ಚಿಂಚೋಳಿ: ಪಟ್ಟಣದ ಪಾಪನಾಶ ಪಂಚಲಿಂಗೇಶ್ವರ ಬುಗ್ಗೆ ಬಳಿಯ ತೇರ ಮೈದಾನದಲ್ಲಿ ಹಾರಕೂಡ ಚನ್ನಬಸವ ಶಿವಯೋಗಿಗಳ 75ನೇ ಜಾತ್ರಾ ಅಮೃತ ಮಹೋತ್ಸವದ ರಥೋತ್ಸವ ಶ್ರೀಮಠದ ಚನ್ನವೀರ ಶಿವಾಚಾರ್ಯರ ನೇತೃತ್ವದಲ್ಲಿ ಭಕ್ತಿಶ್ರದ್ಧೆ ಹಾಗೂ ಜಯಘೋಷಗಳೊಂದಿಗೆ ಗುರುವಾರ ಸಂಜೆ ಜರುಗಿತು.

ಶ್ರೀಮಠದಿಂದ ಉಚ್ಚಾಯ, ಪಲ್ಲಕ್ಕಿ ಮೆರವಣಿಗೆ ಭಜನೆ ಹಾಗೂ ವಾದ್ಯಮೇಳದೊಂದಿಗೆ ಮುಖ್ಯ ಬೀದಿಯ ಮೂಲಕ ತೇರ ಮೈದಾನಕ್ಕೆ ಆಗಮಿಸಿ ರಥಕ್ಕೆ ಐದು ಸುತ್ತು ಹಾಕಿದ ನಂತರ ರಥೋತ್ಸವ ಜರುಗಿತು.

ಮಹಾಶಿವರಾತ್ರಿಯಾದ 11ನೇ ದಿನಕ್ಕೆ ಚನ್ನಬಸವ ಶಿವಯೋಗಿಗಳು ಜನಿಸಿದ ಪ್ರಯುಕ್ತ ನಡೆಯುವ ಜಾತ್ರೆಗೆ ಪ್ರಸಕ್ತ ವರ್ಷ 75ರ ಸಂಭ್ರಮ. ಹೀಗಾಗಿ ಅಮೃತ ಮಹೋತ್ಸವ ಸಡಗರ ಶ್ರದ್ಧೆ ಮತ್ತು ಭಕ್ತಿ ಮತ್ತು ನಂಬಿಕೆಯೊಂದಿಗೆ ವಿಜೃಂಭಣೆಯಿಂದ ನಡೆಯಿತು.

ತೇರ ಮೈದಾನದಲ್ಲಿ ಸಾಂಪ್ರದಾಯಿಕ ಟೋಪಿ ಧರಿಸಿ ತ್ರಿಶೂಲ ಹಿಡಿದು ಹೂವು ಹಾಸಿನ ದಾರಿಯಲ್ಲಿ ಸಾಗಿ ರಥಕ್ಕೆ ಪೂಜೆ ಸಲ್ಲಿಸಿದ ಶ್ರೀಮಠದ ಚನ್ನವೀರ ಶಿವಾಚಾರ್ಯರು ರಥೋತ್ಸವಕ್ಕೆ ಚಾಲನೆ ನೀಡಿದರು. ನೆರೆದಿದ್ದ ಅಪಾರ ಸಂಖ್ಯೆಯ ಭಕ್ತರು ಹಾರಕೂಡ ಚನ್ನಬಸವ ಶಿವಯೋಗಿ ಮಹಾರಾಜ ಕೀ ಜೈ ಎಂಬ ಘೋಷಣೆ ಕೂಗಿ ರಥದ ಮೇಲೆ ಉತ್ತತ್ತಿ ಎಸೆದು ಹರಕೆ ತೀರಿಸಿ ಕೃತಾರ್ಥರಾದರು.

ರಥೋತ್ಸವದ ನಂತರ ಪಟ್ಟಣದ ಮುಸಲ್ಮಾನ ಬಾಂಧವರು ಚನ್ನವೀರ ಶಿವಾಚಾರ್ಯರಿಗೆ ಸನ್ಮಾನಿಸಿ ಭಾವೈಕ್ಯತೆ ಮೆರೆದರು. ಹುಬ್ಬಳ್ಳಿ ಮೂರುಸಾವಿರ ಮಠದ ಗುರುಸಿದ್ದ ರಾಜಯೋಗೀಂದ್ರ ಸ್ವಾಮಿಗಳು, ಹೀರೆನಾಗಾಂವನ ಜಯಶಾಂತಲಿಂಗ ಮಹಾಸ್ವಾಮಿಗಳು, ಸಂಸದ ಸಾಗರ ಖಂಡ್ರೆ, ಶಾಸಕ ಡಾ.ಅವಿನಾಶ ಜಾಧವ, ಬಾಬು ಹೊನ್ನಾನಾಯಕ, ಮುಖಂಡರಾದ ಸುಭಾಶ ರಾಠೋಡ, ಅಶೋಕ ಮೊಗದಂಪುರ, ಉಮಾಪತಿ, ಕಲ್ಲಪ್ಪ ಹೊಗ್ತಾಪುರ ಅವರು ಕರ್ನಾಟಕ ವೀರಶೈವ ಸಾಹಿತಿ ಚರಿತ್ರೆ ಕೃತಿ ಲೋಕಾರ್ಪಣೆ ನಡೆಯಿತು.

