ಕಲಬುರಗಿ: ಹಗಲು ಕಬ್ಬು ಕಟಾವು ಮಾಡಿ, ರಾತ್ರಿ ಮನೆಗಳನ್ನು ಕಳ್ಳತನ ಮಾಡುತ್ತಿದ್ದ ಇಬ್ಬರು ಕಳ್ಳರನ್ನು ಬಂಧಿಸಿರುವ ಎಂ.ಬಿ.ನಗರ ಪೊಲೀಸರು, ಆರೋಪಿಗಳಿಂದ ನಾಲ್ಕು ಪ್ರಕರಣಗಳಿಗೆ ಸಂಬಂಧಿಸಿದಂತೆ 67 ಗ್ರಾಂ ಚಿನ್ನಾಭರಣ ಸೇರಿ ₹12.14 ಲಕ್ಷ ಮೌಲ್ಯದ ಸ್ವತ್ತು ವಶಪಡಿಸಿಕೊಂಡಿದ್ದಾರೆ.

ಆಳಂದ ತಾಲ್ಲೂಕಿನ ಕಮಸರ ನಾಯಕ ತಾಂಡಾದ ಅಪ್ಪಾಜಿ ಅಲಿಯಾಸ್ ಅಪ್ಪು ಗಂಗಾರಾಮ ಚವ್ಹಾಣ (22), ಶಕಾಪುರ ತಾಂಡಾದ ಸಂತೋಷ ಅಲಿಯಾಸ್ ಅಂತ್ಯಾ ಗೋವಿಂದ ಚವ್ಹಾಣ (30) ಬಂಧಿತ ಆರೋಪಿಗಳು.

ಈ ಕುರಿತು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ನಗರ ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ., ‘ನಗರದ ವೀರೇಂದ್ರ ಪಾಟೀಲ ಬಡಾವಣೆಯ ನಿವಾಸಿ ವೀರಭದ್ರಯ್ಯ ಸ್ವಾಮಿ ಅವರು ತಮ್ಮ ಮನೆಯಲ್ಲಿ ಕಳ್ಳತನ ನಡೆದ ಬಗ್ಗೆ 2025ರ ಜೂನ್ 3ರಂದು ಎಂ.ಬಿ.ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕೆಕೆಆರ್ಟಿಸಿಯಲ್ಲಿ ಎಫ್ಡಿಸಿ ಆಗಿರುವ ಸ್ವಾಮಿ ಅವರು ಕುಟುಂಬದೊಂದಿಗೆ ಬಸವಕಲ್ಯಾಣದ ತಮ್ಮ ತ್ರಿಪುರಾಂತ ಗ್ರಾಮಕ್ಕೆ ಮದುವೆಗೆಂದು ನಾಲ್ಕು ದಿನ ಹೋದಾಗ ಮನೆ ಕೀಲಿ ಮುರಿದು ಕಳ್ಳತನ ಆಗಿತ್ತು. ಅಲಮಾರಿಯಲ್ಲಿದ್ದ ₹1.20 ಲಕ್ಷ ನಗದು, 20 ಗ್ರಾಂ. ಚಿನ್ನದ ತಾಳಿ ಚೈನ್, 15 ಗ್ರಾಂ. 3 ಉಂಗುರ ಕಳವು ಆಗಿದ್ದವು’ ಎಂದರು.

