ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಹಾಬಾದ್: ಲೋಕಾಯುಕ್ತ ಬಲೆಗೆ ಬಿದ್ದ ಗ್ರಾ.ಪಂ. ಕಾರ್ಯದರ್ಶಿ ಅಶೋಕ್ ಪಡಶೆಟ್ಟಿ

Published 6 ಫೆಬ್ರುವರಿ 2024, 8:30 IST
Last Updated 6 ಫೆಬ್ರುವರಿ 2024, 8:30 IST
ಅಕ್ಷರ ಗಾತ್ರ

ಕಲಬುರಗಿ: ಶಹಾಬಾದ್ ತಾಲ್ಲೂಕಿನ ಮರತೂರ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ ಲಂಚ ಪಡೆಯುತ್ತಿದ್ದ ವೇಳೆ ಮಂಗಳವಾರ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.

ಪರಶುರಾಮ್ ರಾಥೋಡ್ ಎಂಬುವರಿಂದ ಮುಟೇಷನ್ ಮಾಡಿಕೊಡಲು ₹ 20 ಸಾವಿರ ಲಂಚ ಪಡೆಯುವಾಗ ಕಾರ್ಯದರ್ಶಿ ಅಶೋಕ್ ಪಡಶೆಟ್ಟಿ ಸಿಕ್ಕಿ ಬಿದ್ದಿದ್ದಾರೆ.

ನಗರದ ಲಾಲಗೇರಿ ಕ್ರಾಸ್ ಹೋಟೆಲ್ ಬಳಿ ದಾಳಿ ಮಾಡಿದ ಲೋಕಾಯುಕ್ತ ಡಿವೈಎಸ್‌ಪಿ ಗೀತಾ ಬೇನಾಳ ನೇತೃತ್ವದ ತಂಡ, ಅಶೋಕ್ ಅವರನ್ನು ‌ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT