ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐನೋಳ್ಳಿ ಬಸವಣ್ಣ ದೇವರ ರಥೋತ್ಸವ

Published 10 ಮೇ 2024, 5:38 IST
Last Updated 10 ಮೇ 2024, 5:38 IST
ಅಕ್ಷರ ಗಾತ್ರ

ಚಿಂಚೋಳಿ: ತಾಲ್ಲೂಕಿನ ಐನೋಳ್ಳಿ ಗ್ರಾಮದ ಬಸವಣ್ಣ ದೇವರ 284ನೇ ರಥೋತ್ಸವ ಗುರುವಾರ ಸಂಜೆ ತೇರು ಮೈದಾನಲ್ಲಿ ಭಕ್ತಿ ಶ್ರದ್ಧೆಯಿಂದ ಜರುಗಿತು. ಗ್ರಾಮದಲ್ಲಿ‌ ಪಲ್ಲಕ್ಕಿ ಉತ್ಸವ ನಡೆಸಿದ ಭಕ್ತರು ಬುಧವಾರ ಅಗ್ನಿ ಪೂಜೆ ನಡೆಸಿದರು.

ಬೆಳಿಗ್ಗೆ ಕೆಂಡ ಹಾಯುವ ಅಗ್ನಿ ಪ್ರವೇಶ ನಡೆಸಿ ಸಂಜೆಗೆ ರಥೋತ್ಸವ ನಡೆಯಿತು. ಐನೋಳ್ಳಿ ಸೇರಿದಂತೆ ಸುತ್ತಲಿನ ಹಳ್ಳಿಗಳ ಸಾವಿರಾರು ಭಕ್ತರು ಜಯಘೋಷಗಳೊಂದಿಗೆ ರಥೋತ್ಸವ ನಡೆಸಿದರು. ನಂತರ ಬಸವಣ್ಣ ದೇವರ ದೇವಾಲಯಕ್ಕೆ ತೆರಳಿ ಭಕ್ತರು ಉತ್ಸವ ಮೂರ್ತಿಗೆ ನಮಿಸಿದರು.

ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಬಸವರಾಜ ಪುಣ್ಯಶೆಟ್ಟಿ, ಜಿ.ಪಂ. ಮಾಜಿ ಅಧ್ಯಕ್ಷ ದೀಪಕನಾಗ ಪುಣ್ಯಶೆಟ್ಟಿ, ನೀಲಕಂಠಪ್ಪ ಚಟ್ನಳ್ಳಿ, ಬಕ್ಕಪ್ಪ ಕಾಮಣಿ, ರಾಮಯ್ಯ ಸ್ವಾಮಿ, ಹಣಮಂತ ಹಿರೇಮನಿ, ಗಂಗಾಧರ ಬಡಿಗೇರ, ನಂದಕುಮಾರ ಅವುಂಟಗಿ, ವಿಜಯಕುಮಾರ ರೊಟ್ಟಿ, ಶ್ರೀಮಂತ ಕಟ್ಟಿಮನಿ ಸೇರಿದಂತೆ ಅನೇಕರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT