‘ಜ್ಞಾನ ಸಂಪಾದನೆ ಬಹಳ ಮುಖ್ಯ’
‘ಜೀವನದಲ್ಲಿ ಜ್ಞಾನ ಸಂಪಾದನೆ ಬಹಳ ಮುಖ್ಯ. ಪ್ರತಿಯೊಬ್ಬರಲ್ಲೂ ಭಿನ್ನ ವಿಶೇಷ ಜ್ಞಾನ ಇರುತ್ತದೆ. ನಮ್ಮ ಶಿಕ್ಷಣ ಪದ್ಧತಿಯಲ್ಲಿ ಅದನ್ನು ಗುರುತಿಸುವ ಕೆಲಸವಾಗಬೇಕು’ ಎಂದು ವಿಸ್ತಾರ ಜಿಂದಗಿ ಸಂಸ್ಥಾಪಕ ಮೈಂಡ್‌ಸೆಟ್ ಕೋಚ್ ಮಹೇಶ ಮಾಶಾಳ ಹೇಳಿದರು ಕಾರ್ಯಕ್ರಮದಲ್ಲಿ ಪ್ರಮುಖ ಭಾಷಣಕಾರರಾಗಿ ಮಾತನಾಡಿದ ಅವರು ‘ಜೀವನದಲ್ಲಿ ಅಂಕಗಳೇ ಮುಖ್ಯ ಅಲ್ಲ. ನಮ್ಮೊಳಗಿರುವ ಶಕ್ತಿಯನ್ನು ಅರಿತು ಜೀವನದಲ್ಲಿ ಮುನ್ನುಗ್ಗಬೇಕು’ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.