ಸೋಮವಾರ, ಜನವರಿ 24, 2022
28 °C

ಗಮನ ಸೆಳೆದ ಕಲಬುರಗಿ ಕಲಾ ಮಹೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ನಗರದ ಮಾತೋಶ್ರೀ ನೀಲಗಂಗಮ್ಮ ಗುರಪ್ಪ ಅಂದಾನಿ ಆರ್ಟ್‌ ಗ್ಯಾಲರಿಯಲ್ಲಿ ಶುಕ್ರವಾರ ಆರಂಭವಾದ ದಿ ಐಡಿಯಲ್ ಫೈನ್ ಆರ್ಟ್‌ ಸಂಸ್ಥೆಯ 52ನೇ ಕಲಬುರಗಿ ಕಲಾ ಮಹೋತ್ಸವಕ್ಕೆ ಹಿರಿಯ ಕಲಾವಿದ ಬಸವರಾಜ ಉಪ್ಪಿನ ಅವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಕಲಾವಿದ ಯಶಸ್ಸನ್ನು ಗಳಿಸಬೇಕಾದರೆ ಕಠಿಣ ಪರಿಶ್ರಮ ಮುಖ್ಯ. ಕಲಾ ಶಿಕ್ಷಣ ಪ್ರಾಯೋಗಿಕ ಹಾಗೂ ಕಾಲ್ಪನಿಕ ಇವೆರಡರ ಸಂಗಮವಾಗಿರುವುದರಿಂದ ಕಲಾ ವಿದ್ಯಾರ್ಥಿಗಳು ತಮ್ಮದೇ ಆದ ಕಲ್ಪನೆಯ ಪ್ರಪಂಚ ಕಟ್ಟಿಕೊಡಬೇಕು. ಅಂದಾಗ ಮಾತ್ರ ನಿಮ್ಮಲ್ಲಿಯ ಒಬ್ಬ ಪ್ರಬುದ್ಧ ಕಲಾವಿದ ಹೊರಬರಲು ಸಾಧ್ಯವಾಗುತ್ತದೆ’ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಡಾ.ವಿ.ಜಿ. ಅಂದಾನಿ ಮಾತನಾಡಿ, ‘ಒಬ್ಬ ಕಲಾವಿದ ರೂಪುಗೊಳ್ಳಬೇಕಾದರೆ ಕಲಾ ವಿದ್ಯಾರ್ಥಿಗಳು ಅನೇಕ ಹಿರಿಯ ಕಲಾವಿದರ ಕಲಾಕೃತಿಗಳನ್ನು ಅವಲೋಕನ ಮಾಡಬೇಕು. ಕಲಾಕೃತಿ ರಚನೆಯ ಅನೇಕ ಮಾಧ್ಯಮಗಳ ಪರಿಚಯ ಹಾಗೂ ಬಳಕೆಯನ್ನು ಪರಿಪೂರ್ಣವಾಗಿ ತಿಳಿದುಕೊಳ್ಳಬೇಕು. ಅಂದಾಗ ಮಾತ್ರ ಕಲಾ ವಿದ್ಯಾರ್ಥಿಗಳು ಸಮರ್ಥ ಕಲಾವಿದನಾಗಿ ಬೆಳೆಯಲು ಸಹಾಯಕಾರಿಯಾಗುತ್ತದೆ. ಈ ಸಂಸ್ಥೆ ಪ್ರತಿವರ್ಷ 20 ಕಲಾ ವಿದ್ಯಾರ್ಥಿಗಳಿಗೆ ನಗದು ರೂಪದಲ್ಲಿ ಪ್ರಶಸ್ತಿಗಳನ್ನು ನೀಡುವ ಮೂಲಕ ಅವರಿಗೆ ಪ್ರೋತ್ಸಾಹವನ್ನು ನೀಡುತ್ತ ಬಂದಿದೆ’ ಎಂದರು.

ಕರ್ನಾಟಕ ಲಲಿತಾ ಕಲಾ ಅಕಾಡೆಮಿಯ 49ನೇ ವಾರ್ಷಿಕ ಕಲಾ ಪ್ರದರ್ಶನದಲ್ಲಿ ಪ್ರಶಸ್ತಿ ಪಡೆದ ಕಲಾವಿದರಾದ ಚಂದ್ರಶೇಖರ ಪಾಟೀಲ, ಸಂತೋಷ ರಾಠೋಡ ಹಾಗೂ ದಸ್ತಗಿರ ಮಸ್ತಾನಸಾಬ್‌ ಅವರನ್ನು ಗೌರವಿಸಲಾಯಿಲಾಯಿತು. ಕರ್ನಾಟಕ ಲಲಿತ ಕಲಾ ಅಕಾಡೆಮಿ ಸದಸ್ಯ ಡಾ.ಎಚ.ವಿ. ಮಂತ್ತಟ್ಟಿ ಮಾತನಾಡಿದರು.

ಕಾವೇರಿ ಪ್ರಾರ್ಥನೆ ಹಾಡಿದಳು. ಎಂ.ಎಂ.ಕೆ ಕಾಲೇಜ ಆಫ್‌ ವಿಜ್ಯುವಲ್‌ ಆರ್ಟ್‌ನ ಪ್ರಾಚಾರ್ಯ ಶಶಿರಾವ ಬಿರಾದಾರ ಸ್ವಾಗತಿಸಿದರು. ದಿ ಐಡಿಯಲ್ ಫೈನ್ ಆರ್ಟ್ ಇನ್‌ಸ್ಟಿಟ್ಯೂಟ್‍ನ ಪ್ರಚಾರ್ಯ ಲೋಕಯ್ಯ ಎ.ಎಂ ವಂದಿಸಿದರು. ಉಪನ್ಯಾಸಕರಾದ ಚಂದ್ರಹಾಸ ಜಾಲಿಹಾಳ ನಿರೂಪಿಸಿದರು. ಕಲಾವಿದರಾದ ಶಶಿಕಾಂತ ಮಾಶಾಳಕರ, ಪ್ರಕಾಶ ಗಡಕರ, ವೀರಭದ್ರಶೆಟ್ಟಿ, ಸತೀಶ ಮಲ್ಲೆಪೂರೆ, ಆಕಾಶ ಡಿ. ರಾಮಗಿರಿ ಪೊಲೀಸ ಪಾಟೀಲ, ಗೌರೀಶ ಅಂದಾನಿ ಇದ್ದರು.

ಈ ಚಿತ್ರಕಲಾ ಪ್ರದರ್ಶನ ಜನವರಿ 4 ರವರೆಗೆ ಮುಂಜಾನೆ 11 ಗಂಟೆಯಿಂದ ಮಧ್ಯಾಹ್ನ 2ರವರಗೆ ಇರುತ್ತದೆ. 50ಕ್ಕೂ ಹೆಚ್ಚು ವಿದ್ಯಾರ್ಥಿಗಳ ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.