ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗರಾಳ ಜಲಾಶಯ ಭರ್ತಿ

Last Updated 8 ಅಕ್ಟೋಬರ್ 2019, 14:17 IST
ಅಕ್ಷರ ಗಾತ್ರ

ಚಿಂಚೋಳಿ: ತಾಲ್ಲೂಕಿನ ಕೆಳದಂಡೆ ಮುಲ್ಲಾಮಾರಿ ಯೋಜನೆಯ ಗರಿಷ್ಠ 491 ಮೀಟರ್‌ ಎತ್ತರದ ನಾಗರಾಳ ಜಲಾಶಯ ಭಾನುವಾರ ಮಧ್ಯರಾತ್ರಿ ಭರ್ತಿಯಾಗಿದ್ದು ಹೆಚ್ಚುವರಿ ನೀರನ್ನು ನದಿಗೆ ಬಿಡಲಾಗಿದೆ.

ನದಿಗೆ 4500 ಕ್ಯೂಸೆಕ್ ನೀರು ಬಿಡಲಾಗಿದೆ. ಪ್ರಸ್ತುತ ಜಲಾಶಯದಲ್ಲಿ ನೀರಿನ ಮಟ್ಟವನ್ನು 490.60 ಮೀಟರ್‌ ಕಾಪಾಡಲಾಗಿದೆ ಎಂದು ಸಹಾಯಕ ಎಂಜಿನಿಯರ್‌ ಹಣಮಂತ ತಿಳಿಸಿದ್ದಾರೆ.

ಈಗ ಜಲಾಶಯಕ್ಕೆ 161 ಕ್ಯೂಸೆಕ್‌ ಒಳಹರಿವಿದೆ. ಸಂಪೂರ್ಣ ಖಾಲಿಯಾಗಿದ್ದ ಜಲಾಶಯ ಭರ್ತಿಯಾಗಿರುವುದು ಜನರಿಗೆ ಖುಷಿ ನೀಡಿದೆ. ನದಿ ದಂಡೆಯ 25ಕ್ಕೂ ಹೆಚ್ಚು ಗ್ರಾಮಗಳು, ಸೇಡಂ ನಗರ, ಚಿಂಚೋಳಿ– ಚಂದಾಪುರ ಅವಳಿ ಪಟ್ಟಣ ಮತ್ತು ಬಹುಗ್ರಾಮ ಯೋಜನೆ ಮೂಲಕ ಕುಡಿಯುವ ನೀರು ಪೂರೈಕೆಯಾಗುವ 15ಕ್ಕೂ ಹೆಚ್ಚು ಗ್ರಾಮಗಳ ನೀರಿನ ಬವಣೆ ನೀಗಲಿದೆ.

ಸೌಂದರ್ಯ ಹೆಚ್ಚಳ: ಜಲಾಶಯದ ಗೇಟ್‌ನ ಮುಂಭಾಗವು ಕಲ್ಲು ಬಂಡೆಗಳಿಂದ ಕೂಡಿತ್ತು. ಡಾ.ಉಮೇಶ ಜಾಧವ ಶಾಸಕರಾಗಿದ್ದಾಗ ₹36 ಕೋಟಿ ವೆಚ್ಚದಲ್ಲಿ ಗೇಟ್‌ಗಳ ಮುಂಭಾಗದಲ್ಲಿ ಸಿಮೆಂಟ್‌ ಕಾಂಕ್ರೀಟ್‌ ಬೆಡ್‌ ಹಾಕಿಸಿದ್ದರಿಂದ ಈಗ ಜಲಾಶಯದ ಮುಂಭಾಗಲ್ಲಿ ನೀರು ಹರಿಯುವುದು ಕಣ್ಣಿಗೆ ಹಬ್ಬ ಉಟುಮಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT