ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಮಲನಗರ | ‘ಮೊಹರಂ ಹಬ್ಬದ ಪ್ರಯುಕ್ತ ಶಾಂತಿ ಸಭೆ’

Published 7 ಜುಲೈ 2024, 16:15 IST
Last Updated 7 ಜುಲೈ 2024, 16:15 IST
ಅಕ್ಷರ ಗಾತ್ರ

ಕಮಲನಗರ: ‘ಹಿಂದೂ–ಮುಸ್ಲಿಮ್‌ ಸೌಹಾರ್ದಕ್ಕೆ ಹೆಸರಾಗಿರುವ ಮೊಹರಂ ಹಬ್ಬವನ್ನು ಎಲ್ಲರೂ ಶಾಂತಿಯುತವಾಗಿ ಆಚರಿಸಬೇಕು’ ಎಂದು ಕಮಲನಗರ ಠಾಣೆ ವೃತ್ತ ನಿರೀಕ್ಷಕ ಅಮರೆಪ್ಪ ಶಿವಬಲ್ ತಿಳಿಸಿದರು.

ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಭಾನುವಾರ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ‘ನಮ್ಮ ದೇಶದಲ್ಲಿ ಹಬ್ಬಗಳು ಭಾವೈಕ್ಯತೆಯ ಸಂಕೇತವಾಗಿವೆ. ಎಲ್ಲರೂ ಸೇರಿ ಸಮಸ್ಯೆಯಾಗದಂತೆ ಹಬ್ಬ ಆಚರಿಸಬೇಕು’ ಎಂದರು.

ಎಸ್‌ಐ ಚಂದ್ರಶೇಖರ ನೀರ್ಣೆ ಮಾತನಾಡಿ, ‘ಪಟ್ಟಣದಲ್ಲಿ ನಾಲ್ಕು ಕಡೆಗಳಲ್ಲಿ ಪೀರಗಳನ್ನು ಕೂಡಿಸುತ್ತಿದ್ದು, ಸಮಿತಿಗಳನ್ನು ರಚಿಸಿಕೊಳ್ಳಬೇಕು. ಸಮ್ಯೆಯಾದರೆ ಸಮಿತಿಯ ಸದಸ್ಯರೇ ನೇರ ಹೊಣೆಯಾಗುತ್ತಾರೆ. ಪೀರಗಳನ್ನು ದಫನ ಮಾಡುವಾಗ ನಿಮ್ಮ ಮಾರ್ಗಗಳನ್ನು ನಮಗೆ ತಿಳಿಸಬೇಕು. ತಂಟೇ ತಕರಾರು ಮಾಡದೆ ಹಬ್ಬ ಆಚರಿಸಬೇಕು’ ಎಂದು ತಿಳಿಸಿದರು.

ಪೊಲೀಸ್ ಸಿಬ್ಬಂದಿ, ಶಿವಕುಮಾರ ಝುಲ್ಫೆ, ಗ್ರಾ.ಪಂ. ಮಾಜಿ ಅಧ್ಯಕ್ಷ ಶಿವಕುಮಾರ ಝುಲ್ಫೆ, ಶೇರು ಬಾಗವಾನ, ಗಿರಿರಾಜ ಚಿಮ್ಮಾ, ಕಾಶಿನಾಥ ಶಿವರಾಜ ಪಾಟೀಲ, ಶಬ್ಬೀರ್‌ ಖುರೇಷಿ, ಸಂಗಪ್ಪ ಜಿರೋಬೆ, ಶಿವರಾಜ ಕೋಟೆ, ರಾಮ ಬಿರಾದಾರ, ಬಸೀರಸಾಬ ಶೇಖ, ಸಮೀರ ಖುರೇಶಿ, ಜುಬೇರ ಖುರೇಶಿ, ಯಾಸಿನ, ಮೇಹಬೂಬಸಾಬ, ಮೇಹಮೂದಖಾನ, ಖಲೀಲ ಶೇಖ, ಶಹೀದ ಖಾನ, ಜಾವೇದ ಖುರೇಶಿ, ಮಜೀದ, ಹರಿಬಾಜಿ ಶಿಂಧೆ, ಕೃಷ್ಣಾ ಕಾಳೆ ಹಾಗೂ ವಿವಿಧ ಗ್ರಾಮದ ಮುಖಂಡರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT