ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: 121 ಚಾಲಕರಿಗೆ ಬೆಳ್ಳಿ ಪದಕ ವಿತರಣೆ ಇಂದು

ಸೂಪರ್‌ ಮಾರ್ಕೆಟ್‌ ಬಸ್ ನಿಲ್ದಾಣದ ಉದ್ಘಾಟನೆ; ಹೊಸ ಬಸ್‌ ಲೋಕಾರ್ಪಣೆ
Published 24 ಜನವರಿ 2024, 23:46 IST
Last Updated 24 ಜನವರಿ 2024, 23:46 IST
ಅಕ್ಷರ ಗಾತ್ರ

ಕಲಬುರಗಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಿಂದ ನಗರದ ಸೂಪರ್ ಮಾರ್ಕೆಟ್‍ನಲ್ಲಿ ನಿರ್ಮಿಸಿರುವ ನೂತನ ನಗರ ಸಾರಿಗೆ ಬಸ್ ನಿಲ್ದಾಣದ ಉದ್ಘಾಟನೆ ಗುರುವಾರ ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಬಸ್‌ ನಿಲ್ದಾಣವನ್ನು ಉದ್ಘಾಟಿಸುವರು. ಇದೇ ವೇಳೆ, ಕಲ್ಯಾಣರಥ (ಮಲ್ಟಿ ಎಕ್ಸೆಲ್ ಎ.ಸಿ ಸ್ಲೀಪರ್) ಹಾಗೂ ಅಮೋಘವರ್ಷ (ನಾನ್ ಎ.ಸಿ. ಸ್ಲೀಪರ್) ಬಸ್‍ಗಳ ಲೋಕಾರ್ಪಣೆ ನಡೆಯಲಿದೆ. ‌

ಈ ಸಮಾರಂಭದಲ್ಲಿ ಕಲಬುರಗಿ ವಿಭಾಗ-1 ಹಾಗೂ ವಿಭಾಗ-2ರ ಒಟ್ಟು 121 ಚಾಲಕರು ಅಪಘಾತ ರಹಿತ ಸೇವೆ ಸಲ್ಲಿಸಿದ್ದು, ಅವರಿಗೆ ಬೆಳ್ಳಿ ಪದಕ ವಿತರಣೆಯೂ ಜರುಗಲಿದೆ.

ಸೇವಾ ಅವಧಿಯಲ್ಲಿ ಮೃತಪಟ್ಟ ನಿಗಮದ ನೌಕರರ ಅರ್ಹ ಅವಲಂಬಿತರಿಗೆ ನಿಗಮದಲ್ಲಿ ಕೆಲಸದ ನೇಮಕಾತಿ ಆದೇಶ ಪತ್ರಗಳನ್ನೂ ವಿತರಿಸಲಾಗುವುದು. ನಿಗಮದಲ್ಲಿ ಸೇವಾ ಅವಧಿಯಲ್ಲಿ ಮೃತಪಟ್ಟ 8 ಅಧಿಕಾರಿ/ಸಿಬ್ಬಂದಿ ಕುಟುಂಬದವರಿಗೆ ತಲಾ ₹10 ಲಕ್ಷ ಆಂತರಿಕ ಗುಂಪು ವಿಮಾ ಪರಿಹಾರದ ಮೊತ್ತದ ಚೆಕ್‍ಗಳನ್ನೂ ವಿತರಿಸಲಾಗುತ್ತಿದೆ. ಕಾರ್ಯಕ್ರಮದಲ್ಲಿ ಸಾರ್ವಜನಿಕರು ಭಾಗವಹಿಸಬೇಕು ಎಂದು ಕೆಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ ಪ್ರಕಟಣೆ ಮೂಲಕ ಕೋರಿದ್ದಾರೆ.

ಸೂಪರ್‌ ಮಾರ್ಕೆಟ್‌ನ ನೂತನ ಸಿಟಿ ಬಸ್‌ ನಿಲ್ದಾಣ ಪ್ರಯಾಣಿಕರ ಪಾಲಿಗೆ ವರದಾನವಾಗಿ ಹೊರಹೊಮ್ಮಲಿದೆ. ಜನರು ಸಮೂಹ ಸಾರಿಗೆಯನ್ನು ಹೆಚ್ಚೆಚ್ಚು ಬಳಸಬೇಕು

-ಅಲ್ಲಮಪ್ರಭು ಪಾಟೀಲ ಶಾಸಕ

ಸಾರಿಗೆ ಸಚಿವ ನಗರಕ್ಕಿಂದು

ಕಲಬುರಗಿ: ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಬೆಂಗಳೂರಿನಿಂದ ವಿಮಾನದ ಮೂಲಕ ಜ.25ರಂದು ಬೆಳಿಗ್ಗೆ 9.35ಕ್ಕೆ ಕಲಬುರಗಿಗೆ ಬರುವರು. ಬೆಳಿಗ್ಗೆ 10 ಗಂಟೆಗೆ ಕಲಬುರಗಿ ನಗರದ ಸೂಪರ್‌ ಮಾರ್ಕೆಟ್ ಪ್ರದೇಶದಲ್ಲಿನ ನಗರ ಸಾರಿಗೆ ನೂತನ ಬಸ್ ನಿಲ್ದಾಣದ ಕಟ್ಟಡವನ್ನು ಉದ್ಘಾಟಿಸುವರು. ಮಧ್ಯಾಹ್ನ 1 ಗಂಟೆಗೆ ಕಲಬುರಗಿಯಿಂದ ವಿಮಾನದ ಮೂಲಕ ಬೆಂಗಳೂರಿಗೆ ಪ್ರಯಾಣಿಸುವರು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT