ಕಲಬುರಗಿ: ‘12ನೇ ಶತಮಾನದಲ್ಲಿದ್ದವರೆಲ್ಲ ಕೊಡುವಂತವರಾಗಿದ್ದರು. ಯಾರೂ ಬೇಡುವವರಿರಲಿಲ್ಲ. ಸ್ವಾಭಿಮಾನದ ಬದುಕು ಕಲಿಸಿದವರೇ ಶರಣರು’ ಎಂದು ಅಕ್ಕಮಹಾದೇವಿ ಆಶ್ರಮದ ಪ್ರಭುಶ್ರೀ ತಾಯಿ ಹೇಳಿದರು.

ನಗರದ ಡಾ.ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಮಂಗಳವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯಿತಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾಯಕ ಶರಣರಾದ ಮಾದಾರ ಚನ್ನಯ್ಯ, ಮಾದಾರ ಧೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ ಹಾಗೂ ಉರಿಲಿಂಗಪೆದ್ದಿ ಅವರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

‘ಬಸವಾದಿ ಪ್ರಮಥರು 770 ಅಮರಗಣಂಗಳನ್ನು (ಶರಣರನ್ನು) ಅನುಭವ ಮಂಟಪದಲ್ಲಿ ಸೇರಿಸಿದ್ದರು. ವಿಶ್ವಮಾನವರಾದ ಶರಣರು ಎಲ್ಲಾ ರೀತಿಯ ಭೇದಗಳನ್ನು ಹೊಡೆದೋಡಿಸಲು ಶ್ರಮಿಸಿದರು. ಆದರೆ, ಅವರನ್ನು ನಾವು ಒಂದೊಂದು ಜಾತಿಗೆ ಸೀಮಿತ ಮಾಡಿದ್ದೇವೆ’ ಎಂದು ವಿಷಾದ ವ್ಯಕ್ತಪಡಿಸಿದರು.

‘ಮಾದಾರ ಚನ್ನಯ್ಯನವರು ರಾಜನ ಕುದುರೆಲಾಯದಲ್ಲಿ ಕೆಲಸಕ್ಕಿದ್ದರು. ಹುಲ್ಲು ಕೊಯ್ಯುವುದು ಅವರ ಕಾಯಕವಾಗಿತ್ತು. ಅಂಬಲಿಯನ್ನು ಶಿವನಿಗರ್ಪಿಸಿದ ಮಹಾನ್ ಶರಣ. ಇವರ 10 ವಚನಗಳು ದೊರೆತಿವೆ. ಚರ್ಮವನ್ನು ಹದಗೊಳಿಸಿ ಪಾದರಕ್ಷೆ ಹೊಲಿಯುವ ಕಾಯಕ ಮಾಡುತ್ತಿದ್ದ ಮಾದಾರ ಧೂಳಯ್ಯನವರ 102 ವಚನಗಳು ಲಭ್ಯ ಇವೆ. ಕಾಮಧೂಮ ಧೂಳೇಶ್ವರ ಅವರ ವಚನಗಳ ಅಂಕಿತನಾಮವಾಗಿತ್ತು. ಡೋಹರ ಕಕ್ಕಯ್ಯನವರು ಬಸವಣ್ಣನವರ ಆಪ್ತರಾಗಿದ್ದರು’ ಎಂದರು.

‘ಸಮಗಾರ ಹರಳಯ್ಯ ದಂಪತಿ ತಮ್ಮ ತೊಡೆಯ ಚರ್ಮದಿಂದ ಬಸವಣ್ಣನವರಿಗಾಗಿ ಪಾದರಕ್ಷೆ ತಯಾರಿಸಿ ಅರ್ಪಿಸಿದ್ದರು. ಉರಿಲಿಂಗ ಪೆದ್ದಿ ಅವರು ಉರಿಲಿಂಗ ದೇವರಿಂದ ಲಿಂಗದೀಕ್ಷೆ ಪಡೆದು ಜ್ಞಾನಿಗಳಾದರು. ಕಲ್ಲೇ ಲಿಂಗವೆಂದು ಭಾವಿಸಿ ಪೂಜೆ ಮಾಡಿದರು’ ಎಂದು ಕಾಯಕ ಶರಣರ ಇತಿಹಾಸವನ್ನು ತಿಳಿಸಿದರು.

ಶಾಸಕ ಅಲ್ಲಮಪ್ರಭು ಪಾಟೀಲ ಮಾತನಾಡಿ, ‘ಮಾದಾರ ಚನ್ನಯ್ಯ, ಮಾದಾರ ಧೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ ಹಾಗೂ ಉರಿಲಿಂಗಪೆದ್ದಿ ಅವರು ತಮ್ಮ ಕಾಯಕ ನಿಷ್ಠೆಯಿಂದಲೇ ಗುರುತಿಸಿಕೊಂಡಿದ್ದರು. ಕಾಯಕದ ಮೇಲೆ ಜಾತಿ ಮಾಡಬಾರದು ಎಂದು ಬಸವಣ್ಣನವರು ಎಲ್ಲಾ ಜಾತಿಯ ಶರಣರನ್ನು ಸೇರಿಸಿ ಅಲ್ಲಮಪ್ರಭು ಅಧ್ಯಕ್ಷತೆಯಲ್ಲಿ ಅನುಭವ ಮಂಟಪವನ್ನು ಸ್ಥಾಪಿಸಿದರು. ಎಲ್ಲಾ ಶರಣರು ಕಾಯಕ, ದಾಸೋಹ, ವಚನಗಳ ಮೂಲಕ ಈ ಸಮಾಜಕ್ಕೆ ಕೊಡುಗೆ ನೀಡಿದರು’ ಎಂದರು.

