ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸೊನ್ನದ ಶ್ರೀಗಳ ಸಮಾಜಮುಖಿ ಸೇವೆ ಅವಿಸ್ಮರಣೀಯ: ಡಾ.ಅಜಯಸಿಂಗ್

Published 24 ಜನವರಿ 2024, 14:02 IST
Last Updated 24 ಜನವರಿ 2024, 14:02 IST
ಅಕ್ಷರ ಗಾತ್ರ

ಜೇವರ್ಗಿ: ‘ಅನ್ನ ದಾಸೋಹದ ಜತೆಗೆ ಜ್ಞಾನ ದಾಸೋಹ ನೀಡುವ ಮೂಲಕ ಕಲ್ಯಾಣ ಕರ್ನಾಟಕದ ಸಿದ್ಧಗಂಗಾ ಮಠ ಎಂದೇ ಖ್ಯಾತಿಯಾಗಿರುವ ತಾಲ್ಲೂಕಿನ ಸೊನ್ನದ ಸಿದ್ಧಲಿಂಗೇಶ್ವರ ವಿರಕ್ತಮಠದ ಡಾ.ಶಿವಾನಂದ ಸ್ವಾಮೀಜಿ ಕಾರ್ಯ ಶ್ಲಾಘನೀಯ’ ಎಂದು ಕೆಕೆಆರ್‌ಡಿಬಿ ಅಧ್ಯಕ್ಷ ಹಾಗೂ ಶಾಸಕ ಡಾ.ಅಜಯಸಿಂಗ್ ಅಭಿಪ್ರಾಯಪಟ್ಟರು.

ಬುಧವಾರ ತಾಲ್ಲೂಕಿನ ಸೊನ್ನದ ಶಿವಾನಂದ ಶಿವಯೋಗಿ ಗ್ರಾಮೀಣ ಜನಕಲ್ಯಾಣ ಸಂಸ್ಥೆ ಆವರಣದಲ್ಲಿ ಹಮ್ಮಿಕೊಂಡ ಗುರುಸಿದ್ಧ ಸ್ವಾಮಿಗಳ 32ನೇ ಪುಣ್ಯಸ್ಮರಣೆ ಅಂಗವಾಗಿ ನೇತ್ರ ಹಾಗೂ ದಂತ ಉಚಿತ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಸೊನ್ನದ ಡಾ. ಶಿವಾನಂದ ಸ್ವಾಮೀಜಿ ಜೀವನದುದ್ದಕ್ಕೂ ಸಾಮಾಜಿಕ ಸೇವೆಯಲ್ಲಿ ನಿರತರಾಗಿದ್ದಾರೆ. ಅವರ ಕಾರ್ಯ ತಾಲ್ಲೂಕಿನ ಜನತೆಗೆ ಆದರ್ಶಪ್ರಾಯವಾಗಿ. ಶ್ರೀಮಠಕ್ಕೆ ಮುಂಬರುವ ದಿನಗಳಲ್ಲಿ ವಿದ್ಯಾರ್ಥಿಗಳ ವಸತಿ ನಿಲಯಕ್ಕೆ ₹50 ಲಕ್ಷ ಅನುದಾನ ಬಿಡುಗಡೆಗೊಳಿಸುವುದಾಗಿ ಹೇಳಿದರು.

ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಮಾತನಾಡಿ, ‘ಸೊನ್ನದ ಶ್ರೀಗಳ ಸಮಾಜ ಮುಖಿ ಸೇವೆ ಅವಿಸ್ಮರಣೀಯವಾಗಿದೆ. ಸದಾ ಕಾಲ ಶ್ರೀಮಠದಲ್ಲಿ ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಈ ಭಾಗದ ಹಳ್ಳಿಗಳ ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸಿದ್ದಾರೆ’ ಎಂದು ಹೇಳಿದರು.

ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ‘ಗ್ರಾಮೀಣ ಜನ ಕಲ್ಯಾಣ ಸಂಸ್ಥೆಯ ಆವರಣದಲ್ಲಿ ನಿರ್ಮಿಸುತ್ತಿರುವ ವಿದ್ಯಾರ್ಥಿ ವಸತಿ ನಿಲಯಕ್ಕೆ ₹5 ಕೋಟಿ ಅನುದಾನ ಬಿಡುಗಡೆಗೊಳಿಸಬೇಕು. ಇದರಿಂದ ಈ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುತ್ತದೆ’ ಎಂದರು.

ಸೊನ್ನದ ಡಾ.ಶಿವಾನಂದ ಸ್ವಾಮೀಜಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಜೇರಟಗಿಯ ಮಹಾಂತ ಸ್ವಾಮೀಜಿ, ಯಡ್ರಾಮಿಯ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿದರು.

