ಕಾಳಗಿ: ತಾಲ್ಲೂಕಿನ ಗೋಟೂರ ಗ್ರಾಮದ ಹೊರವಲಯದಲ್ಲಿ(ಕಾಳಗಿ ರಸ್ತೆ ಮಾರ್ಗ) ನಿರ್ಮಾಣಗೊಂಡಿರುವ ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನವು ಸೋಮವಾರ (ಮೇ.12) ಲೋಕಾರ್ಪಣೆಗೊಳ್ಳಲಿದೆ.

ಗ್ರಾಮದಲ್ಲಿ ಹೇಮರಡ್ಡಿ ಮಲ್ಲಮ್ಮ ಮಂದಿರ ನಿರ್ಮಿಸುವ ಭಕ್ತರ ಬಹುವರ್ಷಗಳ ಕನಸು ನನಸಾಗಿದ್ದು, ಊರಲ್ಲಿ ಸಂಭ್ರಮ ಮನೆ ಮಾಡಿದೆ.

ಹಿರಿಯರ ಸಂಕಲ್ಪದಂತೆ ಊರೊಳಗಿನ ಒಂದು ನಿವೇಶನದಲ್ಲಿ ಮೇ 10, 2001ರಂದು ಭರತನೂರಿನ ಚಿಕ್ಕಗುರುನಂಜೇಶ್ವರ ಸ್ವಾಮೀಜಿ, ಕಾಳಗಿ ಶಿವಬಸವ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಅಂದು ಸಚಿವರಾಗಿದ್ದ ಬಾಬುರಾವ ಚಿಂಚನಸೂರ(ಚಿತ್ತಾಪುರ ಕ್ಷೇತ್ರದ ಶಾಸಕರಾಗಿದ್ದರು) ಹಾಗೂ ಸೇಡಂ ಶಾಸಕರಾಗಿದ್ದ ಬಸವಂತರೆಡ್ಡಿ ಮೋತಕಪಲ್ಲಿ ಅವರು ಭೂಮಿ ಪೂಜೆ ನೆರವೇರಿಸಿದ್ದರು. ಅದರಂತೆ ಭರತನೂರ ಮತ್ತು ಕಾಳಗಿ ಶ್ರೀಗಳು ತಲಾ ₹ 1001 ದೇಣಿಗೆ ನೀಡಿ ಶುಭ ಹಾರೈಸಿದ್ದರು.

ಜಿ.ಪಂ ಸದಸ್ಯರಾಗಿದ್ದ ಜಗದೇವ ಗುತ್ತೇದಾರ ಕೊಳವೆಬಾವಿ ಕೊರೆಯಿಸಿದರು. ಆದರೆ ಮಂದಿರಕ್ಕೆ ಸ್ಥಳಾವಕಾಶ ಕೊರತೆಯಾಗುತ್ತದೆ ಎಂದು ದಿನದೂಡಲಾಗುತ್ತಿತ್ತು. ಆದರೆ ಸಚಿವರಾಗಿದ್ದ ಬಾಬುರಾವ ಚಿಂಚನಸೂರ ಅವರು, ₹1 ಲಕ್ಷ ನೀಡಿ ಕಾಳಗಿ ಮುಖ್ಯರಸ್ತೆ ಬದಿಯಲ್ಲಿ 1.7 ಗುಂಟೆ ಜಮೀನು ಖರೀದಿಗೆ ಪ್ರಮುಖ ಪಾತ್ರ ವಹಿಸಿದ್ದಾರೆ.

ಇಲ್ಲಿ ಗರ್ಭಗುಡಿ ಕಟ್ಟಲು ಆರಂಭಿಸಿದ್ದರೂ ವೇಗ ಮಾತ್ರ ಆಮೆಗತಿಗೆ ತೆರಳಿತು. ವರ್ಷಗಳು ಉರುಳುತ್ತಿದ್ದರೂ ಮಂದಿರ ಮಾತ್ರ ಮೇಲಕ್ಕೇಳಲಿಲ್ಲ.

