ಕಮಲಾಪುರ: ‘ಪಟ್ಟಣದಲ್ಲಿ ನಡೆಯುವ ಹಿಂದೂ ಏಕತಾ ಸಮಾವೇಶಕ್ಕೆ ಎಲ್ಲ ಜಾತಿ ಜನಾಂಗದವರನ್ನು ಸೇರಿಸಿ, ವಿಶ್ವಾಸಕ್ಕೆ ತೆಗೆದುಕೊಂಡು, ಹಿಂದೂ ನಾವೆಲ್ಲರೂ ಒಂದು ಎಂಬ ಐಕ್ಯತೆ ಸಾರುವುದು ಅಗತ್ಯ’ ಎಂದು ಬಿಜೆಪಿ ಹಿರಿಯ ಮುಖಂಡ ರವಿ ಬಿರಾದಾರ ತಿಳಿಸಿದರು.

ಕಮಲಾಪುರ ಪಟ್ಟಣದಲ್ಲಿ ಫೆ.2 ರಂದು ನಡೆಯಲಿರುವ ಹಿಂದೂ ಏಕತಾ ಸಮಾವೇಶ ನಿಮಿತ್ತ ಆಯೋಜಿಸಿದ್ದ ಸಮಾಲೋಚನೆ ಸಭೆಯಲ್ಲಿ ಅವರು ಮಾತನಾಡಿದರು.

ಪಟ್ಟಣದ ಹಿರಿಯರು, ಸ್ವಾಮೀಜಿಗಳು ಭಾಗವಹಿಸಬೇಕು. ಪಕ್ಷಾತೀತವಾಗಿ ಸಮಾವೇಶ ನಡೆಯಬೇಕು. ಎಲ್ಲ ಪಕ್ಷದಲ್ಲಿ ಹಿಂದೂಗಳಿದ್ದಾರೆ. ಅವರೆಲ್ಲರೂ ಭಾಗವಹಿಸಿದಾಗ ಬಲಿಷ್ಠ ಸಮಾಜ ಕಟ್ಟಲು ಸಾಧ್ಯ ಎಂದರು.

ಸಮಾವೇಶದ ಆಯೋಜಕರಂತೆ ಓಡಾಡುವವರು ಸ್ವಹಿತಾಸಕ್ತಿ, ಮತ್ಸರ ಸಾಧಿಸಬಾರದು. ನಮ್ಮೆಲ್ಲ ಸ್ವಾರ್ಥ ಬದಿಗೊತ್ತಿ ಸದೃಢ ಹಿಂದೂ ಸಮಾಜ ನಿರ್ಮಾಣಕ್ಕೆ ಪಣ ತೊಡಬೇಕು. ಈ ನಿಟ್ಟಿನಲ್ಲಿ ನಾವೆಲ್ಲರು ಕಾರ್ಯನಿರ್ವಹಿಸಬೇಕು ಎಂದು ತಿಳಿಹೇಳಿದರು.

ಕಮಲಾಪುರ ತಾಲ್ಲೂಕು ನಿರ್ಮಾಣ ಹೋರಾಟ ಸಮಿತಿ ಅಧ್ಯಕ್ಷ ಸುಭಾಷ ಬಿರಾದಾರ, ಜಿ.ಪಂ ಮಾಜಿ ಸದಸ್ಯ ಶಿವಶೆಟ್ಟಿ ಪಾಟೀಲ, ಹಿರಿಯ ಮುಖಂಡರಾದ ಅಮೃತಪ್ಪ ದೋಶೆಟ್ಟಿ, ಗೋರಖನಾಥ ಶಾಕಾಪೂರ, ಗುರುರಾಜ ಮಾಟೂರ, ಬಸವರಾಜ ಸುಗೂರ, ಶಿವಶರಣ ದೋಶೆಟ್ಟಿ, ಸಂತೋಷ ರಾಂಪೂರ, ಶಿವಾ ದೋಶೆಟ್ಟಿ, ಅಮರ ಚಿಕ್ಕೆಗೌಡ, ರಾಜಕುಮಾರ ಮಂಠಾಳೆ, ವೀರು ಸ್ವಾಮಿ ಸೇರಿದಂತೆ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.