ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸ್ಟೇಲ್‌ನಲ್ಲಿ ಕಳಪೆ ಆಹಾರ ಪೂರೈಕೆ: ಆರೋಪ

Last Updated 15 ಸೆಪ್ಟೆಂಬರ್ 2021, 14:07 IST
ಅಕ್ಷರ ಗಾತ್ರ

ಚಿತ್ತಾಪುರ: ಪಟ್ಟಣದಲ್ಲಿರುವ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಅಧೀನದ ಸರ್ಕಾರಿ ಬಾಲಕರ ಮೆಟ್ರಿಕ್ ನಂತರದ ವಿದ್ಯಾರ್ಥಿಗಳ ವಸತಿ ನಿಯಲದಲ್ಲಿ ನೀಡುವ ಆಹಾರದಲ್ಲಿ ಹುಳಗಳು ಪತ್ತೆಯಾಗುತ್ತಿವೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಹಾರದಲ್ಲಿ ಹುಳು ಕಂಡು ಬರುತ್ತಿರುವ ಕುರಿತು ವಸತಿ ನಿಲಯದ ವಾರ್ಡನ್ ಅವರಿಗೆ ತಿಳಿಸಿದರೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.

ವಸತಿ ನಿಯಲದಲ್ಲಿ ಶೌಚಾಲಯದ ಸ್ವಚ್ಛತೆಯಿಲ್ಲ. ಬಕೆಟ್, ಸ್ಟಡಿ ಚೇರ್ ವ್ಯವಸ್ಥೆ ಮಾಡಿಲ್ಲ. ಪಿಯುಸಿ ಮತ್ತು ಪದವಿ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕದ ಕೊರತೆಯಿದೆ. ಬೆಡ್‌ಗಳ ಕೊರತೆಯಿದೆ. ತಿಂಗಳಿನಿಂದ ವಿದ್ಯಾರ್ಥಿಗಳ ಕೋಣೆಗಳಲ್ಲಿ ವಿದ್ಯುತ್ ಇಲ್ಲ. ಸಮಯಕ್ಕೆ ಸರಿಯಾಗಿ ಬಿಸಿ ನೀರಿನ ವ್ಯವಸ್ಥೆ ಒದಗಿಸುತ್ತಿಲ್ಲ. ಕಂಪ್ಯೂಟರ್ ಮತ್ತು ಸಿಸಿ ಟಿವಿ ಕೊರತೆ ಇದೆ ಎಂದು 26 ವಿದ್ಯಾರ್ಥಿಗಳು ತಮ್ಮ ಸಮಸ್ಯೆ ಕುರಿತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗೆ ಪತ್ರ ಬರೆದಿದ್ದಾರೆ.

ಅಡುಗೆ ಮಾಡುವಾಗ ಲೈಟಿನ ಹುಳ ಚಪಾತಿಯ ಮೇಲೆ ಬಿದ್ದು ಅಂಟಿಕೊಂಡಿದ್ದು ನಿಜ. ಅದನ್ನು ಬಿಟ್ಟು ಬೇರೆ ತೆಗೆದುಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರೂ ಅನಗತ್ಯ ಗಲಾಟೆ ಮಾಡುತ್ತಿದ್ದಾರೆ. ಅಡುಗೆ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾರೆ. ಸ್ಟಡಿ ಚೇರ್ ಇಲಾಖೆಯಿಂದ ಪೂರೈಕೆಯಾಗಿಲ್ಲ. ವಿದ್ಯಾರ್ಥಿಗಳಿಗೆ ಗಣಮಟ್ಟದ ಅಹಾರ ಮತ್ತು ಸಕಲ ಸೌಲಭ್ಯ ಒದಗಿಸಲು ಗಮನ ಹರಿಸುತ್ತೇವೆ ಎಂದು ವಸತಿ ನಿಲಯದ ವಾರ್ಡನ್ ಭೀಮಶಾಂಕರ ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

*ಊಟ ಸರಿಯಿಲ್ಲ ಎಂದು ಕೆಲವು ವಿದ್ಯಾರ್ಥಿಗಳು ದಾಬಾದಲ್ಲಿ ಊಟ ಮಾಡಿ ಬಿಲ್ ತಂದು ಕೊಟ್ಟು ಹಣ ಕೊಡುವಂತೆ ಕೇಳುತ್ತಿದ್ದಾರೆ. ಆ ರೀತಿ ಹಣ ನೀಡಲು ಅವಕಾಶ ಇಲ್ಲ.
- ಭೀಮಾಶಂಕರ ದಂಡೆ, ವಾರ್ಡನ್, ಸರ್ಕಾರಿ ಬಾಲಕರ ಮೆಟ್ರಿಕ್ ನಂತರದ ವಸತಿ ನಿಲಯ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT