ಕಲಬುರಗಿ: ಹಾಸನದಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗಿವೆ ಎಂಬ ಸುದ್ದಿಯ ಬೆನ್ನಲ್ಲೇ, ಇಲ್ಲಿನ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ ಹೃದಯ ಸಂಬಂಧಿತ ತಪಾಸಣೆಗಾಗಿ ಬರುವರರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದೆ.

‘ಮಾಧ್ಯಮಗಳಲ್ಲಿನ ಸುದ್ದಿ ನೋಡಿದ ಜನರು ಗ್ಯಾಸ್ಟ್ರಿಕ್ನಿಂದ ಎದೆಯುರಿಯಾದರೂ ಆತಂಕದಿಂದ ಆಸ್ಪತ್ರೆಗೆ ಬರುತ್ತಿದ್ದಾರೆ. ಎರಡು ವಾರಗಳ ಹಿಂದೆ ನಿತ್ಯದ ಒಪಿಡಿ ಸಂಖ್ಯೆ 400ರ ಆಸುಪಾಸಿನಲ್ಲಿತ್ತು. ಈಗ 650ರ ಗಡಿ ದಾಟಿದೆ’ ಎಂದು ಹೃದ್ರೋಗ ತಜ್ಞ, ಜಯದೇವ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ (ಪ್ರಭಾರ) ಡಾ.ವೀರೇಶ ಪಾಟೀಲ ಹೇಳಿದರು.

ಒಪಿಡಿ ಸಂಖ್ಯೆಯಲ್ಲಿ ಏರಿಕೆಯಾದಂತೆ ಹೃದಯ ಸಂಬಂಧಿತ ಇಸಿಜಿ, 2ಡಿ ಇಕೊ, ಟಿಎಂಟಿ, ಬಯೋ ಕೆಮಿಸ್ಟ್ರಿ, ಪ್ಯಾಥಾಲಜಿ ತಪಾಸಣೆಗೆ ಒಳಗಾಗುವರ ಸಂಖ್ಯೆಯೂ ಹೆಚ್ಚಾಗಿದೆ.

ಐದೂವರೆ ತಿಂಗಳಲ್ಲಿ 2,196 ಜನರು ಹೃದಯಾಘಾತಕ್ಕೆ ಒಳಗಾಗಿ ಜಯದೇವ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಲ್ಲಿ 104 ಮಂದಿ ಮೃತಪಟ್ಟಿದ್ದಾರೆ.

371 ಬೆಡ್ಗಳ ನೂತನ ಕಟ್ಟಡದ ಜಯದೇವ ಆಸ್ಪತ್ರೆಯು ಜನವರಿಯಿಂದ ಸಾರ್ವಜನಿಕರ ಸೇವೆಗೆ ತೆರೆದುಕೊಂಡಿದೆ. ಮೇ ತಿಂಗಳವರೆಗೆ ಹೊಸದಾಗಿ ಚಿಕಿತ್ಸೆಗೆ ಬರುವ ಹೊರರೋಗಿ ವಿಭಾಗದ (ಒಪಿಡಿ) ಸಂಖ್ಯೆ 4,500ರಿಂದ 4,900 ಆಸುಪಾಸಿನಲ್ಲಿತ್ತು. ಜೂನ್ ತಿಂಗಳಲ್ಲಿ ಹೊಸ ಒಪಿಡಿ ಸಂಖ್ಯೆ ದಿಢೀರನೆ 5,535ಕ್ಕೆ ತಲುಪಿದೆ.

ಜನವರಿಯಲ್ಲಿ ಹಳೇ–ಹೊಸ ಒಪಿಡಿ ಸೇರಿ ಒಟ್ಟು 9,708 ಮಂದಿ ಆಸ್ಪತ್ರೆಗೆ ಬಂದಿದ್ದರು. ಅವರಲ್ಲಿ 686 ರೋಗಿಗಳು (ಶೇ 7.06ರಷ್ಟು) ಚಿಕಿತ್ಸೆಗೆ ದಾಖಲಾಗಿದ್ದರು. ಜೂನ್ ತಿಂಗಳಲ್ಲಿ ಒಟ್ಟು 11,056 ಮಂದಿ ಆಸ್ಪತ್ರೆಗೆ ಬಂದಿದ್ದರು. ಅವರಲ್ಲಿ 798 ರೋಗಿಗಳು (ಶೇ 7.21ರಷ್ಟು) ದಾಖಲಾಗಿದ್ದಾರೆ. ಒಪಿಡಿ ಹೆಚ್ಚಾದರೂ ಚಿಕಿತ್ಸೆಯ ದಾಖಲಾತಿಯಲ್ಲಿ ಗಣನೀಯ ಏರಿಕೆ ಇಲ್ಲ ಎನ್ನುತ್ತಾರೆ ಆಸ್ಪತ್ರೆಯ ವೈದ್ಯರು.

ಜನವರಿಯಲ್ಲಿ ಸಾಮಾನ್ಯ ಸೇರಿ 7,390 ಇಸಿಜಿ, 4,535 2ಡಿ ಇಕೊ, 199 ಟಿಎಂಟಿ, 14,699 ಬಯೋ ಕೆಮಿಸ್ಟ್ರಿ ಹಾಗೂ 5,023 ಪ್ಯಾಥಾಲಜಿ ತಪಾಸಣೆ ಮಾಡಲಾಗಿತ್ತು. ಜೂನ್ ತಿಂಗಳಲ್ಲಿ 8,666 ಇಸಿಜಿ, 4,599 2ಡಿ ಇಕೊ, 274 ಟಿಎಂಟಿ, 17,090 ಬಯೋ ಕೆಮಿಸ್ಟ್ರಿ ಹಾಗೂ 59,024 ರೋಗಿಗಳಿಗೆ ಪ್ಯಾಥಾಲಜಿ ತಪಾಸಣೆ ನಡೆಸಲಾಗಿದೆ.

Cut-off box -

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.