‘ಎಲ್ಲಾ ಎದೆಯ ನೋವು ಹೃದಯಾಘಾತವಲ್ಲ’
‘ಹೃದ್ರೋಗದ ಬಗ್ಗೆ ಜನರು ಅನಗತ್ಯ ಆತಂಕಗೊಳ್ಳಬೇಕಿಲ್ಲ. ಹೃದಯದ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದರೆ ಸಾಕು. ಎಲ್ಲಾ ಎದೆಯ ನೋವು ಹೃದಯಾಘಾತವಲ್ಲ ಎಂಬುದನ್ನು ಜನರು ಮೊದಲು ಅರ್ಥೈಸಿಕೊಳ್ಳಬೇಕು’ ಎಂದು ಜಯದೇವ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ (ಪ್ರಭಾರ) ಡಾ.ವೀರೇಶ ಪಾಟೀಲ ಹೇಳಿದರು. ‘ಜಯದೇವ ಆಸ್ಪತ್ರೆಯಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ಹಂತ-ಹಂತವಾಗಿ ಪತ್ರಕರ್ತರನ್ನು ತಪಾಸಣೆ ಮಾಡಲಾಗುವುದು. ಈ ಹಿಂದಿನ ಆರೋಗ್ಯ ಸಂಬಂಧಿತ ದಾಖಲೆ ಹಾಗೂ ಔಷಧಿಗಳನ್ನು ತಪಾಸಣೆ ವೇಳೆ ತರಬೇಕು’ ಎಂದರು.