‘ಬುದ್ಧ, ಬಸವಣ್ಣ ಸೇರಿದಂತೆ ಆಯಾ ಕಾಲಕ್ಕೆ ಅವತರಿಸಿದ ಮಹಾನ್ ವ್ಯಕ್ತಿಗಳು, ಪವಾಡ ಪುರುಷರು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ದೊರೆತ ನಂತರ ಡಾ.ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನದಿಂದ ಸಮಾಜದಲ್ಲಿ ಸಮಾನತೆ ಬಂದಿದೆ’ ಎಂದು ಹೇಳಿದರು.

ಕೋಡ್ಲಾ ಉರಿಲಿಂಗಪೆದ್ದಿ ಮಠದ ಉಪಾಧ್ಯಕ್ಷ ಶಂಕರ ಕೋಡ್ಲಾ ಮಾತನಾಡಿದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷೆ ಚಂದ್ರಿಕಾ ಪರಮೇಶ್ವರ, ಮೇಯರ್ ವರ್ಷಾ ರಾಜೀವ ಜಾನೆ, ಜಿಲ್ಲಾಧಿಕಾರಿ ಕಚೇರಿ ಸಹಾಯಕ ಅಧಿಕಾರಿ ಶಿವಪ್ರಭು ಹಿರೇಮಠ, ಶರಣ ಡೋಹರ ಕಕ್ಕಯ್ಯ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಸಾಯಬಣ್ಣ ಹೋಳ್ಕರ್, ಅಖಿಲ ಕರ್ನಾಟಕ ಬಸವ ಮಾದಾರ ಚನ್ನಯ್ಯ ಸಂಘದ ಅಧ್ಯಕ್ಷ ರುದ್ರಪ್ಪ ಎಸ್.ಹೋಳಕುಂದಾ (ರವಿ ವಾಲಿ), ಶರಣ ಮಾದಾರ ಧೂಳಯ್ಯ ಸಮಾಜದ ಅಧ್ಯಕ್ಷ ರಮೇಶ ಹೊಸಮನಿ, ಶಿವಶರಣ ಹರಳಯ್ಯ ಸಮಾಜದ ಜಿಲ್ಲಾ ಅಧ್ಯಕ್ಷ ಕಾಶಿರಾಯ ನಂದೂರಕರ್, ರಾಜು ವಾಡೇಕರ್, ರುಕ್ಕಪ್ಪ ಕಾಂಬಳೆ, ಚಂದ್ರಕಾಂತ ನಾಟೀಕಾರ, ರಾಮಚಂದ್ರ ಕಾಂಬಳೆ, ಮಂಜುನಾಥ ನಾಲವಾರಕರ್ ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ಜಗದೀಶ್ವರಿ ಅ.ನಾಸಿ ಸ್ವಾಗತಿಸಿದರು. ಶಿವಾನಂದ ಅಣಜಗಿ ನಿರೂಪಿಸಿದರು.

ಸಭಿಕರಿಂದ ಆಕ್ಷೇಪ

ಜಯಂತಿಯಲ್ಲಿ ಕಡಿಮೆ ಜನ ಪಾಲ್ಗೊಂಡಿರುವುದಕ್ಕೆ ಕಾರ್ಯಕ್ರಮದ ಮಧ್ಯೆ ಆಕ್ಷೇಪ ವ್ಯಕ್ತಪಡಿಸಿದ ಸಭಿಕರಾದ ಜನಾಬಾಯಿ ವಾಘ್ಮೊರೆ ಅವರು ‘ಐದು ಸಮಾಜದ ಶರಣರ ಜಯಂತಿ ನಡೀತಾ ಇದೆ. ಜನರೇ ಇಲ್ಲ. ಆಯಾ ಸಮಾಜದ ಅಧ್ಯಕ್ಷರು ಉಪಾಧ್ಯಕ್ಷರು ನೂರುನೂರು ಜನರನ್ನಾದರೂ ಕರೆದುಕೊಂಡು ಬರಬೇಕಿತ್ತು. ಹಿಂದಿನ ವರ್ಷ ಕೂಡ ಹೀಗೆಯೇ ಆಗಿತ್ತು’ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇವರ ಜೊತೆಗೆ ದನಿಗೂಡಿಸಿದ ಡೋಹರ ಕಕ್ಕಯ್ಯ ಸಮಾಜದ ಮುಖಂಡ ರಾಕೇಶ ತುಕಾರಾಮ ಕಾವಳೆ ‘ಜನಪ್ರತಿನಿಧಿಗಳು ಕೂಡ ಜಯಂತಿಯಲ್ಲಿ ಪಾಲ್ಗೊಂಡಿಲ್ಲ. ವೋಟ್ ಮಾತ್ರ ಇವರಿಗೆ ಬೇಕು’ ಎಂದು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.