ಸೋಮವಾರ, ಜನವರಿ 17, 2022
18 °C

ಕಸಾ‍ಪ ಅಧ್ಯಕ್ಷರ ಆಯ್ಕೆಗೆ ಇಂದು ಮತದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರಗಿ: ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಹಾಗೂ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಭಾನುವಾರ (ನ. 21) ಬೆಳಿಗ್ಗೆ 8ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದೆ. ಇದಕ್ಕಾಗಿ ನಗರದಲ್ಲಿ 10 ಹಾಗೂ ಎಲ್ಲ ತಾಲ್ಲೂಕು ಕೇಂದ್ರಗಳು ಸೇರಿ 13 ಮತಗಟ್ಟೆಗಳನ್ನು ತೆರೆಯಲಾಗಿದೆ. ಪ್ರತಿಯೊಂದು ಕೇಂದ್ರಕ್ಕೂ ಐವರು ಚುನಾವಣಾ ಸಿಬ್ಬಂದಿ ಹಾಗೂ ಒಬ್ಬ ಪೊಲೀಸರನ್ನು ನಿಯೋಜಿಸಲಾಗಿದೆ.

ಮತದಾರರಿಗೆ ತಲಾ ಎರಡು ಮತಪತ್ರ ನೀಡಲಾಗುವುದು. ರಾಜ್ಯ ಘಟಕದ ಅಧ್ಯಕ್ಷ ಸ್ಥಾನದ ಮತಪತ್ರ ಬಿಳಿ ಬಣ್ಣದ್ದು, ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನದ ಪತಪತ್ರವು ಗುಲಾಬಿ (‍ಪಿಂಕ್‌) ಬಣ್ಣದ್ದಾಗಿರುತ್ತದೆ. ಎರಡೂ ಮತಗಳನ್ನು ಅಕ್ಕಪಕ್ಕದಲ್ಲೇ ಏಕಕಾಲಕ್ಕೆ ಚಲಾಯಿಸಬೇಕಾಗುತ್ತದೆ. ಇದಕ್ಕೆ ನಿಗದಿಪಡಿಸಿದ ಯಾವುದಾದರೂ ಒಂದು ಗುರುತಿನ ಚೀಟಿ ನೀಡುವುದು ಕಡ್ಡಾಯ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆದ ತಹಶೀಲ್ದಾರ್‌ ಪ್ರಕಾಶ ಕುದರಿ ತಿಳಿಸಿದ್ದಾರೆ.

ಮತದಾನ ಮುಗಿದ ಬಳಿಕ; ಸಂಜೆ 5 ಗಂಟೆಗೆ ಎಲ್ಲ ಕೇಂದ್ರಗಳಲ್ಲೂ ಏಕಕಾಲಕ್ಕೆ ಮತ ಎಣಿಕೆ ಆರಂಭವಾಗಲಿದೆ. ಮೂರು ತಾಸಿನ ನಂತರ ಜಿಲ್ಲಾ ಘಟಕದ ಅಧ್ಯಕ್ಷರ ಆಯ್ಕೆಯ ಫಲಿತಾಂಶವೂ ಹೊರಬೀಳಲಿದೆ. ಆದರೆ, ರಾಜ್ಯ ಘಟಕದ ಅಧ್ಯಕ್ಷರಿಗೆ ಹಾಕಿದ ಮತಗಳನ್ನೂ ಆಯಾ ಕೇಂದ್ರಗಳಲ್ಲೂ ಎಣಿಕೆ ಮಾಡಿ, ಆನ್‌ಲೈನ್‌ ಮೂಲಕ ಕೇಂದ್ರ ಕಚೇರಿಗೆ ನೀಡಲಾಗುವುದು. ನಂತರ ಮತಪತ್ರಗಳನ್ನೂ ರವಾನಿಸಲಾಗುವುದು. ಇದರ ಫಲಿತಾಂಶ ಅ. 24ರಂದು ಹೊರಬೀಳಲಿದೆ ಎಂದು ಅವರು ವಿವರಿಸಿದ್ದಾರೆ.

ಗುರುತಿನ ಚೀಟಿಗಳು ಯಾವವು: ಆಧಾರ್‌ ಕಾರ್ಡ್‌, ಪಾಸ್‌ಪೋರ್ಟ್‌, ವಾಹನ ಚಾಲನಾ ಲೈಸನ್ಸ್, ಪಾನ್‌ ಕಾರ್ಡ್‌, ಸರ್ಕಾರಿ ನೌಕರರ ಅಥವಾ ಅಧಿಕೃತ ಕಂಪನಿಗಳು ಉದ್ಯೋಗಿಗಳಿಗೆ ನೀಡಿದ ಗುರುತಿನ ಚೀಟಿ, ಬ್ಯಾಂಕ್‌ ಪಾಸ್‌ಬುಕ್, ಪಡಿತರಚೀಟಿ, ಅಧಿಕೃತ ಜಾತಿ ಪ್ರಮಾಣ ಪತ್ರ, ಮಾಜಿ ಸೈನಿಕರ ಗುರುತಿನ ಕಾರ್ಡ್, ಆಯುಧ ಪರವಾನಗಿ, ಉದ್ಯೋಗ ಖಾತ್ರಿ ಜಾಬ್‌ಕಾರ್ಡ್, ಯಶಸ್ವಿನಿ ಕಾರ್ಡ್‌.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು