) ಗ್ರಾ.ಪಂ. ಪಿಡಿಒ ವೀರಯ್ಯ ಹಿರೇಮಠ ಪಂಚಾಯಿತಿಗೆ ಸ್ವಂತ ಕಟ್ಟಡವಿಲ್ಲದೆ ಸರ್ಕಾರದ ಯಾವುದೋ ಒಂದು ಕಟ್ಟಡದಲ್ಲಿ ನಡೆಸಿಕೊಂಡು ಬರಲಾಗುತ್ತಿದೆ. ತಾಲ್ಲೂಕು ಪಂಚಾಯಿತಿಯವರು ಹೊಸದಾಗಿ ಗ್ರಾ.ಪಂ. ಕಟ್ಟಡ ನಿರ್ಮಾಣ ಮಾಡಲು ಕ್ರಿಯಾಯೋಜನೆ ತಯಾರಿಸಲು ಹೇಳಿದ್ದಾರೆ. ಆ ಕೆಲಸ ನಡೆದಿದೆ. ಆದರೆ ಎಷ್ಟು ಅನುದಾನವಿದೆ? ಯಾವಾಗ ಮಂಜೂರು ಆಗುತ್ತದೆ’ ಎಂಬ ಮಾಹಿತಿ ಇಲ್ಲ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT