6

ಕಾಶ್ಮೀರದಲ್ಲಿ ಬಿಜೆಪಿ ಯಾವ ಮುಖ ಹೊತ್ತುಕೊಂಡು ಸರ್ಕಾರ ರಚಿಸುತ್ತೆ:ಖರ್ಗೆ ಪ್ರಶ್ನೆ

Published:
Updated:

ಕಲಬುರ್ಗಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಯಾವ ಮುಖ ಹೊತ್ತುಕೊಂಡು ಬಿಜೆಪಿ ಸರ್ಕಾರ ರಚನೆ ಮಾಡುತ್ತದೆ ಎಂದು ಲೋಕಸಭೆ ಕಾಂಗ್ರೆಸ್ ಪಕ್ಷದ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. 

‘ಹಿಂದೆ ಬಿಜೆಪಿ, ಪಿಡಿಪಿ ಜತೆಗೂಡಿ ಸರ್ಕಾರ ಮಾಡಿ ಸಂಪೂರ್ಣವಾಗಿ ವಿಫಲವಾಗಿದೆ. ಈಗ ಮತ್ತೆ ಸರ್ಕಾರ ರಚಿಸಲು ಹೊರಟಿದ್ದು ಯಾವ ಪುರುಷಾರ್ಥಕ್ಕಾಗಿ’ ಎಂದು ಕಿಡಿಕಾರಿದರು.

‘ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನೆ ಚಟುವಟಿಕೆ ನಿಗ್ರಹಿಸಲು ವಿಫಲರಾದರು, ಅಪ್ರಚೋದಿತ ಗುಂಡಿನ ದಾಳಿ ತಡೆಯುವಲ್ಲಿ ವಿಫಲರಾದರು, ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆ ನಿಯಮ ಪಾಲಿಸಲಿಲ್ಲ, ಅಲ್ಲಿನ ಜನರು ನೆಮ್ಮದಿಯಿಂದ ಜೀವನ ನಡೆಸಲು ಅನುವು ಮಾಡಿಕೊಡಲಿಲ್ಲ ಈಗ ಅವರು ಸರ್ಕಾರ ರಚಿಸಲು ಹೊರಟಿದ್ದಾರೆ ಇವರಿಗೆ ಏನು ಅನ್ನಬೇಕು’ ಎಂದು ವಾಗ್ದಾಳಿ ನಡೆಸಿದರು.

ಬರಹ ಇಷ್ಟವಾಯಿತೆ?

  • 6

    Happy
  • 1

    Amused
  • 2

    Sad
  • 0

    Frustrated
  • 8

    Angry

Comments:

0 comments

Write the first review for this !