ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿ.ಜಿ.‌ಆಸ್ಪತ್ರೆ ಉದ್ಘಾಟಿಸಿದ ಶಾಸಕ

30 ಆಮ್ಲಜನಕ ಸಿಲಿಂಡರ್‌ ಸಹಿತ ಬೆಡ್‌ಗಳ ಸೌಲಭ್ಯ
Last Updated 9 ಮೇ 2021, 4:43 IST
ಅಕ್ಷರ ಗಾತ್ರ

ಸೇಡಂ: ತಾಲ್ಲೂಕಿನ ಮುಧೋಳ ಕ್ರಾಸ್ ಬಳಿಯ ಗುಂಡೇಪಲ್ಲಿ ಗ್ರಾಮದಲ್ಲಿ ರಾಜಕುಮಾರ ಪಾಟೀಲ ತೆಲ್ಕೂರ ಅಭಿಮಾನಿ ಬಳಗದಿಂದ ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ನಿರ್ಮಾಣಗೊಂಡ 30 ಆಮ್ಲಜನಕ ಸಿಲಿಂಡರ್‌ ಸಹಿತ ಬೆಡ್‌ಗಳ ಸೌಲಭ್ಯ ಹೊಂದಿರುವ ವಿ.ಜಿ.ಕೋವಿಡ್ ಆಸ್ಪತ್ರೆಯನ್ನು ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಬುಧವಾರ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರ ಅನೇಕ ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಂಡಿದೆ. ಈಗಾಗಲೇ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಸಹ ಆಕ್ಸಿಜನ್ ಸಹಿತ ಬೆಡ್‌ಗಳನ್ನು ಸ್ಥಾಪಿಸಲಾಗಿದೆ. ಜೊತೆಗೆ ಸೇಡಂ ಕ್ಷೇತ್ರದಲ್ಲಿಯೇ ಯಾವುದೇ ರೀತಿಯ ಸಮಸ್ಯೆಗಳಾದಂತೆ ನೋಡಿಕೊಳ್ಳಲಾಗುತ್ತಿದ್ದು, ಕೋಡ್ಲಾದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಕೇಂದ್ರವನ್ನು ಕೋವಿಡ್ ಕೇರ್ ಕೇಂದ್ರವನ್ನಾಗಿ ಪರಿವರ್ತಿಸಲಾಗಿದೆ. ಜೊತೆಗೆ ಮುಧೋಳ ಭಾಗದಲ್ಲಿ ಖಾಸಗಿಯವರು ವಿ.ಜಿ.ಕೋವಿಡ್ ಆಸ್ಪತ್ರೆಯನ್ನು ಸ್ಥಾಪಿಸಿರುವ ಕ್ರಮ ಸ್ವಾಗತಾರ್ಹ. ಈ ಆಸ್ಪತ್ರೆಗೆ ಬೇಕಾದ ಸಹಾಯ ಸಹಕಾರವನ್ನು ತಾಲ್ಲೂಕು ಆಡಳಿತ ಮತ್ತು ಜಿಲ್ಲಾಡಳಿತ ನೀಡಲಿದೆ’ ಎಂದರು.

‘ಆಸ್ಪತ್ರೆಯಲ್ಲಿ ನುರಿತ 7 ತಜ್ಞ ವೈದ್ಯರು, 7 ಜನ ನರ್ಸಿಂಗ್ ಸೇವಕರು ಸೇರಿದಂತೆ ಒಟ್ಟು 25-30 ಜನ ಕಾರ್ಯನಿರ್ವಹಿಸಲಿದ್ದಾರೆ. ಆಮ್ಲಜನಕ ಸಿಲಿಂಡರ್‌ಗಳನ್ನು ಒಳಗೊಂಡಿರುವ ಈ ಆಸ್ಪತ್ರೆಗೆ ಕೋವಿಡ್ಸೋಂಕಿತರನ್ನು ಆದಷ್ಟು ಶೀಘ್ರದಲ್ಲಿ ಗುಣಪಡಿಸಲಿದೆ. ಇದರಿಂದಾಗಿಈ ಭಾಗದ ಕೋವಿಡ್ ಸೋಂಕಿತರು ಹೆದರುವ ಅವಶ್ಯಕತೆ ಇಲ್ಲ’ಎಂದರು.

ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರ್, ಡಾ.ಸದಾನಂದ ಶೇರಿ, ಪಿಎಸ್ಐ ನಾನಾಗೌಡ, ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ನಾಗಪ್ಪ ಕೊಳ್ಳಿ, ಬಿಜೆಪಿ ನಗರ ಘಟಕದ ಅಧ್ಯಕ್ಷ ಅನೀಲ ಐನಾಪೂರ, ಬಿಜೆಪಿ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಓಂಪ್ರಕಾಶ ಪಾಟೀಲ ತರನಳ್ಳಿ, ನಾಗೀಂದ್ರಪ್ಪ ಶಿಲಾರಕೋಟ, ವಿಜಯಕುಮಾರ ಆಡಕಿ, ವೆಂಕಟರಾವ ಮಿಸ್ಕಿನ್, ಗಣೇಶ ನೀಲಹಳ್ಳಿ, ಶಶಿಕಾಂತ ಬೆಡಸೂರ, ಅನೀಲ ರನ್ನೆಟ್ಲಾ, ಇನಾಯತ್ ರುದ್ನೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT