ಕಲಬುರಗಿ: ‘ದೀರ್ಘಕಾಲದ ಯಕೃತ್ ವೈಫಲ್ಯ ಜೊತೆಗೆ ಲಿವರ್ ಕ್ಯಾನ್ಸರ್ ಇರುವ ಕಲಬುರಗಿಯ 66 ವರ್ಷದ ರೋಗಿಗೆ ಬೆಂಗಳೂರಿನ ಆಸ್ಟರ್ ಆಸ್ಪತ್ರೆಯಲ್ಲಿ ಯಶಸ್ವಿ ಕಸಿ ಮಾಡಲಾಗಿದೆ. ಈ ಮೂಲಕ ಅವರು ಪುನರ್ಜನ್ಮ ಪಡೆದಂತಾಗಿದೆ’ ಎಂದು ಆಸ್ಪತ್ರೆಯ ಇಂಟಿಗ್ರೇಟೆಡ್ ಲಿವರ್ ಕೇರ್ (ಐಎಲ್ಸಿ)ನ ಹೆಪಟಾಲಜಿ ಮತ್ತು ಲಿವರ್ ಟ್ರಾನ್ಸ್ಪ್ಲಾಂಟ್ ವಿಭಾಗದ ಕನ್ಸಲ್ಟೆಂಟ್ ಡಾ.ಅಖಿಲ್ ದೇಶಮುಖ ಹೇಳಿದರು.

‘ರೋಗಿಗೆ ದೀರ್ಘಕಾಲದಿಂದ ಕೊಬ್ಬಿನ ಯಕೃತ್ ರೋಗ ಸಂಬಂಧಿತ ಸಿರೋಸಿಸ್ ಇತ್ತು. ಕ್ರಮೇಣ ಕಾಮಾಲೆ, ಹೊಟ್ಟೆ ಉಬ್ಬರ, ದೇಹದಲ್ಲಿ ದ್ರವ ಶೇಖರಣೆಯಿಂದ ಕಾಲುಗಳಲ್ಲಿ ಊತ, ತೀವ್ರ ದೌರ್ಬಲ್ಯ ಹಾಗೂ ಆರೋಗ್ಯದಲ್ಲಿ ಕ್ಷೀಣತೆ ಇತ್ತು. ಪರೀಕ್ಷೆ ಬಳಿಕ ಮೃತ ದಾನಿಯ ಲಿವರ್ ಪಡೆದು ಕಸಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಈಗ ಆರೋಗ್ಯವಾಗಿದ್ದಾರೆ’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಯಕೃತ್ ವೈಫಲ್ಯ ಬಂದರೆ ಪ್ರತಿಯೊಬ್ಬರಿಗೂ ಕಸಿಯ ಅಗತ್ಯವಿಲ್ಲ. ಆರಂಭಿಕ ಹಂತದಲ್ಲೇ ಪತ್ತೆಯಾದರೆ, ಅನೇಕ ಪ್ರಕರಣಗಳನ್ನು ಔಷಧೋಪಚಾರ ಮತ್ತು ಸಹಾಯಕ ಚಿಕಿತ್ಸೆಯ ಮೂಲಕ ನಿಯಂತ್ರಿಸಬಹುದು. ಆದರೆ, ಭಯ, ಹಿಂಜರಿಕೆ ಅಥವಾ ತಪ್ಪು ಮಾಹಿತಿಯಿಂದ ಚಿಕಿತ್ಸೆ ವಿಳಂಬವಾಗಬಾರದು’ ಎಂದು ಎಚ್ಚರಿಸಿದರು.

‘ಆಸ್ಟರ್ ಆಸ್ಪತ್ರೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಯೋಜನೆಯಡಿ ನೋಂದಾಯಿತವಾಗಿದ್ದು, ಬಡತನ ರೇಖೆಗಿಂತ ಕೆಳಗಿರುವ ರೋಗಿಗಳಿಗೆ ಯಕೃತ್ ಕಸಿ ಅವಕಾಶ ಕಲ್ಪಿಸುತ್ತದೆ’ ಎಂದರು.

ಆನಂದ ಎಚ್.ಎಲ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.