ರಾಜಶೇಖರ ಸೀರಿ, ಡಾ.ವಿಶ್ವನಾಥ ರಡ್ಡಿ, ಡಾ.ಕೆ.ಜಿ ಬಿರಾದಾರ, ಡಾ.ಸಿದ್ದು ಪಾಟೀಲ್, ರೇವಣಸಿದ್ದಪ್ಪ ಸಂಕಾಲಿ, ಹುಣಚಪ್ಪ ಬುರುಡ, ಚನ್ನಮಲ್ಲಯ್ಯ ಹಿರೇಮಠ, ಶಿವಾನಂದ ಸಾಹು ಮಾಕಾ, ಕಲ್ಯಾಣಕುಮಾರ ಗಂವ್ಹಾರ, ಸಾಹೇಬಗೌಡ ಬಿರೆದಾರ, ಮಲ್ಲಿಕಾರ್ಜುನ ಮಹಾಜನಶೆಟ್ಟಿ, ಶಿವಲಿಂಗಪ್ಪ ಮುದೋಳ, ವಿಜಯಕುಮಾರ ಕಲ್ಲಹಂಗರಗಾ, ವಿಜಯಕುಮಾರ ಬಿರೆದಾರ, ಶಿವಾನಂದ ಮುದೋಳ, ಶಿವಲಿಂಗ ಹಳ್ಳಿ, ನಿಂಗಣ್ಣಗೌಡ ಹಿರೇಗೌಡ, ನಬಿ ಬಾಗವಾನ, ಮಲ್ಲಿಕಾರ್ಜುನ ಬಿರೆದಾರ, ಗದಿಗೆಪ್ಪ ಮಾಕಾ, ರೇವಣಸಿದ್ದ ಅಕ್ಕಿ, ಶಂಕರಗೌಡ ಹಾಲಗಡ್ಲಾ, ಸಿದ್ದು ಆಂದೋಲಾ, ಮಲ್ಲಿಕಾರ್ಜುನ ಹಂಗರಗಿ, ಮನೋಜಕುಮಾರ ಪ್ರಸಾದ ಸೇವೆ ಸಲ್ಲಿಸಿದರು. ಕರಬಸಪ್ಪ ಗುಳಗಿ, ಸುರೇಶ ಮಳಲಿ, ಅಲ್ಲಾಬಕ್ಷ ಬಾಗವಾನ, ಸದಾನಂದ ಪಾಟೀಲ್, ಮಲ್ಲಿಕಾರ್ಜುನ ರಡ್ಡಿ ಉಪಸ್ಥಿತರಿದ್ದರು.

ನೇತ್ರ ಹಾಗೂ ದಂತ ತಜ್ಞರಾದ ಡಾ.ಮಂಜುಳಾ ಮಂಗಾಣೆ, ಡಾ.ದೀಕ್ಷಾ ಕಾರಬಾರಿ, ಡಾ.ಸಿದ್ಧಲಿಂಗರಡ್ಡಿ, ಡಾ.ಸಂದ್ಯಾ, ಡಾ.ಲಕ್ಷ್ಮಣ ಪೂಜಾರಿ, ಡಾ.ಮನೋಜ, ಡಾ.ಶ್ವೇತಾ ದೇವದುರ್ಗ, ಡಾ.ಅಮೃತಾ ದೇಶಪಾಂಡೆ, ಡಾ.ರೇಣುಕಾ, ಡಾ.ವಿಶ್ವನಾಥ ಬಂಗಾರಿ ಆರೋಗ್ಯ ತಪಾಸಣೆ ಶಿಬಿರದಲ್ಲಿ ಪಾಲ್ಗೊಂಡಿದ್ದರು.

೧-ಅ. ಜೇವರ್ಗಿ : ತಾಲೂಕಿನ ಸೊನ್ನದ ಶ್ರೀ ಗುರುಸಿದ್ಧ ಮಹಾಸ್ವಾಮಿಗಳವರ ೩೨ ನೇ ಪುಣ್ಯಸ್ಮರಣೆಯ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಿತು. ಜಗದ್ಗುರು ಡಾ.ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಸೊನ್ನದ ಡಾ.ಶಿವಾನಂದ ಸ್ವಾಮೀಜಿ ಜೇರಟಗಿಯ ಶ್ರೀ ಮಹಾಂತ ಸ್ವಾಮೀಜಿ ಯಡ್ರಾಮಿಯ ಸಿದ್ಧಲಿಂಗ ಸ್ವಾಮೀಜಿ ಶಾಸಕ ಡಾ.ಅಜಯಸಿಂಗ್ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ಇದ್ದರು.
೧-ಅ. ಜೇವರ್ಗಿ : ತಾಲೂಕಿನ ಸೊನ್ನದ ಶ್ರೀ ಗುರುಸಿದ್ಧ ಮಹಾಸ್ವಾಮಿಗಳವರ ೩೨ ನೇ ಪುಣ್ಯಸ್ಮರಣೆಯ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಿತು. ಜಗದ್ಗುರು ಡಾ.ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಸೊನ್ನದ ಡಾ.ಶಿವಾನಂದ ಸ್ವಾಮೀಜಿ ಜೇರಟಗಿಯ ಶ್ರೀ ಮಹಾಂತ ಸ್ವಾಮೀಜಿ ಯಡ್ರಾಮಿಯ ಸಿದ್ಧಲಿಂಗ ಸ್ವಾಮೀಜಿ ಶಾಸಕ ಡಾ.ಅಜಯಸಿಂಗ್ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT