ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಫಜಲಪುರ | ಬಸ್ ಸಂಚಾರಕ್ಕೆ ಶಾಸಕ ಚಾಲನೆ

Published 7 ಜುಲೈ 2024, 15:56 IST
Last Updated 7 ಜುಲೈ 2024, 15:56 IST
ಅಕ್ಷರ ಗಾತ್ರ

ಅಫಜಲಪುರ: ದೇವಲ ಗಾಣಗಾಪುರ ಮಾರ್ಗದಿಂದ ಬೆಂಗಳೂರಿಗೆ ಬಸ್ ಸಂಚಾರಕ್ಕೆ ಭಾನುವಾರ ಶಾಸಕ ಎಂ. ವೈ. ಪಾಟೀಲ ಅವರು ಇಲ್ಲಿನ ಬಸ್‌ ನಿಲ್ದಾಣದಲ್ಲಿ ಚಾಲನೆ ನೀಡಿದರು.

ನಂತರ ಶಾಸಕರ ಮಾತನಾಡಿ, ‘ದೇವಲಗಾಣಗಾಪುರದಿಂದ ನೇರವಾಗಿ ಬೆಂಗಳೂರಿಗೆ ಬಸ್ಸಿನ ವ್ಯವಸ್ಥೆ ಇರಲಿಲ್ಲ. ಹೀಗಾಗಿ ಆ ಭಾಗದ ಜನರಿಗೆ ತೊಂದರೆ ಆಗುತ್ತಿತ್ತು. ಅದಕ್ಕಾಗಿ ನಮ್ಮ ಬಸ್ ಡಿಪೊದಿಂದ ಬೆಂಗಳೂರಿಗೆ ಬಸ್ ವ್ಯವಸ್ಥೆ ಮಾಡಿದ್ದರಿಂದ ಪಟ್ಟಣದ ನಾಗರಿಕರಿಗೆ ಅನುಕೂಲವಾಗಲಿದೆ. ಡಿಪೊ ವ್ಯವಸ್ಥಾಪಕರು ಬೆಂಗಳೂರಿಗೆ ಹೊಸ ಬಸ್ಸುಗಳನ್ನು ಓಡಿಸಬೇಕು. ಬಸ್ ಸಂಚಾರದ ಸಮಯ ಪಾಲನೆ ಮಾಡಬೇಕು. ಇದರಿಂದ ಪ್ರಯಾಣಿಕರಿಗೆ ಬಸ್ಸಿನ ಬಗ್ಗೆ ವಿಶ್ವಾಸ ಹುಟ್ಟುತ್ತದೆ’ ಎಂದರು

ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಪೂಜಾರಿ ಹಾಗೂ ಪ್ರಧಾನ ಕಾರ್ಯದರ್ಶಿ ಶರಣು ಕುಂಬಾರ್ ಮಾತನಾಡಿ, ‘ಪಟ್ಟಣದ ಜನರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ವ್ಯವಹಾರ ವಹಿವಾಟು ಮತ್ತು ಆಸ್ಪತ್ರೆಗಳಿಗಾಗಿ ಮಹಾರಾಷ್ಟ್ರದ ಸೋಲಾಪುರ, ಅಕ್ಕಲಕೋಟ್ ನಗರಗಳಿಗೆ ಹೆಚ್ಚಿನ ಅವಲಂಬನೆ ಇದೆ. ಅದಕ್ಕಾಗಿ ಸೋಲಾಪುರದಿಂದ ರಾತ್ರಿ 7 ಗಂಟೆಗೆ ಬಸ್ ವ್ಯವಸ್ಥೆ ಮಾಡಬೇಕು ಎಂದರು. ಡಿಪೊ ವ್ಯವಸ್ಥಾಪಕ ಎ. ಎ. ಭೋವಿ ಮಾತನಾಡಿ, ‘ಈಗಾಗಲೇ ಮಾಶಾಳ ಮಾರ್ಗವಾಗಿ ಸೋಲಾಪುರಕ್ಕೆ ಬಸ್ ಓಡಿಸಲಾಗುತ್ತಿದೆ. ಅಂತರ ರಾಜ್ಯ ಸಮಸ್ಯೆ ಇರುವುದರಿಂದ ನಾವು ಮಹಾರಾಷ್ಟ್ರ ಸರ್ಕಾರದ ಅನುಮತಿಯನ್ನು ಪಡೆದುಕೊಳ್ಳಬೇಕಾಗುತ್ತದೆ’ ಎಂದು ತಿಳಿಸಿದರು.

ಮುಖಂಡರಾದ ಚಂದ್ರಶೇಖರ್ ಕರಜಗಿ, ಶಿವಾನಂದ ಗಾಡಿ ಸೌಕಾರ, ಗುರುಶಾಂತ್ ಡಾಂಗೆ, ಬಸಯ್ಯ ನಂದಿಕೋಲ, ಪ್ರವೀಣ್ ಕಲ್ಲೂರ್, ಪುರಸಭೆ ಸದಸ್ಯ ಯಮನಪ್ಪ ಬಾಸಗಿ, ನಗರ ಯೂತ್ ಕಾಂಗ್ರೆಸ್ ಘಟಕದ ಅಧ್ಯಕ್ಷ ಮಜೀದ್ ಪಟೇಲ್, ಪುರಸಭೆಯ ಮಾಜಿ ಅಧ್ಯಕ್ಷ ನಾಗಪ್ಪ ಆರೇಕರ, ಸಾರಿಗೆ ನಿಯಂತ್ರಣ ಅಧಿಕಾರಿ ಸಿದ್ದಪ್ಪ ದುಬಾರಿ , ವಿಠ್ಠಲ ಎಸ್, ದಯಾನಂದ ಹಿರೇಮಠ, ಬಸವರಾಜ ಬಳೂರ್ಗಿ, ಶಿವಾಜಿ ಮಠ, ನಬಿಲಾಲ್ ಪಟೇಲ್ ಮಾಶಾಳಕರ ಮತ್ತಿತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT