ಶುಕ್ರವಾರ, ಮೇ 27, 2022
30 °C
ಜೇವರ್ಗಿ; ನಾಟಕ ಪ್ರದರ್ಶನ

‘ನಾಟಕಗಳಿಂದ ಬದುಕಿನ ತಿರುಳು ಅರ್ಥ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜೇವರ್ಗಿ: ‘ನಾಟಕಗಳಿಂದ ಬದುಕಿನ ತಿರುಳು ಅರಿತುಕೊಳ್ಳಲು ಸಾಧ್ಯ. ಆ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ ಜಾತ್ರೆ, ಹಬ್ಬ ಹರಿದಿನಗಳಲ್ಲಿ ಹಮ್ಮಿಕೊಳ್ಳುವ ಗ್ರಾಮೀಣ ಕಲೆಗಳಾದ ನಾಟಕ ಮತ್ತು ಬಯಲಾಟಗಳನ್ನು ವೀಕ್ಷಣೆ ಮಾಡುವ ಮೂಲಕ ಸನ್ಮಾರ್ಗದ ದಾರಿ ಹಿಡಿಯುವುದು ಅವಶ್ಯಕ’ ಎಂದು ಜೇವರ್ಗಿ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಸಂಗಮೇಶ ಅಂಗಡಿ ಹೇಳಿದರು.

ಪಟ್ಟಣದ ಸರ್ಕಾರಿ ಕನ್ಯಾ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶುಕ್ರವಾರ ಬಸವಕೇಂದ್ರ ತಾಲ್ಲೂಕು ಘಟಕದ ವತಿಯಿಂದ ಬಸವ ಜಯಂತಿ ಹಾಗೂ ಬಸವಕೇಂದ್ರ ಮಹಿಳಾ ಘಟಕದ 2 ನೇ ವಾರ್ಷಿಕೋತ್ಸವದ ನಿಮಿತ್ತ ಆಯೋಜಿಸಿದ್ದ ಚಿತ್ರದುರ್ಗದ ಜಮುರಾ ಕಲಾಲೋಕ ಕಲಾವಿದರಿಂದ ನಡೆದ ‘ಅವಿರಳಜ್ಞಾನಿ ಚನ್ನಬಸವಣ್ಣ’ ಎಂಬ ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.

ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಗಳ ಜನ್ಮದಿನಾಚರಣೆ ಆಚರಿಸಲಾಯಿತು.

ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಬಸವ ಕೇಂದ್ರ ತಾಲ್ಲೂಕು ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರಿಗೆ ಬಹುಮಾನ ನೀಡಿ ಸತ್ಕರಿಸಲಾಯಿತು.

ಶರಣಬಸವ ಕಲ್ಲಾ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸಿದ್ದು ಪಾಟೀಲ, ಪುರಸಭೆ ಮುಖ್ಯಾಧಿಕಾರಿ ಶರಣಯ್ಯಸ್ವಾಮಿ ಆಗಮಿಸಿದ್ದರು.

ಶಿವನಗೌಡ ಪಾಟೀಲ ಹಂಗರಗಿ, ರಾಜೇಶ್ವರಿ ಪಾಟೀಲ, ಷಣ್ಮುಖಪ್ಪ ಹಿರೇಗೌಡ, ನೀಲಕಂಠ ಹಳಿಮನಿ, ರಾಜಶೇಖರಗೌಡ ಜೈನಾಪೂರ, ಸಂಗಣ್ಣಗೌಡ ಪಾಟೀಲ ಗುಳ್ಯಾಳ, ಬಾಪುಗೌಡ ಬಿರಾಳ, ಮಹಾಂತ ಸಾಹು ಹರವಾಳ, ನೀಲಕಂಠ ಅವಂಟಿ, ಗುರುಗೌಡ ಮಾಲಿಪಾಟೀಲ, ಸಿದ್ದು ಯಂಕಂಚಿ, ವಿಜಯಕುಮಾರ ಪಾಟೀಲ ಸೇಡಂ, ಚಂದ್ರಶೇಖರ ತುಂಬಗಿ, ಶ್ರೀಹರಿ ಕರಕಿಹಳ್ಳಿ, ದಯಾನಂದ ಡೂಗನಕರ್, ಸದಾನಂದ ಪಾಟೀಲ, ಸುರೇಶ ಸಾಸಾಬಾಳ, ಅಖಂಡೆಪ್ಪ ಕಲ್ಲಾ, ಆನಂದ ಮಹೇಂದ್ರಕರ್, ಬಸವರಾಜ ಹಿಪ್ಪರಗಿ, ಲಕ್ಷ್ಮಿಕಾಂತ ನಾಗರವತ್, ನಿಂಗಣ್ಣ ಹಳಿಮನಿ, ರಾಮಣ್ಣ ತೊನ್ಸಳ್ಳಿಕರ್, ವೀರಣ್ಣ ಭೂತಪೂರ, ಮಹಾನಂದ ಹಿರೇಗೌಡ ವಿಜಯಲಕ್ಷ್ಮಿ ಪಾಟೀಲ, ರಾಜೇಶ್ವರಿ ಹಿರೇಗೌಡ, ಸದಾನಂದ ಪಾಟೀಲ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.