ಬುಧವಾರ, ಫೆಬ್ರವರಿ 26, 2020
19 °C

ನಾಡಕಚೇರಿಗೆ ಹೊಸ ಕಟ್ಟಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಹಾಬಾದ್‌: ‘ನಗರದ ಹಳೆ ನಾಡಕಚೇರಿಯ ಸ್ಥಳದಲ್ಲಿ ಹೊಸ ಕಟ್ಟಡ ನಿರ್ಮಿಸಲು ₹20ಲಕ್ಷ ಅನುದಾನ ಬಂದಿದ್ದು, ಕೆಲವೇ ದಿನಗಳಲ್ಲಿ ಕಟ್ಟಡ ಸಾರ್ವಜನಿಕರ ಸೇವೆಗೆ ಸಿದ್ಧವಾಗಲಿದೆ’ ಎಂದು ಕಲಬುರ್ಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡ ಶುಕ್ರವಾರ ಇಲ್ಲಿ ಹೇಳಿದರು.

ನಾಡಕಚೇರಿಯ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೇರವೇರಿಸಿ ಅವರು ಮಾತನಾಡಿದರು.

‘ನೂತನ ಕಟ್ಟಡದಿಂದ ಜನರಿಗೆ ಅನುಕೂಲ ಆಗಲಿದೆ. ಉಳಿದ ಖಾಲಿ ಸ್ಥಳದಲ್ಲಿ ಇನ್ನೂ ಕಟ್ಟಡ ಬೇಕಾದರೆ ಅನುದಾನದ ಕೊರತೆಯಿಲ್ಲ. ಕೆ.ಕೆ.ಆರ್‌.ಡಿ.ಬಿಯಿಂದ ಇನ್ನಷ್ಟು ಅನುದಾನ ನೀಡಲಾಗುವುದು. ಗುತ್ತಿಗೆ ಹಿಡಿದ ನಿರ್ಮಿತಿ ಕೇಂದ್ರದವರು  ಆದಷ್ಟು ಬೇಗನೆ ಕಟ್ಟಡ ನಿರ್ಮಿಸಬೇಕು. ಇಲ್ಲದಿದ್ದರೇ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ಗುತ್ತಿಗೆದಾರರಿಗೆ ತಾಕೀತು ಮಾಡಿದರು.

ತಹಶೀಲ್ದಾರ್‌ ಸುರೇಶ ವರ್ಮಾ, ನಗರಸಭೆ ಸದಸ್ಯರಾದ ಡಾ.ಅಹ್ಮದ ಪಟೇಲ್, ರವಿ ರಾಠೋಡ, ಕಸಾಪ ನಗರ ಅಧ್ಯಕ್ಷ ಮಲ್ಲಿಕಾರ್ಜುನ ಪೂಜಾರಿ, ಕನಕಪ್ಪ ದಂಡಗುಲಕರ್, ಅಣವೀರ ಇಂಗಿನಶೆಟ್ಟಿ, ಬಸವರಾಜ ಮದ್ರಕಿ, ಬಸವರಾಜ ಬಿರಾದಾರ, ನಾಗರಾಜ ಮೇಲಗಿರಿ, ಅಣ್ಣಪ್ಪ ದಸ್ತಾಪೂರ, ಶರಣು ವಸ್ತ್ರದ್, ಸದಾನಂದ ಕುಂಬಾರ, ಭೀಮಯ್ಯ ಗುತ್ತೆದಾರ,ಬಾಬಾ,ಭಾಗಿರಥಿ ಗುನ್ನಾಪೂರ,ಮಂಜುನಾಥ ಪೂಜಾರಿ, ಅನೀಲ ದತ್ತ,ಬಾಬಾಸಾಬ, ಅವಿನಾಶ ಕೊಂಡಯ್ಯ, ಶಂಕರ ಅಳೋಳ್ಳಿ, ಮಲ್ಲಿಕಾರ್ಜುನ ಕಟ್ಟಿ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)