ಮಂಗಳವಾರ, ಸೆಪ್ಟೆಂಬರ್ 21, 2021
21 °C

ಬಿಸಲ ನೆಲದ ಚಿತ್ತಾಪುರಕ್ಕೆ ಹಸಿರ ಹೊದಿಕೆ

ಮಲ್ಲಿಕಾರ್ಜುನ ಎಚ್. ಮುಡಬೂಳಕರ್ Updated:

ಅಕ್ಷರ ಗಾತ್ರ : | |

Prajavani

ಚಿತ್ತಾಪುರ: ಉದ್ಯಾನವೇ ಇಲ್ಲದ ಪಟ್ಟಣದಲ್ಲಿ ಸರ್ಕಾರಿ ಪ್ರವಾಸಿ ಮಂದಿರ ಹಾಗೂ ತಾಲ್ಲೂಕಿನ ಕೆಲವು ಕಚೇರಿಗಳ ಆವರಣಗಳು ಹಚ್ಚಹಸಿರಿನಿಂದ ಕಂಗೊಳಿಸುತ್ತಿವೆ. 

ಇಲ್ಲಿನ ಪ್ರವಾಸಿ ಮಂದಿರದಲ್ಲಿನ ಗಿಡ–ಮರಗಳು ಮಳೆಗಾಲದ ತೇವಾಂಶಕ್ಕೆ ಹಸಿರಿನಿಂದ  ಕಂಗೊ ಳಿಸುತ್ತಿವೆ. ಆವರಣದ ತುಂಬ ಬೆಳೆದ ಗಿಡ, ಸಸಿಗಳು ಹಸಿರು ಸೂಸುತ್ತಾ ನೋಡುಗರ ಕಣ್ಣುಗಳನ್ನು ತಂಪಾಗಿಸುತ್ತಿವೆ.

ಪ್ರವಾಸಿ ಮಂದಿರ ಉಸ್ತುವಾರಿ ಹೊತ್ತ ಪಾಶಾಮಿಯ್ಯ ಅವರು ಹಲವು ಬಗೆಯ ಸಸಿಗಳನ್ನು ನೆಟ್ಟು ಬೆಳೆಸಿದ್ದಾರೆ. ಈಗ ಅವುಗಳು ಪಟ್ಟಣದ ಸೌಂದರ್ಯವನ್ನು ಇಮ್ಮಡಿಗೊಳಿಸಿವೆ. ಸುತ್ತಲಿನ ನಿವಾಸಿಗರು ಮುಂಜಾನೆ ಮತ್ತು ಸಂಜೆಯ ವೇಳೆ ವಾಯುವಿಹಾರಕ್ಕೆ ಬರುತ್ತಿದ್ದಾರೆ.

ತಾಲ್ಲೂಕು ಪಂಚಾಯಿತಿ ಕಚೇರಿಯ ಆವರಣವು ಮರಗಳು ಸಹ ಹಸಿರಿನಿಂದ ನಳನಳಿಸುತ್ತಿವೆ. ಕಚೇರಿ ಮುಂಭಾಗದ ರಸ್ತೆಯ ಬದಿಯಲ್ಲಿನ ಮರಗಳು ಸೊಂಪಾಗಿ ಬೆಳೆದು ಹಸಿರು ಹೊದ್ದಿಕೊಂಡು ವಾಹನ, ಪಾದ ಚಾರಿಗಳನ್ನು ತನ್ನತ್ತ ಸೆಳೆಯುತ್ತಿವೆ.

ಸರ್ಕಾರಿ ಪದವಿ ಪೂರ್ವ ಕಾಲೇಜು ಮುಂಭಾಗದಿಂದ ರೈಲ್ವೆ ನಿಲ್ದಾಣದವರೆಗಿನ ರಸ್ತೆಯ ಎರಡೂ ಬದಿಯಲ್ಲಿ ಮರಗಳು ದಾರಿಹೋಕರಿಗೆ ನೆರಳಾಗಿವೆ. ಜೆಸ್ಕಾಂ ಇಲಾಖೆಯ ಸಿಬ್ಬಂದಿ ತಮ್ಮ ಮನೆಗಳು ಆವರಣದಲ್ಲಿ ಅನೇಕ ಸಸಿಗಳನ್ನು ನೆಟ್ಟು ಬೆಳೆಸಿದ್ದರಿಂದ ಇಡೀ ವಾತಾವರಣವೇ ಹಸಿರುಮಯವಾಗಿದೆ. ಪಕ್ಷಿಗಳಿಗೂ ಆಶ್ರಯ ತಾಣವಾಗಿದೆ. ಮುಂಜಾನೆ ಮತ್ತು ಸಂಜೆ ಪಕ್ಷಿಗಳ ಚಿಲಿಪಿಲಿ ಕಲರವ ಕೇಳುಗರಿಗೆ ಮುದ ನೀಡುತ್ತದೆ.

ಎಪಿಎಂಸಿ ಕಚೇರಿ, ತೋಟಗಾರಿಗೆ ಇಲಾಖೆ, ನ್ಯಾಯಾಲಯದ ಆವರಣ ದಲ್ಲಿನ ಮರಗಳು ಪಟ್ಟಣದ ಪರಿಸರವನ್ನು ಹಸಿರುಮಯವಾಗಿಸಿವೆ. ‘ಹೊಸ ಬಡವಾಣೆಗಳು ತಲೆ ಎತ್ತುತ್ತಿ ದ್ದರೂ ಉದ್ಯಾನವನಗಳು ನಿರ್ಮಾಣ ಆಗು ತ್ತಿಲ್ಲ. ನಗರ ಯೋಜನಾ ಪ್ರಾಧಿ ಕಾರದ ನಿಯಮದ ಪ್ರಕಾರ ಬಡವಾ ಣೆಗಳಲ್ಲಿ ಉದ್ಯಾನ ನಿರ್ಮಿಸಿಲ್ಲ‘ ಎಂಬುದು ಸ್ಥಳೀಯರ ಅಸಮಾಧಾನ.

***
ಇಲ್ಲಿನ ಜನತೆಗೆ ಉದ್ಯಾನದ ಸೌಲಭ್ಯವಿಲ್ಲ. ತಾಲ್ಲೂಕು ಆಡಳಿತಾಧಿಕಾರಿಗಳು ಇತ್ತ ಗಮನಹರಿಸಿ ಉದ್ಯಾನದ ಸೌಲಭ್ಯ ಒದಗಿಸಬೇಕು.
-ದಶರಥ ದೊಡ್ಡಮನಿ, ಪುರಸಭೆಯ ಮಾಜಿ ಸದಸ್ಯ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.