ಕಾಳಗಿ: ಇಲ್ಲಿನ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಮಹ್ಮದ್ ಇಕ್ಬಾಲ್ ಸೋಮವಾರ (ಜೂ.30) ವಯೋನಿವೃತ್ತಿ ಹೊಂದಿದ್ದರು.

ಈ ನಿಮಿತ್ತ ಅವರನ್ನು ಅದೇ ದಿನ ಕರ್ತವ್ಯದ ಸಮಯದಲ್ಲೇ ಮಧ್ಯಾಹ್ನ ಶಾಲೆಯಲ್ಲಿ ಸನ್ಮಾನಿಸಿ, ಗೌರವಿಸಿ ಬೀಳ್ಕೊಟ್ಟಿದ್ದು ವಿಶೇಷವಾಗಿತ್ತು.

ಈ ಮೊದಲು ಇದೇ ಶಾಲೆಯಲ್ಲಿ ಶಿಕ್ಷಕಿಯಾಗಿ ಈಗ ಅರಜಂಬಗಾ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಾಕೇರ ಫಾತಿಮಾ ಕೈತಾನ್ ಅವರು ಸದರಿ ಶಾಲೆಗೆ 25 ಸ್ಟೀಲ್ ತಟ್ಟೆಗಳನ್ನು ದೇಣಿಗೆ ನೀಡಿದರು.

ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಅನೀಲಕುಮಾರ ಗುತ್ತೇದಾರ, ಮಾಜಿ ಅಧ್ಯಕ್ಷ ಶರಣಗೌಡ ಪಾಟೀಲ, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಹಾಂತೇಶ ಪಂಚಾಳ, ಪ್ರಧಾನ ಕಾರ್ಯದರ್ಶಿ ಸಂತೋಷಕುಮಾರ ಕಲ್ಮೂಡಕರ್, ವಲಿಯಲ್ಲ ಕೋರವಾರ, ಎಸ್ಡಿಎಂಸಿ ಅಧ್ಯಕ್ಷ ಪಾಶಾಬೇಗ ಬಿಜಾಪುರ, ಉಪಾಧ್ಯಕ್ಷ ಮೈನೋದ್ದಿನ್ ಪಟೇಲ್, ಸರ್ಕಾರಿ ಪ್ರೌಢ ಶಾಲೆ ಮುಖ್ಯಶಿಕ್ಷಕ ಮಹೇಶಕುಮಾರ ಬಡಿಗೇರ, ನಿವೃತ್ತ ಶಿಕ್ಷಕ ಮಹ್ಮದ ಗುಡುಸಾಬ ಕಮಲಾಪುರ, ಇಬ್ರಾಹಿಂಪಾಶಾ ಗಿರಣಿಕರ್, ಕಾಂಗ್ರೆಸ್ ಮುಖಂಡರು, ಶಾಲಾ ಮಕ್ಕಳು, ಶಿಕ್ಷಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.