ಸೇಡಂ: ನಗರದ ಸುವರ್ಣ ಕರ್ನಾಟಕ ಭವನದಲ್ಲಿ ಗುರುವಾರ ಕಲಬುರಗಿ ರಂಗಾಯಣದ ಕಲಾವಿದರು ಪ್ರಸ್ತುತ ಪಡಿಸಿದ ‘ಕಾಲಚಕ್ರ’ ನಾಟಕಕ್ಕೆ ಪ್ರೇಕ್ಷಕರು ಕಂಬನಿ ಮಿಡಿದರು.

ಈ ಸಂದರ್ಭದಲ್ಲಿ ರಂಗಾಯಣ ನಿರ್ದೇಶಕಿ ಸುಜಾತಾ ಜಂಗಮಶೆಟ್ಟಿ ಮಾತನಾಡಿ, ‘ಪ್ರಸ್ತುತ ದಿನಗಳಲ್ಲಿ ಹೆತ್ತವರನ್ನು ನೋಡಿಕೊಳ್ಳದೆ, ವೃದ್ಧಾಶ್ರಮಕ್ಕೆ ಮಕ್ಕಳು ತಳ್ಳುತ್ತಿದ್ದಾರೆ. ಕೆಲವು ದೃಶ್ಯಗಳ ಮೂಲಕ ಜನರಲ್ಲಿ ಜಾಗೃತಗೊಳಿಸುವ ಕೆಲಸ ನಾಟಕದ ಮೂಲಕ ಮಾಡಲಾಗುತ್ತಿದೆ. ಮೈಸೂರು, ಬೆಂಗಳೂರು ಸೇರಿದಂತೆ ರಾಜ್ಯದ 26 ಕಡೆಗಳಲ್ಲಿ ನಾಟಕ ಪ್ರದರ್ಶನಗೊಂಡಿದೆ’ ಎಂದರು.

ಹೆತ್ತವರನ್ನು ವಯಸ್ಸಾದ ನಂತರ ಅವರನ್ನು ಮಕ್ಕಳು ಹಾಗೂ ಸೊಸೆಯಂದಿರು ನೋಡಿಕೊಳ್ಳುವ ಸಾಂದರ್ಭಿಕ ದೃಶ್ಯಾವಳಿಗಳು ನಾಟಕದಲ್ಲಿ ಪ್ರದರ್ಶನಗೊಂಡವು. ತಂದೆ-ತಾಯಯಿಂದರು ಮಕ್ಕಳ ಮೇಲೆ ಇಟ್ಟಿರುವ ಪ್ರೀತಿಯ ಋಣಾನುಬಂಧದವನ್ನು ಗಟ್ಟಿಗೊಳಿಸುವ ಪ್ರದರ್ಶನಗಳು ಪ್ರೇಕ್ಷಕರು ಮನತಟ್ಟಿದವು. ನಾಟಕದ ದೃಶ್ಯಗಳು ಸೇಡಂನ ಪ್ರೇಕ್ಷಕರಿಗೆ ಕಣ್ಣಾಲಿಗಳನ್ನು ತೇವಗೊಳಿಸಿದವು. ನಾಟಕ ಮುಗಿಯುತ್ತಿದ್ದಂತೆಯೇ ಸಭಾಂಗಣದಲ್ಲಿದ್ದ ಪ್ರೇಕ್ಷಕರು ಎದ್ದು ನಿಂತು ನಾಟಕಕ್ಕೆ ಚಪ್ಪಾಳೆ ತಟ್ಟಿ ಕಲಾವಿದರಿಗೆ ಪ್ರೋತ್ಸಾಹಿಸಿದರು.

ಈ ಸಂದರ್ಭದಲ್ಲಿ ಕಲಬುರ್ಗಿ ರಂಗಾಯಣ ಮಾಜಿ ನಿರ್ದೇಶಕ ಪ್ರಭಾಕರ ಜೋಶಿ, ಕವಿ ಕೆರಳ್ಳಿ ಗುರುನಾಥರೆಡ್ಡಿ ಪ್ರತಿಷ್ಠಾನದ ಅಧ್ಯಕ್ಷ ಸಿದ್ದಪ್ಪ ತಳ್ಳಳ್ಳಿ, ಮಹಿಪಾಲರೆಡ್ಡಿ ಮುನ್ನೂರ, ಲಿಂಗಾರೆಡ್ಡಿ ಶೇರಿ, ಪ್ರಮಿಳಾ ಪಾಟೀಲ, ಎಂ.ಜಿ.ದೇಶಪಾಂಡೆ, ನಾಗಯ್ಯಸ್ವಾಮಿ ಬೊಮ್ನಳ್ಳಿ, ವೀರೇಶ ಹೂಗಾರ, ಸಂಗಣ್ಣ ಅಲ್ದಿ, ಈರಣಗೌಡ ರೆಮ್ಮಣ್ಣಿ ಸೇರಿದಂತೆ ಇನ್ನಿತರರು ಇದ್ದರು.

ನಾಟಕ ಸಂಘಗಳ ಕಲಾವಿದರಿಂದಲೇ ‘ಕಾಲಚಕ್ರ’ ಆಯೋಜನೆ: ನಾಟಕ ಪ್ರದರ್ಶನಕ್ಕೆಂದು ಕಟ್ಟಿದ ಸಂಘಗಳ ಕಲಾವಿದರೇ ಕಲಬುರಗಿ ರಂಗಾಯಣದ ‘ಕಾಲಚಕ್ರ’ ನಾಟಕ ಪ್ರದರ್ಶನವನ್ನು ಸೇಡಂನಲ್ಲಿ ಆಯೋಜಿಸಿರುವುದು ವಿಶೇಷ ಗಮನ ಸೆಳೆಯಿತು. ಎಲ್ಬಿಕೆ ಅಲ್ದಾಳ ಟ್ರಸ್ಟ್, ಕಲಕಬುರ್ಗಿ, ಮಡಿವಾಳೇಶ್ವರ ನಾಟ್ಯ ಸಂಘ ಸೇಡಂ ಮತ್ತು ನೃಪತುಂಗ ನಾಟ್ಯ ಸಂಘದ ಕಲಾವಿದರು ಮತ್ತೊಂದು ನಾಟಕ ಪ್ರದರ್ಶನ ಆಯೋಜನಕ್ಕೆ ಸಾಕ್ಷಿಯಾದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.