ಎಲ್ಲವನ್ನು ಗಮನಿಸಿದ ಊರಿನ ರೆಡ್ಡಿ ಜನಾಂಗದ ಯುವಪಡೆಯು ಹಿರಿಯರ ಮಾರ್ಗದರ್ಶನದಲ್ಲಿ 2018ರ ವೇಳೆಗೆ ದೇವಸ್ಥಾನದ ಸಮಿತಿಯನ್ನು ವಹಿಸಿಕೊಂಡರು. ಅವಿರತ ಶ್ರಮಿಸಿ ಕ್ಷೇತ್ರದ ಶಾಸಕ ಡಾ.ಅವಿನಾಶ ಜಾಧವ ಅವರಿಂದ ₹ 20 ಲಕ್ಷಕ್ಕೂ ಅಧಿಕ ಅನುದಾನ ಪಡೆದು ಮತ್ತು ಎಲ್ಲರ ಸಹಕಾರದೊಂದಿಗೆ ಸುಸಜ್ಜಿತ ಮಂದಿರ ನಿರ್ಮಾಣ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

25ನೇ ವರ್ಷಕ್ಕೆ ಈಡೇರಿದ ಭಕ್ತರ ಕನಸು ಈಗ ಮಂದಿರ ಲೋಕಾರ್ಪಣೆಗೆ ಸಜ್ಜುಗೊಂಡಿದೆ. ಈ ನಿಮಿತ್ತ ಮುದಗಲ್ ಪೂಜ್ಯರಿಂದ 11 ದಿನ ಬಸವ ಚರಿತಾಮೃತ ಪ್ರವಚನ ಕಾರ್ಯಕ್ರಮ ನಡೆಸಿದ್ದಾರೆ. ಸೋಮವಾರ (ಮೇ.12) ಬೆಳಿಗ್ಗೆ 8.30ಗಂಟೆಗೆ ಹೇಮರಡ್ಡಿ ಮಲ್ಲಮ್ಮ ಮೂರ್ತಿ ಪ್ರತಿಷ್ಠಾಪನೆ ನೆರವೇರಲಿದೆ.

ಬೆಳಿಗ್ಗೆ 9.30ಕ್ಕೆ ಕಳಸಾರೋಹಣ ಮತ್ತು ದೇವಸ್ಥಾನದ ಲೋಕಾರ್ಪಣೆ ಜರುಗಲಿದೆ. ಬೆಳಿಗ್ಗೆ 10.30ಕ್ಕೆ ಭರತನೂರ, ಹೊನ್ನಕಿರಣಗಿ, ಹೆಡಗಿಮದ್ರಾ, ನರನಾಳ, ಬೆಳಗುಂಪಾ ಶ್ರೀಗಳ ಸಾನ್ನಿಧ್ಯದಲ್ಲಿ ಧರ್ಮಸಭೆ ನಡೆಯಲಿದೆ. ಸಚಿವರು, ಶಾಸಕರು ಸೇರಿದಂತೆ ಅನೇಕ ಗಣ್ಯರು, ಭಕ್ತರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.

ಮಂದಿರ ನಿರ್ಮಾಣ ಮಾಡಿದ್ದಷ್ಟೇ ಅಲ್ಲ. ಮುಂದಿನ ದಿನಗಳಲ್ಲಿ ಗಿಡಮರ ಬೆಳೆಸಿ, ಭಕ್ತರ ಪ್ರಾರ್ಥನೆಯ ಶ್ರದ್ಧಾಕೇಂದ್ರವಾಗಿ ಪರಿವರ್ತಿಸುವ ಗುರಿಯಿದೆ..
ರಾಮನಗೌಡ ಜೆ. ಮಾಲಿಪಾಟೀಲ, ಅಧ್ಯಕ್ಷ, ದೇವಸ್ಥಾನ ಸಮಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.