‘ಪ್ರಕರಣದ ಪತ್ತೆಗಾಗಿ ಪತ್ತೆಗಾಗಿ ಡಿಸಿಪಿ ಪ್ರವೀಣ ಎಚ್.ನಾಯಕ್, ಎಸಿಪಿ ಶಿವನಗೌಡ ಪಾಟೀಲ ಹಾಗೂ ಪಿಐ ಖಾಜಾ ಹುಸೇನ್ ನೇತೃತ್ವದಲ್ಲಿ ಎಎಸ್ಐ ನಜಮೋದ್ದಿನ್, ಸಿಬ್ಬಂದಿ ರಾಜು ಟಾಕಳೆ, ದಸ್ತಯ್ಯ, ಬೀರಪ್ಪ, ಸಂತೋಷ, ನಾಗರಾಜ, ಬಸವರಾಜ, ಗುರುರಾಜ, ಮಹೇಶ, ಕಾಶಿರಾಮ, ಸಿದ್ದರಾಮ, ಚನ್ನವೀರೇಶ ಹಾಗೂ ಸುಮೀತ ಅವರನ್ನೊಳಗೊಂಡ ತಂಡ ಬುಧವಾರ ಆರೋಪಿಗಳನ್ನು ಬಂಧಿಸಿದೆ. ಪಕ್ಕದ ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದ ದೃಶ್ಯಾವಳಿ ಕಳ್ಳರ ಸುಳಿವು ನೀಡಿದೆ’ ಎಂದು ತಿಳಿಸಿದರು.

‘ಒಟ್ಟು ನಾಲ್ಕು ಪ್ರಕರಣಗಳಲ್ಲಿ 67 ಗ್ರಾಂ ಚಿನ್ನಾಭರಣ, ₹1.02 ಲಕ್ಷ ನಗದು ಮತ್ತು 1 ಬೈಕ್ ಜಪ್ತಿ ಮಾಡಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾದ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಪೊಲೀಸ್ ಕಮಿಷನರ್ ಇದೇ ಸಂದರ್ಭದಲ್ಲಿ ಶ್ಲಾಘಿಸಿ ಪ್ರಶಂಸಾಪತ್ರ ವಿತರಿಸಿದರು.

‘ರಾತ್ರಿ ಹೊತ್ತು ನಗರಕ್ಕೆ ಬರುತ್ತಿದ್ದ ಕಳ್ಳರು’

‘ಅಪ್ಪು ಚವ್ಹಾಣ ಮತ್ತು ಸಂತೋಷ ಚವ್ಹಾಣ ಇಬ್ಬರೂ ಸಂಬಂಧಿಕರಾಗಿದ್ದು ಹಗಲಿನಲ್ಲಿ ಕೃಷಿ ಕೂಲಿಕೆಲಸ ಮಾಡುತ್ತಿದ್ದರು. ರಾತ್ರಿ ಹೊತ್ತು ನಗರಕ್ಕೆ ಬೈಕ್ನಲ್ಲಿ ಬರುತ್ತಿದ್ದರು. ದೂರಲ್ಲಿಯೇ ಬೈಕ್ ನಿಲ್ಲಿಸಿ ನಗರ ಹೊರವಲಯದ ಕೀಲಿ ಹಾಕಿದ ಮನೆಗಳನ್ನು ಹುಡುಕಿ ಕಳ್ಳತನ ಮಾಡುತ್ತಿದ್ದರು’ ಎಂದು ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ ತಿಳಿಸಿದರು.

‘ಅಪ್ಪು ಚವ್ಹಾಣ ವಿರುದ್ಧ ನರೋಣಾ ಸೇರಿದಂತೆ ವಿವಿಧ ಠಾಣೆಗಳಲ್ಲಿ 4 ಹಳೆಯ ಪ್ರಕರಣಗಳಿವೆ. ಸಂತೋಷ ವಿರುದ್ಧ ನಿಂಬರ್ಗಾ 4 ಮಾದನಹಿಪ್ಪರಗಾ 1 ಆಳಂದದಲ್ಲಿ 2 ಸೇರಿ ಒಟ್ಟು 7 ಪ್ರಕರಣಗಳಿವೆ. ದುಂದುವೆಚ್ಚಕ್ಕಾಗಿ ಕಳ್ಳತನ ಮಾಡುತ್ತಿದ್ದ ಇವರು ಕಳ್ಳತನ ಮಾಡಿದ ಮೇಲೆ ಒಂದೆರಡು ತಿಂಗಳು ಬಿಡುವು ಕೊಡುತ್ತಿದ್ದರು. ಕದ್ದಿರುವ ಚಿನ್ನಾಭರಣಗಳಲ್ಲಿ ಕೆಲವನ್ನು ಮಾರಾಟ ಮಾಡಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.