ಶಹಾಪುರ: ‘ತಾಲ್ಲೂಕಿನ ಶಿರವಾಳ ಪ್ರಾಥಮಿಕ ಆರೋಗ್ಯದ ಕೇಂದ್ರದ 108 ಸಿಬ್ಬಂದಿ ಹಾಗೂ ಶುಶ್ರೂಷಕರು ನಿಷ್ಕಾಳಜಿ ತೋರಿದ್ದರಿಂದ ಮಗು ಮೃತಪಟ್ಟಿದೆ’ ಎಂದು ಆರೋಪಿಸಿ ತಹಶೀಲ್ದಾರ್ ಕಚೇರಿ ಎದುರು ಭೀಮ ಆರ್ಮಿ ಏಕತಾ ಮಿಷನ್ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.
‘ಚಿತ್ತಾಪುರ ತಾಲ್ಲೂಕಿನ ಕೊಲ್ಲೂರ ಗ್ರಾಮದಿಂದ ಶಿರವಾಳ ಗ್ರಾಮವು 12 ಕಿ.ಮೀ ಆಗುತ್ತದೆ. ತುರ್ತು ಸೇವೆಗಾಗಿ ಬಳಸುವ 108 ಸಿಬ್ಬಂದಿ ದೂರವಾಣಿ ಕರೆ ಮಾಡಿದ ನಂತರ ಒಂದು ಗಂಟೆ ತಡವಾಗಿ ಬಂದಿದ್ದಾರೆ. ಹೆರಿಗೆಯಾದ ಮೇಲೆ ಸರಿಯಾದ ಉಪಚಾರ ಸಿಗದೇ ಮಗು ಅಸುನೀಗಿದೆ. ಇದಕ್ಕೆ ಸಿಬ್ಬಂದಿಯೇ ಕಾರಣ’ ಎಂದು ದೂರಿದರು.
ಸಮಿತಿಯ ಪ್ರಮುಖರಾದ ಶರಣುರಡ್ಡಿ ಹತ್ತಿಗುಡೂರ, ಬಸಲಿಂಗಪ್ಪ ಶಿರವಾಳ, ಅಮರೇಶ ದೋರನಹಳ್ಳಿ, ವಿದ್ಯಾಸಾಗರ, ವಿನೋದ, ಸಚಿನ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.