ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ | ರಸ್ತೆ ಸುರಕ್ಷತೆ: ಕೆಕೆಆರ್‌ಟಿಸಿಗೆ ರಾಷ್ಟ್ರೀಯ ಪ್ರಶಸ್ತಿ

Published 2 ಮಾರ್ಚ್ 2024, 16:07 IST
Last Updated 2 ಮಾರ್ಚ್ 2024, 16:07 IST
ಅಕ್ಷರ ಗಾತ್ರ

ಕಲಬುರಗಿ: ರಸ್ತೆ ಸುರಕ್ಷತಾ ಉಪಕ್ರಮ ಅನುಷ್ಠಾನಗೊಳಿಸಿರುವುದಕ್ಕೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ ತಿಳಿಸಿದ್ದಾರೆ.

ನಿಗಮದ ಸಂಚಾರಿ ತರಬೇತಿ ವಾಹನವನ್ನು ಘಟಕಗಳಿಗೆ ತೆಗೆದುಕೊಂಡು ಹೋಗಿ ಚಾಲಕರ ತರಬೇತಿಗೆ ಅವಕಾಶ ಕಲ್ಪಿಸಲು ತೆಗೆದುಕೊಂಡ ಉಪಕ್ರಮಕ್ಕೆ (Initiatives) ರಾಷ್ಟ್ರೀಯ ರಸ್ತೆ ಸಾರಿಗೆಗಳ ನಿಗಮದ ಒಕ್ಕೂಟವು (ಎಎಸ್‌ಆರ್‌ಟಿಯು) ರಾಷ್ಟ್ರಮಟ್ಟದ ‘ಬೆಸ್ಟ್‌ ರೋಡ್‌ ಸೇಫ್ಟಿ ಪ್ರಾಕ್ಟೀಸಸ್‌’ ವಿಭಾಗದಡಿ ಪ್ರಥಮ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಈ ಪ್ರಶಸ್ತಿಯನ್ನು ಮಾರ್ಚ್‌ 15ರಂದು ನವದೆಹಲಿಯಲ್ಲಿ ನಡೆಯಲಿರುವ ರಸ್ತೆ ಸಾರಿಗೆ ನಿಗಮಗಳ ಒಕ್ಕೂಟದ 64ನೇ ವಾರ್ಷಿಕ ಸಮಾವೇಶದಲ್ಲಿ ಪ್ರದಾನ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಪ್ರಯಾಣಿಕರಿಗೆ ವ್ಯವಸ್ಥಿತ ಮತ್ತು ಸುರಕ್ಷಿತ ಬಸ್ ಸೇವೆ ಒದಗಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. 2022–23ನೇ ಸಾಲಿನಲ್ಲಿ ಜಿಲ್ಲಾಡಳಿತದಿಂದ ಹೈಟೆಕ್ ಮಾದರಿಯ ಸಂಚಾರಿ ತರಬೇತಿ ವಾಹನ (ಮೊಬೈಲ್‌ ಕಾನ್ಫರೆನ್ಸ್‌ ಟ್ರೇನಿಂಗ್‌ ಬಸ್‌) ಪಡೆದುಕೊಂಡು ಈ ವಾಹನದಲ್ಲಿ ಚಾಲಕರಿಗೆ ರಸ್ತೆ ಸುರಕ್ಷತೆ ನಿಯಮಗಳ ಕುರಿತು ತರಬೇತಿ ನೀಡುವುದಕ್ಕಾಗಿ ಸಿದ್ಧಪಡಿಸಲಾಗಿದೆ. ಈ ವಾಹನವನ್ನು ನಿಗಮದ 9 ವಿಭಾಗಗಳ ವ್ಯಾಪ್ತಿಯ 52 ಘಟಕಗಳಿಗೆ ತೆಗೆದುಕೊಂಡು ಹೋಗಿ ತರಬೇತಿಯನ್ನು ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.

ತರಬೇತಿ ವಾಹನದ ವೈಶಿಷ್ಟ್ಯ: ಬಸ್‌ನಲ್ಲಿ 16 ಆಸನಗಳಿದ್ದು, ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆ ಇದೆ. ಎಲ್‌ಇಡಿ ಸ್ಕ್ರೀನ್ ಹಾಗೂ ಆಡಿಯೊ ಸಿಸ್ಟಮ್ ವ್ಯವಸ್ಥೆ ಇರುತ್ತದೆ. ಈ ವಾಹನವನ್ನು ಘಟಕಗಳಿಗೆ ತೆಗೆದುಕೊಂಡು ಹೋಗಿ 2022–23ನೇ ಸಾಲಿನಲ್ಲಿ ಒಟ್ಟು 6,583 ಚಾಲಕರಿಗೆ ತರಬೇತಿ ನೀಡಲಾಗಿದೆ. ಇದರಿಂದ ನಿಗಮಕ್ಕೆ ಸರಾಸರಿ ₹2 ಕೋಟಿಯಷ್ಟು ವೆಚ್ಚದಲ್ಲಿ ಉಳಿತಾಯವಾಗಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ ವಿವರಿಸಿದ್ದಾರೆ.

ಎಂ. ರಾಚಪ್ಪ
ಎಂ. ರಾಚಪ್ಪ

Quote - ನಿಗಮಕ್ಕೆ ಪ್ರಶಸ್ತಿ ಬರಲು ಸಾರಿಗೆ ಸಚಿವರು ಹಾಗೂ ನಿಗಮದ ಅಧ್ಯಕ್ಷ ರಾಮಲಿಂಗಾರೆಡ್ಡಿ ಅವರ ಮಾರ್ಗದರ್ಶನ ನಿಗಮದ ಎಲ್ಲ ಸಿಬ್ಬಂದಿ ಹಾಗೂ ಅಧಿಕಾರಿಗಳ ಸಂಯೋಜಿತ ಯೋಜನೆ ಮತ್ತು ಪರಿಶ್ರಮ ಕಾರಣ ಎಂ.ರಾಚಪ್ಪ ವ್ಯವಸ್ಥಾಪಕ ನಿರ್ದೇಶಕ ಕೆಕೆಆರ್‌ಟಿಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT