ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಂಚೋಳಿ | ಎತ್ತಿಪೊತೆಯಲ್ಲಿ ಯುವಕನ ಕೊಲೆ: ಶವ ಶೋಧ

Published : 2 ಅಕ್ಟೋಬರ್ 2024, 4:06 IST
Last Updated : 2 ಅಕ್ಟೋಬರ್ 2024, 4:06 IST
ಫಾಲೋ ಮಾಡಿ
Comments

ಚಿಂಚೋಳಿ: ತಾಲ್ಲೂಕಿನ ಪ್ರೇಕ್ಷಣಿಯ ತಾಣ ಎತ್ತಿಪೋತೆ ಜಲಪಾತದ ಬಳಿ ತೆಲಂಗಾಣದ ಯುವಕನೊಬ್ಬನನ್ನು ಕೊಲೆ ಮಾಡಿ ಶವ ತೊರೆಯಲ್ಲಿ ಬಿಸಾಕಿರುವುದು ತಡವಾಗಿ ಬೆಳಕಿಗೆ ಬಂದಿದೆ.

ತೆಲಂಗಾಣದ ಶ್ರೀಕಾಂತ ಕೊಲೆಯಾದವರು. ವಾಹನದಲ್ಲಿ ಕುಳಿತು ಐದು ಮಂದಿ ಸೇರಿ ಶ್ರೀಕಾಂತನ ಕತ್ತು ಹಿಚುಕಿ ಕೊಲೆ ಮಾಡಿ ಶವವನ್ನು ತೊರೆಯಲ್ಲಿ ಬಿಸಾಕಿದ್ದಾರೆ. ಆದರೆ ಈವರೆಗೂ ಶವ ಪತ್ತೆಯಾಗಿಲ್ಲ.

ಪ್ರಕರಣ ಸಂಬಂಧ ಶಂಕಿತ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಕೊಲೆಮಾಡಿ ಶವ ತೊರೆಯಲ್ಲಿ ಬಿಸಾಕಿರುವುದಾಗಿ ಬಾಯಿಬಿಟ್ಟಿದ್ದಾರೆ. ಬಂಧಿತ ಆರೋಪಿಗಳೊಂದಿಗೆ ದಾರೂರು ವೃತ್ತ ಸರ್ಕಲ್‌ ಇನ್‌ಸ್ಪೆಕ್ಟರ್ ಭೀಮಕುಮಾರ ನೇತೃತ್ವದಲ್ಲಿ ಕೊಟಪಳ್ಳಿ ಪೊಲೀಸ್ ಠಾಣೆ ಸಿಬ್ಬಂದಿ ಮತ್ತು ಕರ್ನಾಟಕದ ಕುಂಚಾವರಂ ಠಾಣೆಯ ಸಬ್ ಇನ್‌ಸ್ಪೆಕ್ಟರ್ ವೆಂಕಟೇಶ ನಾಯಕ ಸ್ಥಳಕ್ಕೆ ಭೇಟಿ ನೀಡಿ ಪಂಚನಾಮೆ ನಡೆಸಿದರು.

ಶ್ರೀಕಾಂತ ಕಾಣೆಯಾಗಿದ್ದಾನೆ ಎಂದು ಆತನ ಕುಟುಂಬದವರು ಸೆ.25ರಂದು ಕೊಟಪಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT