ಚಿಂಚೋಳಿ: ಲೋಕಾಯುಕ್ತ ಪೊಲೀಸ್ ಅಧಿಕಾರಿಗಳ ತಂಡ ಬುಧವಾರವೂ ತಾಲ್ಲೂಕಿನ ಕಂದಾಯ, ಭೂದಾಖಲೆಗಳು, ಶಿಕ್ಷಣ ಮತ್ತು ಪುರಸಭೆ ಕಚೇರಿಗಳಿಗೆ ದಿಢೀರ್ ಭೇಟಿ ವಿವಿಧ ಕಡತಗಳನ್ನು ಪರಿಶೀಲಿಸಿದರು.

ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ವೈಯಕ್ತಿಕ ವಿವರಣೆ ಲಿಖಿತ ರೂಪದ ನಮೂನೆ ಅರ್ಜಿಯಲ್ಲಿ ತುಂಬಿಸಿಕೊಂಡ ಲೋಕಾಯುಕ್ತ ಅಧಿಕಾರಿಗಳು ಅಗತ್ಯ ಮಾಹಿತಿ ಪಡೆದರು.

ಲೋಕಾಯುಕ್ತ ಇನ್ಸ್ಪೆಕ್ಟರ್ ಸಿ.ಆರ್ ಭಾಷ್ಕರ್ ಮತ್ತು ಗೋವಿಂದೆಗೌಡ ಪಾಟೀಲ ನೇತೃತ್ವದಲ್ಲಿ ಅಧಿಕಾರಿಗಳಾದ ಎಂ.ಜಿ ದೇಸಾಯಿ, ಗಿರೀಶ, ವಿನಯ, ಅಸ್ಲಂ ಮಂಜುನಾಥ ಮೊದಲಾದವರು ಎರಡು ತಂಡಗಳಲ್ಲಿ ಪ್ರತ್ಯೇಕ ಕಚೇರಿಗಳಿಗೆ ದಿಢೀರ್ ಭೇಟಿ ನೀಡಿ ಕಚೇರಿಯ ಗಣಕಯಂತ್ರಗಳುಲ್ಲಿ ನಡೆಸಿದ ಪತ್ರವ್ಯವಹಾರಗಳು ಮತ್ತು ವಿವಿಧ ಕಡತಗಳನ್ನು ಪರಿಶೀಲಿಸಿದರು.
ಕಂದಾಯ ಇಲಾಖೆಯಲ್ಲಿ ಬಾಕಿ ಉಳಿದ ವಿವಿಧ ತಿದ್ದುಪಡಿಯ ಕಡತಗಳು, ಭೂದಾಖಲೆ ಇಲಾಖೆಯಲ್ಲಿ ಅಳತೆ, ಹದ್ದಬಸ್ತ ಬಾಕಿ ಹಾಗೂ ಪೂರ್ಣಗೊಂಡ ವಿವರ ಪಡೆದರು.

ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಮಂಗಳವಾರ ಭೇಟಿ ನೀಡಿದ್ದ ಅಧಿಕಾರಿಗಳು, ಬುಧವಾರವೂ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಕಚೇರಿಯಲ್ಲಿಯೇ ಠಿಕಾಣಿ ಹೂಡಿ ಮಾಹಿತಿ ಕಲೆಹಾಕಿಕೊಂಡು ಮರಳಿದರು. ಬೆಳಿಗ್ಗೆ 11 ಬಂದ ಅಧಿಕಾರಿಗಳು ರಾತ್ರಿ 7.30ರವರೆಗೂ ಕಚೇರಿಯನ್ನು ಜಾಲಾಡಿ ಸಿಬ್ಬಂದಿಗೆ ಬಿಸಿ ಮುಟ್ಟಿಸಿದರು.

ನಂತರ ಪುರಸಭೆ ಕಚೇರಿಗೆ ಭೇಟಿ ನೀಡಿದ ಅಧಿಕಾರಿಗಳು ಕಚೇರಿಯಲ್ಲಿ ಅಗತ್ಯ ಪಡೆದರು. ಕರ ವಸೂಲಿಗಾರ ಎಜಾಜ್ ಅವರ ಮೋಬೈಲ್ ವಶಕ್ಕೆ ಪಡೆದು ಪರಿಶೀಲಿಸಲಾಗಿದ್ದು, ಅವರ ಮೋಬೈಲ್ನಲ್ಲಿ ಫೋನ್ ಪೇ ಅನ್ ಇನಸ್ಟಾಲ್ ಆಗಿತ್ತು ಇದರಿಂದ ಬ್ಯಾಂಕಿಗೆ ಸಿಬ್ಬಂದಿಯನ್ನು ಕಳುಹಿಸಿ ಬ್ಯಾಂಕ್ ಖಾತೆಯ ಸ್ಟೇಟ್ಮೆಂಟ್ ಪಡೆದುಕೊಳ್ಳಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದರು.

ಸಿದ್ಧಸಿರಿ ಕರ ಕಗ್ಗಂಟು

‘ಇಲ್ಲಿನ ಸಿದ್ಧಸಿರಿ ಎಥನಾಲ್ ಮತ್ತು ಪವರ್ ಘಟಕ ಪುರಸಭೆಗೆ ನಿಗದಿತ ಪ್ರಮಾಣದಲ್ಲಿ ತೆರಿಗೆ ಭರಿಸುತ್ತಿಲ್ಲ. ನಮಗೆ ಇನ್ನೂ ₹ 1 ಕೋಟಿ ಕರ ಪಾವತಿಸಬೇಕು. ಆದರೆ ಕಂಪೆನಿ ಕರ ಪಾವತಿಸಲು ನಿರಾಕರಿಸಿ ನ್ಯಾಯಾಲಯದಲ್ಲಿ ದಾವೆ ಹೂಡಿದೆ’ ಎಂದು ಪುರಸಭೆ ಅಧಿಕಾರಿಗಳು ಲೋಕಾಯುಕ್ತ ಪೊಲೀಸರ ಗಮನಕ್ಕೆ ತಂದರು.

‘ಈಗ ಪಾವತಿಸುತ್ತಿರುವುದಕ್ಕಿಂತ ಹೆಚ್ಚು ಕರ ಪಾವತಿಸುವುದಿಲ್ಲ ಎನ್ನುತ್ತಿದ್ದಾರೆ. ನಾವು ಕೇಳಲು ಹೋದರೆ ನಮಗೆ ಕಂಪೆನಿ ಒಳಗಡೆಯೇ ಬರಲು ಬಿಡುವುದಿಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ಆಗ ಲೋಕಾಯುಕ್ತ ಅಧಿಕಾರಿಗಳು ‘ಮೇಲಧಿಕಾರಿಗಳು ಏನು ಮಾಡುತ್ತಿದ್ದಾರೆ ಅವರ ಗಮನಕ್ಕೆ ತಂದು ಕಂಪೆನಿ ಬಂದ್ ಮಾಡಿಸಿ. ನಿಮಗೆ ₹ 1 ಕೋಟಿ ಕರದ ಹಣ ಬಂದರೆ ಪಟ್ಟಣದಲ್ಲಿ ಅಭಿವೃದ್ಧಿ ಕೈಗೊಳ್ಳಬಹುದು. ಆಸ್ತಿ ಕರ ನಿಮ್ಮ ಹಕ್ಕು’ ಎಂದರು.