ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೋವಿ ಮುಖಂಡರಿಂದ ಪತ್ರ ಚಳುವಳಿ

Last Updated 11 ಜೂನ್ 2020, 3:40 IST
ಅಕ್ಷರ ಗಾತ್ರ

ಶಹಾಬಾದ್‌: ಭೋವಿ ಸಮುದಾಯಗಳನ್ನು ಯಾವುದೇ ಕಾರಣಕ್ಕೂ ಪರಿಶಿಷ್ಟ ಜಾತಿಯಿಂದ ಕೈಬಿಡಬಾರದು ಎಂದು ಆಗ್ರಹಿಸಿ ಭೋವಿ ವಡ್ಡರ್ ಸಮಾಜ ಸೇವಾ ಸಂಘ ಹಾಗೂ ಭೋವಿ ವಡ್ಡರ್ ಹಿತ ರಕ್ಷಣಾ ಸಮಿತಿಯ ಮುಖಂಡರು ಬುಧವಾರ ಪತ್ರ ಚಳುವಳಿಯ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಿದರು.

ಭೋವಿ ವಡ್ಡರ್ ಸಮಾಜ ಸೇವಾ ಸಂಘದ ಅಧ್ಯಕ್ಷ ಭೀಮರಾವ ಸಾಳುಂಕೆ ಮಾತನಾಡಿ, ಭೋವಿ ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಡಬೇಕೆಂದು ಕೆಲ ಪಟ್ಟಭದ್ರ ಹಿತಾಸಕ್ತಿಗಳು ಕುತಂತ್ರ ಮಾಡುತ್ತಿವೆ. ಅವರ ಈ ಕ್ರಮ ಖಂಡನೀಯ. ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿರುವ ನಮ್ಮ ಸಮುದಾಯವನ್ನು ಯಾವುದೇ ಕಾರಣಕ್ಕೂ ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈ ಬಿಡಬಾರದು ಎಂದು ಹೇಳಿದರು.

ಸಂಘದ ಮುಖಂಡರಾದ ಅನೀಲ ಭೋರಗಾಂವಕರ್, ರಾಮು ಕುಸಾಳೆ, ದೇವದಾಸ ಜಾಧವ, ದೀಪಕ ಚೌಧರಿ, ಅಂಬಣ್ಣ ಕುನ್ನೂರಕರ್, ಸಿದ್ರಾಮ ಕುಸಾಳೆ, ಭೋವಿ ವಡ್ಡರ್ ಹಿತ ರಕ್ಷಣಾ ಸಮಿತಿಯ ಅಧ್ಯಕ್ಷ ಕಳೊಳ್ಳೊ ಕುಸಾಳೆ, ರಾಜು ದಂಡಗುಲಕರ್,ಅಂಬಾದಾಸ ಗುರೂಜಿ, ತಿರುಪತಿ ಚೌಧರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT