ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಡಿ: ಕೂಲರ್‌ಗಳಿಗೆ ಹೆಚ್ಚಿದ ಬೇಡಿಕೆ

Published 16 ಏಪ್ರಿಲ್ 2024, 6:04 IST
Last Updated 16 ಏಪ್ರಿಲ್ 2024, 6:04 IST
ಅಕ್ಷರ ಗಾತ್ರ

ವಾಡಿ: ಜನರು ಬಿಸಿಲಿನ ತಾಪದಿಂದ ತತ್ತರಿಸಿ ಹೋಗಿದ್ದಾರೆ. ಬಿಸಿಲಿನ ಝಳ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಜನರು ಹೈರಾಣಾಗುತ್ತಿದ್ದಾರೆ. ಮನೆಯಿಂದ ಹೊರಬರಲಾರದಷ್ಟು ಬಿಸಿಲು ಪ್ರತಾಪ ತೋರುತ್ತಿದ್ದು, ಮಧ್ಯಾಹ್ನದ ಹೊತ್ತಿಗೆ ರಸ್ತೆಗಳು ಬಿಕೋ ಎನ್ನುತ್ತಿವೆ. ಸೂರ್ಯನ ತಾಪಕ್ಕೆ ಹಗಲು ಭೂಮಿ ಕಾದ ಕೆಂಡವಾಗುತ್ತಿದ್ದು, ಇದರಿಂದ ರಾತ್ರಿ ಧಗೆ ಹೆಚ್ಚಾಗುತ್ತಿದೆ. ಮನೆಗಳ ಮೇಲ್ಚಾವಣಿ ಕಾದ ಹಂಚಿನಂತಾಗುತ್ತವೆ. ರಸ್ತೆಯುದ್ದಕ್ಕೂ ಬಿಸಿ ಗಾಳಿ ಮುಖಕ್ಕೆ ರಾಚಿ ಅಲ್ಪ ಸಂಚಾರದಲ್ಲೇ ಸುಸ್ತು ಹೊಡೆಯುವಂತಾಗಿದೆ.

ಈ ಅಪಾಯಕಾರಿ ಬಿಸಿಲ ಶಾಖ ತಪ್ಪಿಸಿಕೊಳ್ಳೋದು ಜನರಿಗೆ ಸವಾಲಾಗಿದೆ. ಶಾಖದ ಗಾಳಿಯಿಂದ ತಪ್ಪಿಸಿಕೊಂಡು ತಮ್ಮನ್ನು ತಂಪಾಗಿರಿಸಿಕೊಳ್ಳಲು ಜನರು ಕೂಲರ್‌ಗಳ ಮೊರೆ ಹೋಗುತ್ತಿದ್ದಾರೆ.

ಬಿರುಬಿಸಿಲಿನ ತಾಪಮಾನ 43 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗುತ್ತಿದ್ದಂತೆ ಜನ ಹಾಗೂ ಜಾನುವಾರುಗಳು ನೀರು, ನೆರಳಿಗೆ ಪರಿತಪಿಸುವಂತಾಗಿದೆ. ಜನರು ಮಧ್ಯಾಹ್ನ ಮನೆಯಿಂದ ಹೊರಬರಲು ಸಾಧ್ಯವಾಗದ ಮಟ್ಟಿಗೆ ಬಿಸಿಲು ಇರುತ್ತದೆ. ಹೀಗಾಗಿ ಪಟ್ಟಣದ ನಾನಾ ಅಂಗಡಿಗಳಲ್ಲಿ ಏರ್‌ ಕೂಲರ್‌ಗಳಿಗೆ ಭಾರಿ ಬೇಡಿಕೆ ಬಂದಿದೆ. ಸಾಮರ್ಥ್ಯ‌ಕ್ಕನುಗುಣವಾಗಿ ಗಾತ್ರ ಮತ್ತು ಬೆಲೆ ಆಧರಿಸಿ ಕೂಲರ್‌ಗಳ ಮಾರಾಟ ಸಾಗಿದೆ. ಪಟ್ಟಣದ 10ಕ್ಕೂ ಹೆಚ್ಚು ಅಂಗಡಿಗಳಲ್ಲಿ ಕಳೆದ ತಿಂಗಳಿಂದಲೂ ನಿತ್ಯ ಕನಿಷ್ಠ 6ರಿಂದ 10 ಏರ್‌ಕೂಲರ್‌ಗಳು ಮಾರಾಟವಾಗುತ್ತಿವೆ.

ಮುಖ್ಯರಸ್ತೆಯ ಎಲೆಕ್ಟ್ರಾನಿಕ್‌ ಅಂಗಡಿಗಳು ಹಾಗೂ ಕೆಲವು ಸಣ್ಣ ಎಲೆಕ್ಟ್ರಾನಿಕ್‌ ವಸ್ತುಗಳ ದುರಸ್ತಿ ಅಂಗಡಿಗಳಲ್ಲಿ ಸಹ ಏರ್‌ ಕೂಲರ್‌ಗಳ ಮಾರಾಟ ಹಾಗೂ ಅವುಗಳ ದುರಸ್ತಿ ವಹಿವಾಟು ಕೂಡ ಹೆಚ್ಚಳವಾಗಿದೆ.

ತಿಂಗಳ ಹಿಂದೆ ಏರ್‌ ಕೂಲರ್‌ಗಳ ಬೆಲೆ ಕಡಿಮೆ ಇತ್ತು. ಆದರೆ ಈಗ ಝಳ ಹೆಚ್ಚಳದಿಂದ ಬೇಡಿಕೆಯೂ ಹೆಚ್ಚಿದೆ. ಸಾಮಾನ್ಯ ಕೂಲರ್‌ಗಳ ಬೆಲೆ ಮೊದಲು ₹3,500 ಪ್ರಾರಂಭವಾಗಿ 8 ಸಾವಿರದವರೆಗೆ ಇತ್ತು. ಆದರೀಗ ಬಿಸಿಲು ಬಿಸಿಲು ಹೆಚ್ಚಾಗುತ್ತಿದ್ದು, ₹4 ಸಾವಿರದಿಂದ ₹10 ಸಾವಿರದವರೆಗೂ ಏರ್‌ ಕೂಲರ್‌ಗಳ ದರ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT