ಬುಧವಾರ, 27 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿಯಲ್ಲಿ ಸಿನಿಮಾ ಆಡಿಷನ್ 23ಕ್ಕೆ

Published 22 ಜುಲೈ 2023, 5:44 IST
Last Updated 22 ಜುಲೈ 2023, 5:44 IST
ಅಕ್ಷರ ಗಾತ್ರ

ಕಲಬುರಗಿ: ಪ್ರೊಡಕ್ಷನ್ ನಂ.1 ಹೊಸ ಸಿನಿಮಾಕ್ಕಾಗಿ ಜುಲೈ 23ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಗರದ ಅನ್ನಪೂರ್ಣ ಕ್ರಾಸ್ ಬಳಿಯಿರುವ ಕಲಾಮಂಡಳದಲ್ಲಿ ಕಲಾವಿದರ ಆಡಿಷನ್ ನಡೆಯಲಿದೆ ಎಂದು ಪ್ರೊಡಕ್ಷನ್ ಕೋಆರ್ಡಿನೇಟರ್ ಮಹಿಪಾಲರೆಡ್ಡಿ ಸೇಡಂ ತಿಳಿಸಿದ್ದಾರೆ.

ಖ್ಯಾತ ಸಂಗೀತ ನಿರ್ದೇಶಕ, ಸಿನಿಮಾ ಗೀತೆ ರಚನೆಕಾರ ವಿ. ಮನೋಹರ್ ಅವರು ಕಲಬುರಗಿ, ಬೀದರ್, ಬಸವಕಲ್ಯಾಣ, ಸೇಡಂ, ಜೇವರ್ಗಿ ಸುತ್ತಮುತ್ತ ಹೊಸ ಸಿನಿಮಾಕ್ಕಾಗಿ ಸ್ಥಳಗಳನ್ನು ನೋಡುತ್ತಿದ್ದು, ಕಲ್ಯಾಣ ಕರ್ನಾಟಕದ ವಿಶೇಷ ಕಥಾ ಹಂದರವನ್ನು ಸಿನಿಮಾ ನಿರ್ದೇಶನ ಮಾಡಲಿದ್ದಾರೆ.

ಈ ಹಿನ್ನೆಲೆಯಲ್ಲಿ ಸ್ಥಳೀಯ ರಂಗ ಕಲಾವಿದರು ಸೇರಿದಂತೆ ಸಿನಿಮಾದಲ್ಲಿ ಅಭಿನಯಿಸಲು ಅಪೇಕ್ಷಿಸುವ ಕಲಾವಿದರನ್ನು ಭೇಟಿ ಮಾಡಿ ಪಾತ್ರಕ್ಕೆ ಆಯ್ಕೆ ಮಾಡಲಿದ್ದಾರೆ. ಆಸಕ್ತ ಕಲಾವಿದರು ಆಡಿಷನ್‌ನಲ್ಲಿ ಭಾಗವಹಿಸಿ ಚಿತ್ರ ತಂಡವನ್ನು ನೇರವಾಗಿ ಭೇಟಿಯಾಗಿ ತಮ್ಮ ನಟನೆಯ ವಿವರಗಳನ್ನು ನೀಡಬಹುದು. ವಿ.ಮನೋಹರ್ ಜೊತೆಗೆ, ಚಿತ್ರಕಥಾ ವಿಭಾಗದ ಮಂಜು ಪಾಂಡವಪುರ ನೇತೃತ್ವದಲ್ಲಿ ಆಡಿಷನ್ ನಡೆಯಲಿದ್ದು, ಈ ಭಾಗದ ಕಲಾವಿದರು ಸದುಪಯೋಗ ಪಡೆದುಕೊಳ್ಳುವಂತೆ ಮಹಿಪಾಲರೆಡ್ಡಿ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT