ಶನಿವಾರ, ಏಪ್ರಿಲ್ 1, 2023
25 °C

ಕೃಷಿಯಲ್ಲಿ ಆಧುನಿಕತೆ ಅಳವಡಿಸಿಕೊಳ್ಳಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜೇವರ್ಗಿ: ‘ತಾಲ್ಲೂಕಿನ ರೈತರು ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ಹೆಚ್ಚಿನ ಇಳುವರಿ ಪಡೆದುಕೊಳ್ಳಲು ಸಾಧ್ಯ’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಸವರಾಜ ಪಾಟೀಲ ನರಿಬೋಳ ಹೇಳಿದರು.

ಪಟ್ಟಣದಲ್ಲಿ ಭಾನುವಾರ ಟಾಫೆ ಕಂಪನಿಯ ಮ್ಯಾಸ್ಸೀ ಫರ್ಗೂಸನ್ ಟ್ರ್ಯಾಕ್ಟರ್ ಶೋರೂಮ್‌ ಉದ್ಘಾಟಿಸಿ ಮಾತನಾಡಿದ ಅವರು, ‘ರೈತರ ಬೆನ್ನೆಲುಬು ಎನಿಸಿಕೊಂಡಿರುವ ಎತ್ತುಗಳೊಂದಿಗೆ ಟ್ರಾಕ್ಟರ್‌ಗಳನ್ನೂ ಬಳಸಬೇಕು’ ಎಂದರು.

ದಾನೇಶ್ವರಿ ಟ್ರ್ಯಾಕ್ಟರ್ಸ ಶೋರೂಮ್‌ ಮಾಲೀಕರಾದ ಪ್ರಭುಗೌಡ ಪಾಟೀಲ, ಶೈಲಜಾ ಅಂಗಡಿ, ಟಾಫೆ ಕಂಪನಿಯ ವಿಭಾಗೀಯ ಮಾರಾಟ ವ್ಯವಸ್ಥಾಪಕ ಅವಿನಾಶ, ಕಲಬುರ್ಗಿ ವಲಯ ಮಾರಾಟ ವ್ಯವಸ್ಥಾಪಕ ಅರವಿಂದ ಜೋಶಿ, ಆದಿತ್ಯ ಅಂಗಡಿ, ಬಸವರಾಜ ಪಾಟೀಲ ನರಿಬೋಳ, ಶ್ರೀಹರ್ಷ ಅಂಗಡಿ, ಪ್ರವೀಣ ಗೌನಳ್ಳಿ, ಲಕ್ಷ್ಮೀಕಾಂತರೆಡ್ಡಿ ಇದ್ದರು. ಟ್ರ್ಯಾಕ್ಟರ್ ಖರೀದಿಸಿದ ನರಿಬೋಳ ಗ್ರಾಮದ ರೈತ ಮಲ್ಲಿಕಾರ್ಜುನ ಭಂಕೂರ ಅವರಿಗೆ ಹೊಸ ಟ್ರ್ಯಾಕ್ಟರ್ ಕೀ ನೀಡಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.