ಹಾರಕೂಡ ರಥೋತ್ಸವದಲ್ಲಿ ಸುಭಾಶ ಸೀಳಿನ್, ಭೀಮಶೆಟ್ಟಿ ಮುರುಡಾ, ಕೆ.ಎಂ ಬಾರಿ, ಅಬ್ದುಲ ಬಾಷಿದ್, ಜಗದೀಶಸಿಂಗ ಠಾಕೂರ, ಬಸವರಾಜ ಮಾಲಿ, ಗೌತಮ ಪಾಟೀಲ, ಅಜಿತ ಪಾಟೀಲ, ಮಲ್ಲಿಕಾರ್ಜುನ ಪಾಲಾಮೂರ, ಸಂತೋಷ ಗಡಂತಿ, ನಾಗರಾಜ ಕಲಬುರಗಿ ಸೇರಿದಂತೆ ಅಪಾರ ಭಕ್ತರು ಪಾಲ್ಗೊಂಡಿದ್ದರು.

ತಾತನವರ ತೊಟ್ಟಿಲೋತ್ಸವ

ಚಿಂಚೋಳಿ: ಪಟ್ಟಣದ ಆರಾಧ್ಯದೇವ ಹಾರಕೂಡ ಚನ್ನಬಸವ ಶಿವಯೋಗಿಗಳ 75ನೇ ಜಾತ್ರೆಯ ಅಮೃತ ಮಹೋತ್ಸವ ಸಡಗರ – ಸಂಭ್ರಮದಿಂದ ನಡೆಯುತ್ತಿದೆ.

ಗುರುವಾರ ಶ್ರೀಮಠದಲ್ಲಿ ದಿನಪೂರ್ತಿ ವಿವಿಧ ಧಾರ್ಮಿಕ ಕೈಂಕರ್ಯಗಳನ್ನು ಪೂರೈಸಿದ ಭಕ್ತರು ಲಿಂಗೈಕ್ಯ ಚನ್ನಬಸವ ಶಿವಯೋಗಿಗಳ ಗದ್ದುಗೆ ಹಾಗೂ ಚನ್ನವೀರ ಶಿವಾಚಾರ್ಯರ ದರ್ಶನಾಶೀರ್ವಾದ ಪಡೆದುಕೊಂಡರು.

ಬೆಳಿಗ್ಗೆ ಸಾವಿರಾರು ಮಹಿಳೆಯರು ಪಾಪನಾಶ ಪಂಚಲಿಂಗೇಶ್ವರ ಬುಗ್ಗೆಗೆ ತೆರಳಿ, ಗಂಗೆಗೆ ಮತ್ತು ಪೂಜೆ ಸಲ್ಲಿಸಿ ಪಂಚಲಿಂಗೇಶ್ವರನಿಗೆ ಪೂಜೆ ಸಲ್ಲಿಸಿ ಬುಗ್ಗೆ ನೀರು ಬಿಂದಿಗೆಯಲ್ಲಿ ತುಂಬಿಕೊಂಡು ಅದರ ಮೇಲೆ ತೆಂಗಿನ ಕಾಯಿಯಿಟ್ಟುಕೊಂಡು ವಾದ್ಯಮೇಳದ ಜತೆಗೆ ಮೆರವಣಿಗೆ ಮೂಲಕ ಶ್ರೀಮಠಕ್ಕೆ ಆಗಮಿಸಿ ಅಭಿಷೇಕ ನಡೆಸಿ ಗದ್ದುಗೆ ಬಳಿ ತೆಂಗಿನ ಕಾಯಿ ಒಡೆದು ಕೃತಾರ್ಥರಾದರು.

ಚನ್ನಬಸವ ಶಿವಯೋಗಿಗಳು ಚಿಂಚೋಳಿಯ ಭಕ್ತ ಕೋರೆಪ್ಪನ ಮನೆಯಲ್ಲಿ ಲಿಂಗೈಕ್ಯರಾಗಿದ್ದ ಸ್ಥಳದಲ್ಲಿಯೇ ಮಹಾ ಮನೆ ನೆಲೆಗೊಂಡಿದೆ. ಇದು ನಂಬಿ ಬಂದ ಭಕ್ತರ ಭವ ರೋಗ ಕಳೆಯುವ ಇಷ್ಟಾರ್ಥ ಸಿದ್ದಿಯ ಜಾಗೃತ ನೆಲೆವೀಡಾಗಿದೆ
– ಚನ್ನವೀರ ಶಿವಾಚಾರ್ಯರು ಸಂಸ್ಥಾನ ಹಿರೇಮಠ ಹಾರಕೂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.