ಮಂಗಳವಾರ, ನವೆಂಬರ್ 19, 2019
29 °C
ಕಲಬುರ್ಗಿಯ ಗುರುಪಾದೇಶ್ವರ ಕಾಲೇಜಿನ ವಿದ್ಯಾರ್ಥಿ

ಜೂಡೊದಲ್ಲಿ ಅಭಿಲಾಷ್ ರಾಜ್ಯಕ್ಕೆ ಪ್ರಥಮ

Published:
Updated:
Prajavani

ಕಲಬುರ್ಗಿ: ಪದವಿಪೂರ್ವ ಶಿಕ್ಷಣ ಇಲಾಖೆಯಿಂದ ಬೆಳಗಾವಿಯಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಜೂಡೊ ಸ್ಪರ್ಧೆಯಲ್ಲಿ ನಗರದ ಗುರುಪಾದೇಶ್ವರ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯು ವಿಜ್ಞಾನ ವಿದ್ಯಾರ್ಥಿ ಅಭಿಲಾಷ್ ತಳವಾರ ರಾಜ್ಯಮಟ್ಟದಲ್ಲಿ ಪ್ರಥಮ ಬಹುಮಾನ ಪಡೆದಿದ್ದಾನೆ.

ಕಾಲೇಜಿಗೆ ಮತ್ತು ಕಲಬುರ್ಗಿ ಜಿಲ್ಲೆಗೆ ಕೀರ್ತಿ ತಂದ ಪ್ರಯುಕ್ತ ಸಂಸ್ಥೆ ಸಂಸ್ಥಾಪಕ ಎಂ.ಬಿ. ಅಂಬಲಗಿ ಮತ್ತು ಕಾಲೇಜಿನ ಆಡಳಿತ ಮಂಡಳಿ ಅಭಿಲಾಶನ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ. ತರಬೇತಿದಾರ ಅಶೋಕ ಮಾರ್ಗದರ್ಶನ ಮಾಡುತ್ತಿದ್ದಾರೆ. ಅಭಿಲಾಷ್‌ ಚಿಂಚೋಳಿ ತಾಲ್ಲೂಕಿನ ಪಸ್ತಪುರ ಗ್ರಾಮದ ರೈತ ರಮೇಶ ತಳವಾರ ಅವರ ಮಗ. ವಿದ್ಯಾರ್ಥಿಗೆ ಸಂಸ್ಥೆ ಎಲ್ಲ ರೀತಿಯ ಸಹಾಯ ಮಾಡಲಿದೆ ಎಂದು ಸಂಸ್ಥೆ ಕಾರ್ಯದರ್ಶಿ ಗುರುಪ್ರಸಾದ ಅಂಬಲಗಿ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)